ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನ ಇದೀಗ ವ್ಯಕ್ತವಾಗ ತೊಡಗಿದೆ. ವ್ಯವಸ್ಥಿತ ರೀತಿಯಲ್ಲಿ ಸಂಚು ರೂಪಿಸಿ ದಾಂಧಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಗಲಭೆಯನ್ನು ತಹಬದಿಗೆ ತರಲು ಯತ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ವಾಹನಗಳನ್ನು ಜಖಂ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವಾಹನಗಳು ಬರುತ್ತಿದ್ದಂತೆಯೇ ಕಿಡಿಗೇಡಿಗಳು ರಸ್ತೆಗಳಿಗೆ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ.
ಡಿಜೆ ಹಳ್ಳಿ ಸುತ್ತಮುತ್ತ ಚಿಕ್ಕ-ಚಿಕ್ಕ ರಸ್ತೆಗಳು ಇರುವುದರಿಂದ ತಕ್ಷಣಕ್ಕೆ ಅಲ್ಲಿಂದ ವಾಹನಗಳು ಮುಂದಕ್ಕೆ ಚಲಿಸುವುದು ತುಸು ಕಷ್ಟ. ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡ ಕಿಡಡಿಗೇಡಿಗಳು ಪೊಲೀಸ್​ ವಾಹನಗಳಿಗೆ ಅಡ್ಡಿಪಡಿಸಿದ್ದಲ್ಲದೆ, ಸ್ಥಳದಲ್ಲಿ ಇತರೆ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ರು ಆರೋಪಿಗಳು ಕ್ಯಾರೆ ಎಂದಿಲ್ಲ. ಬದಲಾಗಿ ಕಲ್ಲು, ದೊಣ್ಣೆ ಹಾಗೂ ಕಬ್ಬಿಣದ ರಾಡುಗಳನ್ನು ಬಳಸಿ ವಾಹನಗಳ ಜಖಂ ಗೊಳಿಸಿದ್ದಾರೆ. ಪೊಲೀಸರ ಕಣ್ಣೆದುರಲ್ಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಘಟನೆಯ ವೇಳೆ ಕೆಲ ದುಷ್ಕರ್ಮಿಗಳು ಗಾಂಜಾ ಮತ್ತಿನಲ್ಲಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಡಿಜೆ ಹಳ್ಳಿ ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಾಗಿದೆ. ಅಲ್ಲದೆ ಹೊರಗಿನಿಂದ ಬಂದು ಗಲಭೆ ಮಾಡಿರುವ ಶಂಕೆಯು ವ್ಯಕ್ತವಾಗಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಗೊಗರೆದರು ಬಿಡದ ಗಲಭೆಕೋರರುಗಲಭೆಕೋರರ ಕ್ರೌರ್ಯ ಅದೆಷ್ಟರ ಮಟ್ಟಿಗೆ ಇತ್ತೆಂದ್ರೆ ಅದನ್ನು ಊಹಿಸಿಕೊಳ್ಳಲು ಸಾದ್ಯವಿಲ್ಲ. ತಡರಾತ್ರಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ ಮೇಲೆ ಕಬ್ಬಿಣದ ರಾಡ್​ನಿಂದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಬೇಡ ಬಿಡಿ ಎಂದು ಎಷ್ಟೇ ಗೊಗರೆದರು ದಯೆ ತೋರದೆ ಥಳಿಸಿದ್ದಾರೆ. ಸ್ಥಳದಲ್ಲೇ ಅನೇಕ ಕಿಡಿಗೇಡಿಗಳ ಬಳಿ ಮಾರಾಕಾಸ್ತ್ರಗಳು ಇದ್ದುದ್ದರಿಂದ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಲಾಗಿದೆ.
ಘಟನೆ ಹಿನ್ನೆಲೆ ಏನು?ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್​ ಬಾಮೈದನೋರ್ವ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ.(ಏಜೆನ್ಸೀಸ್​)
ಬೆಂಗಳೂರು ಗಲಭೆ ಪ್ರಕರಣ: ಗಂಟೆ ಗಂಟೆಗೂ ಹೆಚ್ಚುತ್ತಿರುವ ಆರೋಪಿಗಳು, ಡಿಜೆ ಹಳ್ಳಿಯಲ್ಲಿ ಪೊಲೀಸ್​ ಸರ್ಪಗಾವಲು

Sign in to your account
Please enter an answer in digits:fourteen − eight =
Remember me
