ಮೈಸೂರು:ಸುತ್ತೂರು ಮಠ ಶಿಕ್ಷಣ ಮತ್ತು ಸೇವಾ ಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.
ನಗರದ ಸುತ್ತೂರು ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 105ನೇ ಜಯಂತಿ ಕಾರ್ಯಕ್ರಮವನ್ನು ನವದೆಹಲಿಯಿಂದ ಆನ್​ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಸುತ್ತೂರು ಮಠದ ಯಾತ್ರೆ ಸಾಮಾನ್ಯವಾದುದ್ದಲ್ಲ. ಅದೊಂದು ಮೌಲ್ಯಯುತವಾದ ಯಾತ್ರೆ. ಈ ಯಾತ್ರೆಯಲ್ಲಿ ಶ್ರೀಮಠ ಶಿಕ್ಷಣ, ಸಮಾಜ ಸೇವೆಗೆ ಹೊಸ ಆಯಾಮ ನೀಡಿರುವುದು ಮಾತ್ರವಲ್ಲದೆ ಜಾಗೃತ ಹಾಗೂ ಸಶಕ್ತ ಭಾರತ ನಿರ್ವಣಕ್ಕೆ ಸಹಕಾರಿಯಾಗಿದೆ ಎಂದರು.
ನಮಗೆ ವಿದ್ವತ್ ದೊರೆಯಲು ಶಿಕ್ಷಣ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಮತ್ತು ಭಾರತೀಯ ಮೌಲ್ಯಗಳ ಅವಶ್ಯಕತೆ ಇದೆ. ಅದನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಜೆಎಸ್​ಎಸ್ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಶೈಕ್ಷಣಿಕ ತರಬೇತಿ ಜತೆಗೆ ಆಧ್ಯಾತ್ಮಿಕ ತರಬೇತಿಯನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದ ಸಿಂಗ್, ಈ ರೀತಿಯ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಶಿಕ್ಷಣ ನೀತಿಯು ಕೌಶಲಾಧಾರಿತ, ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಿದೆ. ಅಲ್ಲದೆ, ಪ್ರಾದೇಶಿಕ ಧ್ವನಿಗೆ ಹೆಚ್ಚಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ಬಹುಮಾನ ವಿತರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಸುತ್ತೂರು ಶ್ರೀಮಠ-ಗುರುಪರಂಪರೆ’ ಮತ್ತು ‘ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’ ಅನಿಮೇಷನ್ ಚಿತ್ರ ಬಿಡುಗಡೆ ಮಾಡಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಕಾಯಕ ತಪಸ್ವಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಾರು’ ತೆಲುಗು ಅನುವಾದಿತ ಕೃತಿ, ‘ಭಕ್ತಿ ಭಂಡಾರಿ ಬಸವೇಶ್ವರರಿನ್ ವಸನಂಗಳ್’ ತಮಿಳು ಅನುವಾದಿತ ಮರು ಮುದ್ರಣಗೊಂಡ ಕೃತಿ ಮತ್ತು ‘ನೀತಿ ಸಾಮ್ರಾಜ್ಯ ಶತಕ’ ಸಂಪಾದಿತ ಕೃತಿಗಳನ್ನು ಬಿಡುಗಡೆ ಮಾಡಿದರು.
ಆತ್ಮನಿರ್ಭರ ಸಾಕಾರಕ್ಕೆ ಕರೆ:ಹೊಸ ಆತ್ಮನಿರ್ಭರ ಭಾರತ ನಿರ್ವಣದ ಕನಸನ್ನು ಸಾಕಾರಗೊಳಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಇದಕ್ಕೆ ದೇಶದ ಜನತೆ ಹಾಗೂ ಯುವ ಸಮುದಾಯದ ಸಹಕಾರ ಅಗತ್ಯ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು. ಕೇವಲ ಆರ್ಥಿಕವಾಗಿ ಆತ್ಮನಿರ್ಭರ ಆದರೆ ಸಾಲದು ಮಾನಸಿಕ ಹಾಗೂ ಸಾಂಸ್ಕೃತಿಕವಾಗಿಯೂ ಆತ್ಮನಿರ್ಭರರಾಗಬೇಕು. ಇದಕ್ಕೆ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಳ್ಳಲು ರಾಜೇಂದ್ರ ಶ್ರೀಗಳಂತಹ ಸಂತರ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನನ್ಯ ಸೇವೆ:ಸುತ್ತೂರು ಮಠದ 23ನೇ ಪೀಠಾಧಿಪತಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದರು. ಅನ್ನ, ಅರಿವು, ಅರೋಗ್ಯ ಸಮಾಜ ಸುಧಾರಣೆ, ಧರ್ಮ ಜಾಗೃತಿ, ಅಧ್ಯಾತ್ಮ ಕ್ಷೇತ್ರಕ್ಕೆ ರಾಜೇಂದ್ರ ಶ್ರೀಗಳು ಭದ್ರ ಬುನಾದಿ ಹಾಕಿದರು. ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆಯುವ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತೆ ಮಾಡಿದರು. ಶ್ರೀಗಳು ಶಾಂತಿ, ಧಾರ್ವಿುಕ ಸಾಮರಸ್ಯದ ರೂವಾರಿಯಾಗಿದ್ದರು ಎಂದರು.
ಶ್ರೀ ಮಠವು ಸರ್ವಧರ್ಮ, ಸಕಲ ಜಾತಿಯವರ ಪ್ರೀತಿ, ಭಕ್ತಿ, ಗೌರವಗಳಿಗೆ ಪಾತ್ರವಾಗಿರುವುದು ನಾಡಿನ ಹೆಮ್ಮೆ. ರಾಜೇಂದ್ರ ಶ್ರೀಗಳು ನನ್ನನ್ನು ಶಿಷ್ಯನ ರೀತಿ ಕಾಣುತ್ತಿದ್ದರು. ರಾಜಕೀಯದ ಹೊರತಾಗಿಯೂ ಅವರು ನನ್ನ ಹಿತ ಕಾಯ್ದಿದ್ದರು. ನಾನು ಇದನ್ನು ಎಂದಿಗೂ ಮರೆಯಲಾರೆ.
| ಎಚ್.ಡಿ. ದೇವೇಗೌಡಮಾಜಿ ಪ್ರಧಾನಿ
ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ದೂರದೃಷ್ಟಿ ಇತ್ತು. ಅವರು ಕೇವಲ ಶಾಲೆಗಳನ್ನು ಮಾತ್ರ ತೆರೆಯದೆ ಗ್ರಾಮೀಣ ಭಾಗದ ಮಕ್ಕಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದರು. ಮಠವನ್ನು ಅವರು ಸಮಾಜಮುಖಿಯಾಗಿ ಬೆಳೆಸಿದರು. ಈ ಭವ್ಯ ಪರಂಪರೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
| ಸಿದ್ದರಾಮಯ್ಯಮಾಜಿ ಮುಖ್ಯಮಂತ್ರಿ
ರಾಜೇಂದ್ರ ಸ್ವಾಮೀಜಿ ವಿವಿಧ ದಾಸೋಹಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಅವರ ಜೀವನಾದರ್ಶನ ನಮಗೆ ದಾರಿ ದೀಪವಾಗಬೇಕು.
ಡಾ.ಅಶ್ವತ್ಥನಾರಾಯಣಡಿಸಿಎಂ
https://www.vijayavani.net/schools-cannot-charge-annual-and-development-fee/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
