ಬೆಂಗಳೂರು :2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 12 ವರ್ಷಗಳ ಬಳಿಕ ಬಂಧನಕ್ಕೆ ಒಳಗಾಗಿರುವ ಶಂಕಿತ ಶೋಯೆಬ್ ಅಲಿಯಾಸ್ ಯಾಜ್ ಪಾಪಿಂಚರಿಯನ್ನು ಮಂಗಳವಾರ ಉಗ್ರ ನಿಗ್ರಹ ಪಡೆ(ಎಟಿಎಸ್) ನಗರಕ್ಕೆ ಕರೆತಂದಿದೆ.
ಸರಣಿ ಸ್ಫೋಟ ಪ್ರಕರಣದ ಬಳಿಕ ಶೋಯೆಬ್, ಸೌದಿ ಅರೇಬಿಯಾಗೆ ಹೋಗಿ ತಲೆಮರೆಸಿಕೊಂಡಿದ್ದ. ಸೌದಿ ಅರೇಬಿಯಾದಲ್ಲಿ ಅಪರಾಧ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಶಿಕ್ಷೆಗೆ ಗುರಿಯಾದ ವಿಷಯ ತಿಳಿದ ಬೆಂಗಳೂರು ಪೊಲೀಸರು, ಕೇಂದ್ರ ಸರ್ಕಾರದ ಸಹಾಯದಿಂದ ಶೋಯೆಬ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದ್ದರು. ಶಿಕ್ಷೆ ಮುಗಿದ ಹಿನ್ನೆಲೆಯಲ್ಲಿ ಶೋಯೆಬ್‌ನನ್ನು ಸೌದಿಯಿಂದ ಗಡಿಪಾರು ಮಾಡಿದ್ದರು. ವಿಷಯ ತಿಳಿದ ಕೇಂದ್ರ ಭದ್ರತಾ ಪಡೆಗಳು ಶಂಕಿತನನ್ನು ಸೋಮವಾರ ಕರೆತಂದು ಬೆಂಗಳೂರು ಎಟಿಎಸ್‌ಗೆ ವಹಿಸಿತ್ತು. ಎಟಿಎಸ್ ಮುಖ್ಯಸ್ಥ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಶಂಕಿತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದೆ.
ಇದನ್ನೂ ಓದಿ:ಕೇರಳಕ್ಕೆ ತೆರಳಿದ ಶಂಕಿತ ಉಗ್ರ ಮದನಿ
ಸ್ಫೋಟಕ ಖರೀದಿದಾರ:ಕೇರಳ ಮೂಲದ ಶೋಯೆಬ್, ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬೆಂಗಳೂರಿಗೆ ಬಂದು ಯಾವ ಸ್ಥಳದಲ್ಲಿ ಬಾಂಬ್ ಅಳವಡಿಸಬೇಕೆಂದು ಸ್ಥಳ ಗುರುತು ಮಾಡಿ ರೇಖಾಚಿತ್ರಗಳನ್ನು ಸಿದ್ಧಪಡಿಸಿಕೊಂಡು ಹೋಗಿದ್ದ. ಇದಾದ ಮೇಲೆ ಬಾಂಬ್ ತಯಾರಿಕೆಗೆ ಬೇಕಾಗಿದ್ದ ಸ್ಫೋಟಕದ ಬಿಡಿಭಾಗಗಳನ್ನು ಖರೀದಿಸಿ ತನ್ನ ಗ್ಯಾಂಗ್‌ಗೆ ತಲುಪಿಸಿದ್ದ. ಅಲ್ಲದೆ, ಸರಣಿ ಸ್ಫೋಟದ ಬಗ್ಗೆ ನಡೆದ ಗೌಪ್ಯ ಸಭೆಗಳಲ್ಲಿ ಶೋಯೆಬ್ ಭಾಗವಹಿಸಿದ್ದ. ಎ1 ಶಂಕಿತನ ಜತೆ ನೇರ ಸಂಪರ್ಕದಲ್ಲಿದ್ದ ಶೋಯೆಬ್, ತನ್ನ ಸರಚರರ ಜತೆ ಬೆಂಗಳೂರಿಗೆ ಬಂದು ಜೀವಂತ ಬಾಂಬ್‌ಗಳನ್ನು ಸಾಗಾಟ ನಡೆಸಿ 9 ಕಡೆಗಳಲ್ಲಿ ಅಳವಡಿಸಿದ್ದ ಆರೋಪ ಈತನ ಮೇಲಿದೆ. ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮತ್ತಷ್ಟು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದಾಗಿ ಎಟಿಎಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ 2008ರ ಸರಣಿ ಸ್ಫೋಟದ ಆರೋಪಿ ಶೋಯಬ್​ನನ್ನು ಬೆಂಗಳೂರಿಗೆ ಕರೆ ತಂದ ಎಟಿಸೆಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
