ಶಿವಮೊಗ್ಗ:ಇತ್ತೀಚೆಗಷ್ಟೇ ಬಂಧನಕ್ಕೆ ಒಳಗಾಗಿರುವ ಶಂಕಿತ ಉಗ್ರ ಮಾಜ್​ ಎಂಬಾತನ ತಂದೆ ಮುನೀರ್ ಅಹಮದ್​ (57) ನಿಧನರಾದರು. ಮಂಗಳೂರಿನ ಫಾದರ್​ ಮುಲ್ಲಾ ಆಸ್ಪತ್ರೆಯಲ್ಲಿ ಮುನೀರ್​ ಅಹಮದ್​ ಕೊನೆಯುಸಿರೆಳೆದಿದ್ದಾರೆ.
ತೀರ್ಥಹಳ್ಳಿ ಮೂಲದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು‌. ಹೃದಯಾಘಾತಕ್ಕೀಡಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿದ್ದಾರೆ.
ಮಕ್ಕಳ ಶಿಕ್ಷಣದ ಉದ್ದೇಶದಿಂದ ಮುನೀರ್ ಮಂಗಳೂರಿನಲ್ಲಿ ನೆಲೆಸಿದ್ದರು. ಆದರೆ ತಮ್ಮ ಮಗ ಮಾಜ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ನೊಂದಿದ್ದ ಅವರು, ಅದೇ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿರಬಹುದು ಎನ್ನಲಾಗುತ್ತಿದೆ.
ಮುನೀರ್ ಅಹಮದ್​ ತೀರ್ಥಹಳ್ಳಿಯ ಪ್ರತಿಷ್ಠಿತ ಕುಟುಂಬದವರಾಗಿದ್ದು, ಇವರ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು. ತೀರ್ಥಹಳ್ಳಿಯಲ್ಲಿ ಹೋಲ್​ಸೇಲ್​ ಮೀನು ವ್ಯಾಪಾರಿಯಾಗಿದ್ದ ಮುನೀರ್, ಮಂಗಳೂರಿನಲ್ಲೂ ವ್ಯವಹಾರ ಮುಂದುವರಿಸಿದ್ದರು. ನಾಳೆ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಶಂಕಿತ ಉಗ್ರ ಮಾಜ್​ನನ್ನು ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸಿಗರಿಗೆ ಕಾನೂನು ಸಂಕಷ್ಟ?; ಪೇಸಿಎಂ ಪೋಸ್ಟರ್​ನಲ್ಲಿ ಫೋಟೋ, ಕೋರ್ಟ್​ ಮೆಟ್ಟಿಲೇರಲಿರುವ ನಟ..
ನಟ ಅಜಯ್​ ದೇವಗನ್​ ವಿರುದ್ಧ ಪೊಲೀಸ್​ಗೆ ದೂರು, ಹಿಂದೂಗಳ ಭಾವನೆಗೆ ಧಕ್ಕೆ ಆರೋಪ..
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:13 + 18 =
Remember me
