ಗುರಿ ಪ್ರಕಾರ ಬಜೆಟ್ ಬೇಡಿಕೆ (ಕೋಟಿ ರೂ.ಗಳಲ್ಲಿ)
1. ಬಡತನ ನಿವಾರಣೆ- 472984.892. ಹಸಿವುಮುಕ್ತ- 131765.303. ಒಳ್ಳೆಯ ಆರೋಗ್ಯ ಮತ್ತು ಉತ್ತಮ ಜೀವನೋಪಾಯ- 15484.144. ಗುಣಮಟ್ಟದ ಶಿಕ್ಷಣ- 80004.255. ಲಿಂಗ ಸಮಾನತೆ- 429.306. ಶುದ್ಧ ನೀರು ಮತ್ತು ನೈರ್ಮಲ್ಯ- 1607477. ಕೈಗೆಟುಕುವ ಮತ್ತು ಸ್ವಚ್ಛ ಇಂಧನ- 1352008. ನೈಪುಣ್ಯತೆ ಮತ್ತು ಆರ್ಥಿಕತೆ ವೃದ್ಧಿ- ಉಲ್ಲೇಖವಿಲ್ಲ9. ಉದ್ಯಮ, ನಾವೀನ್ಯತೆ ಮತ್ತು ಮೂಲ ಸವಲತ್ತು- 47766.7010. ಅಸಮಾನತೆ ತಗ್ಗಿಸುವುದು- 29209.2511. ಸುಸ್ಥಿರ ನಗರ ಮತ್ತು ಸಮುದಾಯಗಳು- 30067.3612. ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ- 21587.5813. ವಾತಾವರಣಕ್ಕೆ ಅನುಗುಣವಾಗಿ ಕ್ರಮಗಳು- 1481.7614. ಜಲ ಮತ್ತು ಜೀವನ- 0.8815. ಭೂಮಿ ಮೇಲೆ ಬದುಕು- 389016. ಶಾಂತಿ, ನ್ಯಾಯ ಮತ್ತು ಸಶಕ್ತ ಸಂಸ್ಥೆಗಳು- 3854.5817. ಗುರಿ ಸಾಧನೆಗೆ ಸಹಭಾಗಿತ್ವ- ವೆಚ್ಚ ಅನ್ವಯಿಸದು
ಬೆಂಗಳೂರು :ಮುಂದಿನ ಒಂದು ದಶಕದಲ್ಲಿ ರಾಜ್ಯವು ಎಲ್ಲ ಆಯಾಮಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ವಿವಿಧ ಇಲಾಖೆಗಳು ಒಟ್ಟು 9,87,316.12 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿವೆ. ವಿಶ್ವ ಸಂಸ್ಥೆ ನೀಡಿರುವ ಗುರಿ, ರಾಷ್ಟ್ರೀಯ ನೀತಿ ಆಯೋಗದ ಸಲಹೆಯಂತೆ ಯೋಜನಾ ಇಲಾಖೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ-2030ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮುಖ 17 ಗುರಿಗಳುಳ್ಳ ಈ ಕ್ರಿಯಾ ಯೋಜನೆಯನ್ನು ಬುಧವಾರ ಲೋಕಾರ್ಪಣೆ ಮಾಡಿದರು.
ಜನರ ಜೀವನಮಟ್ಟ ಸುಧಾರಣೆಯೇ ಸುಸ್ಥಿರ ಅಭಿವೃದ್ಧಿ ತಳಹದಿಯಾಗಿದ್ದು, ವಿವಿಧ ಇಲಾಖೆಗಳ ಚಾಲ್ತಿ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಬಲ ತುಂಬಿ, ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿ ಶ್ರೇಯಾಂಕದ ಪ್ರಕಾರ, ದೇಶದಲ್ಲಿ ರಾಜ್ಯ 6ನೇ ಸ್ಥಾನದಲ್ಲಿದೆ. ಶ್ರೇಯಾಂಕದಲ್ಲಿ ಮುಂದಿರುವ ಗುಜರಾತ್, ಕೇರಳ ಇನ್ನಿತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಅಧ್ಯಯನ ಮತ್ತು ಪರಾಮಶಿಸಿ ರಾಜ್ಯದ 2030ರ ಮುನ್ನೋಟ ಸಿದ್ಧಪಡಿಸಲಾಗಿದೆ.
ಬಡತನ ನಿವಾರಣೆ, ಹಸಿವುಮುಕ್ತ ರಾಜ್ಯ ಕಟ್ಟುವ ಸಂಕಲ್ಪದ ಜತೆಗೆ ಪ್ರಾದೇಶಿಕ ಅಸಮಾನತೆ, ಲಿಂಗ ತಾರತಮ್ಯ ನಿವಾರಣೆ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕೌಶಲಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮ, ನಾವೀನ್ಯತೆ, ಮೂಲ ಸವಲತ್ತು, ಸ್ವಚ್ಛ ಪರಿಸರ, ಇಂಧನ, ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಜಲ ಹಾಗೂ ಭೂಮಿ ಸಂರಕ್ಷಣೆ, ವಾತಾವರಣಕ್ಕೆ ತಕ್ಕುನಾದ ಕ್ರಮಗಳ ಮೇಲೆ ಬೆಳಕು ಚೆಲ್ಲಿದೆ.
ಸಮಿತಿಗಳ ರಚನೆ:ಉದ್ದೇಶಿತ ಗುರಿ ನಿಗದಿತ 10 ವರ್ಷಗಳ ಅವಧಿಯಲ್ಲಿ ಸಾಧಿಸಲೆಂದು 17 ಗುರಿಗಳಿಗೆ ಪ್ರತ್ಯೇಕವಾಗಿ ನಿವೃತ್ತ ಐಎಎಸ್/ ಐಎಫ್​ಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಸೂಕ್ತ ತಾಂತ್ರಿಕ ಬೆಂಬಲ ಒದಗಿಸಲು ನಿರ್ಧರಿಸಲಾಗಿದೆ. ಅನುಷ್ಠಾನದ ಮೇಲ್ವಿಚಾರಣೆಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಹಾಗೂ ಕಾಲಕಾಲಕ್ಕೆ ಪ್ರಗತಿ ಪರಾಮಶಿಸಲೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಚಾಲನ ಸಮಿತಿ ರಚಿಸಲಾಗಿದೆ.
ಕ್ರಿಯಾ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್, ವಂದಿತಾ ಶರ್ವ, ಯೋಜನೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಇನ್ನಿತರ ಹಿರಿಯ ಅದಿಕಾರಿಗಳು ಇದ್ದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
