ಬೆಂಗಳೂರು:ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ 2023ನೇ ಸಾಲಿನ ‘ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ’ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ 100 ಶ್ರೇಣಿ ಪಟ್ಟಿಯಲ್ಲಿ ಮೈಸೂರು ಪಾಲಿಕೆ (23) ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ (87) ಹೊರತುಪಡಿಸಿ ಇನ್ನುಳಿದ ನಗರ, ಪಟ್ಟಣಗಳು ಯಶ ಕಂಡಿಲ್ಲ.
ಇಡೀ ರಾಜ್ಯಕ್ಕೆ ಮಾದರಿಯಾಗಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 125ನೇ ಸ್ಥಾನವನ್ನು ಪಡೆದು ಕಳಪೆ ಪ್ರದರ್ಶನ ನೀಡಿದೆ. ದಕ್ಷಿಣ ಭಾರತ ಒಳಗೊಂಡ ರಾಜ್ಯಗಳ ವಲಯ ವಿಭಾಗದಲ್ಲೂ ಕರ್ನಾಟಕದ ಯಾವುದೇ ಮಧ್ಯಮ ಪ್ರಮಾಣದ ನಗರ-ಪಟ್ಟಣವು ಪ್ರಶಸ್ತಿ ಪಡೆಯಲು ಸಾಧ್ಯವಾಗಿಲ್ಲ.
ರಾಜ್ಯ ಮಟ್ಟದಲ್ಲಿ ಮೈಸೂರು ಪಾಲಿಕೆ ಮೊದಲ ಸ್ಥಾನದಲ್ಲಿದೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿಂದಿನ ಸಾಧನೆಯನ್ನು ದಾಖಲಿಸಲು ಹಿಂದೆ ಬಿದ್ದಿದೆ. ಸಾಂಸ್ಕೃತಿಕ ನಗರಿ 2022 ಹಾಗೂ 2021ರಲ್ಲಿ ಕ್ರಮವಾಗಿ 2ನೇ ಹಾಗೂ 8ನೇ ಸ್ಥಾನದಲ್ಲಿತ್ತು. 2023ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿದಿದೆ. ಆದರೂ, ರಾಜ್ಯದ ಮಟ್ಟಿಗೆ ಮೊದಲ ಸ್ಥಾನವನ್ನು ಪಡೆದಿರುವುದು ಸಮಾಧಾನ ತಂದಂತಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯಿತಿ ರಾಜ್ಯ ಶ್ರೇಣಿ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.
ಮೂಲದಲ್ಲೇ ಕಸ ವಿಂಗಡಣೆಗೆ ಬೆನ್ನು:
ಈ ಬಾರಿಯ ಸ್ಪರ್ಧೆಗೆ ರಾಜ್ಯದ 311 ನಗರಗಳು ನಾಮನಿರ್ದೇಶನಗೊಂಡಿದ್ದವು. ಈ ನಗರ-ಪಟ್ಟಣಗಳಲ್ಲಿ ಮನೆ ಮೆನಯಿಂದ ಕಸ ಸಂಗ್ರಹ, ಮೂಲದಲ್ಲೇ ತ್ಯಾಜ್ಯ ಸಂಗ್ರಹ ಹಾಗೂ ತ್ಯಾಜ್ಯ ಸಂಸ್ಕರಣೆ ವಿಭಾಗದಲ್ಲಿ ಪ್ರಮುಖ ಅಂಶಗಳನ್ನು ಪರಿಗಣಿಸಲಾಗಿತ್ತು. ಇವುಗಳಲ್ಲಿ ಮೂಲದಲ್ಲೇ ಕಸ ವಿಂಗಡಣೆಯಲ್ಲಿ ಸರಾಸರಿ ಶೇ. 32.88 ಪ್ರಮಾಣದಲ್ಲಿದೆ. ಇದುವೇ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ರಾಜ್ಯದ ನಗರಗಳು ಹಿಂದೆ ಬೀಳಲು ಕಾರಣವಾಗಿದೆ. ಮೂಲದಲ್ಲೇ ಕಸ ವಿಂಗಡಣೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ಎಲ್ಲ ನಗರ-ಪಟ್ಟಣಗಳಿಗೆ ತಾಕೀತು ಮಾಡುತ್ತಲೇ ಬರುತ್ತಿದೆ. ಇದಕ್ಕಾಗಿ ಅಗತ್ಯ ಮಾರ್ಗಸೂಚಿ ಸಿದ್ಧಪಡಿಸಿದ್ದರೂ, ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ತ್ಯಾಜ್ಯ ನಿರ್ವಹಣೆ ಉಸ್ತುವಾರಿಗಾಗಿಯೇ ಎನ್‌ಜಿಟಿ ಆದೇಶದ್ವನಯ ನಿವೃತ್ತ ನ್ಯಾ. ಸುಭಾಷ್ ಬಿ ಅಡಿ ಅವರ ನೇತೃತ್ವದಲ್ಲಿ ಸಮಿತಿಯು ನಿಗಾ ಇಟ್ಟಿದ್ದರೂ, ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ತಲೆಬೇನೆ ಆಗಿರುವಂತಿದೆ.
