ತುಮಕೂರು:ಇಲ್ಲೊಂದು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ವರ್ತನೆ ಸೆರೆಯಾಗಿದೆ. ಇಂದು (ಸೆ.5)ಬೆಳಗ್ಗಿನ ಜಾವ ಈ ಮನೆ ಬಳಿಗೆ ಬಂದು ಶೂ ಬಿಚ್ಚಿಟ್ಟು, ಚಪ್ಪಲಿ ಟವೆಲ್ ಕದ್ದಿರುವ ಈತ ಕಳ್ಳನಾ ಮಳ್ಳನಾ ಎಂದು ಯೋಚಿಸುವಂತೆ ಮಾಡಿದೆ.
ತುಮಕೂರು ಜಿಲ್ಲೆಯ ಕುಣಿಗಲ್​ ಪಟ್ಟಣದ ಮಲ್ಲಾಘಟ್ಟ ಶ್ರೀನಿವಾಸ್ ಎಂಬುವರ ಮನೆ ಮುಂದೆ ಇಂದು ಬೆಳಗಿನ ಜಾವ 3.20ರ ಸುಮಾರಿಗೆ ಈ ಪ್ರಕರಣ ನಡೆದಿದೆ. ವಾರ್ಡ್ ನಂಬರ್ 2ರ ನೀಲತ್ತಹಳ್ಳಿ ಗೇಟ್ ಬಳಿ ಇರುವ ಈ ಮನೆಯ ಆವರಣದಲ್ಲಿನ ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಬೆಳಗಿನ ಜಾವ ಮನೆ ಬಳಿಗೆ ಬಂದ ಈತ ತನ್ನ ಶೂ ಬಿಚ್ಚಿ ಮನೆಯವರ ಚಪ್ಪಲಿ ಹಾಕಿಕೊಂಡಿದ್ದಾನೆ. ನಂತರ ಮನೆಯ ಹೊರಗಿದ್ದ ಪಾತ್ರೆಗಳನ್ನು ಅಲ್ಲಾಡಿಸಿ ಸದ್ದು ಕೂಡ ಮಾಡಿದ್ದಾನೆ. ಈ ಮಧ್ಯೆ ಪಾತ್ರೆಗಳ ಎತ್ತಿ ನೋಡಿ ಬಳಿಕ ಅವುಗಳನ್ನು ಅಲ್ಲೇ ಬಿಟ್ಟು ಮನೆ ಹೊರಗೆ ಇದ್ದ ಟವೆಲ್ ಹಾಕಿಕೊಂಡು ಹೋಗಿದ್ದಾನೆ. ಈತ ಕಳ್ಳನಾ ಮಳ್ಳನಾ ಎಂದು ಗೊತ್ತಾಗದ ಮನೆಯವರು ಈತನ ವರ್ತನೆ ಬಗ್ಗೆ ಅನುಮಾನ ಉಂಟಾಗಿದ್ದಾಗಿ ಹೇಳಿದ್ದಾರೆ.
ನೋಡೋಕೆ ಯಾರೋ ತಲೆಕೆಟ್ಟವ ಅನ್ನಿಸೋದು ಸಹಜ. ಆದರೆ ಆತನ ಕಾಲಲ್ಲಿದ್ದ ಶೂ ಬಿಚ್ಚಿ ಈ ಮನೆಯವರ ಚಪ್ಪಲಿ ಧರಿಸ್ತಾನೆ. ಸೈಕಲ್ ಮೇಲಿಟ್ಟಿದ್ದ ಟವೆಲ್ ತೆಗೆದುಕೊಂಡು ಹೆಗಲ ಮೇಲೆ ಹಾಕಿಕೊಳ್ತಾನೆ. ತಲೆಕೆಟ್ಟವನಿಗೆ ಇಂತಹದ್ದೇ ಬೇಕು ಅಂತೇನಿರಲ್ಲ, ಸಿಕ್ಕಿದ್ದನ್ನ ಹಾಕಿಕೊಳ್ಳಬಹುದಿತ್ತು… ಮೇಲ್ನೋಟಕ್ಕೆ ಇದೆಲ್ಲಾ ನಾಟಕ ಅನ್ನಿಸುತ್ತೆ. ಬೇರೆ ಯಾವುದೋ ದುರುದ್ದೇಶದ ಯೋಜನೆಯಲ್ಲಿ ಬಂದಿರುವ ಶಂಕೆಯನ್ನು ಮನೆಯ ಮಾಲೀಕರು ಮತ್ತು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ .
ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 8 =
Remember me