ಇತ್ತೀಚಿಗೆ ರಾಜ್ಯ ಸರ್ಕಾರ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳು ಗಂಭೀರತೆ ಹೊಂದಬೇಕು ಎಂಬ ಸಂದೇಶ ರವಾನಿಸಿದೆ. ಇದರ ಜತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಎಲ್ಲ ಬಗೆಯ ಮಾಲಿನ್ಯವನ್ನು ತಡಗಟ್ಟಲು ಆಯಾ ಸಂಸ್ಥೆಗಳಿಗೆ ತಿಳಿವಳಿಕೆ ನೀಡಿದೆ. ಆದರೂ, ತ್ಯಾಜ್ಯವು ವ್ಯಾಜ್ಯವಾಗಿಯೇ ಉಳಿದುಕೊಳ್ಳಲು ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆಯ ಸುಧಾರಣೆ ಮಾಡಿದಂತಿಲ್ಲ.
ರಾಜ್ಯದಲ್ಲಿ ತ್ಯಾಜ್ಯ ನಿರ್ವಹಣೆ ವಿವರ:ಒಟ್ಟು ನಗರಗಳು – 311ಮನೆ ಮನೆ ಕಸ ಸಂಗ್ರಹ – ಶೇ. 79.75ಮೂಲದಲ್ಲೇ ಕಸ ವಿಂಗಡಣೆ – ಶೇ. 32.88ತ್ಯಾಜ್ಯ ಸಂಸ್ಕರಣೆ ಪ್ರಮಾಣ – ಶೇ.49.58
ಬಿಬಿಎಂಪಿಯ ಸ್ವಚ್ಛತಾ ರಿಪೋರ್ಟ್ ಕಾರ್ಡ್:
ಮನೆ ಮನೆ ಕಸ ಸಂಗ್ರಹ -ಶೇ.97ಮೂಲದಲ್ಲೇ ಕಸ ವಿಂಗಡಣೆ -ಶೇ.99ತ್ಯಾಜ್ಯ ಉತ್ಪತ್ತಿಯ ಸಂಸ್ಕರಣೆ -ಶೇ.81ವಸತಿ ಬಡಾವಣೆಗಳಲ್ಲಿ ಸ್ವಚ್ಛತೆ -ಶೇ.98ಮಾರುಕಟ್ಟೆ ಸ್ಥಳಗಳಲ್ಲಿ ಸ್ವಚ್ಛತೆ – ಶೇ.98ಜಲ ಮೂಲ ತಾಣಗಳ ಸ್ವಚ್ಛತೆ – ಶೇ.94ಸಾರ್ವಜನಿಕ ಶೌಚಾಲಯ ಸ್ವಚ್ಛತೆ – ಶೇ.87
ಜಿ 20 ನಾಯಕರ ದೆಹಲಿ ೋಷಣೆಯಂತೆ 2030ರ ವೇಳೆಗೆ ತ್ಯಾಜ್ಯ ಉತ್ಪಾದನೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಹಾಗೂ ಶೂನ್ಯ ತ್ಯಾಜ್ಯ ಉಪಕ್ರಮಗಳ ಮಹತ್ವ ಎತ್ತಿ ತೋರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಎಲ್ಲ ರಾಜ್ಯಗಳಲ್ಲೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಕ್ರಮ ಕೈಗೊಳ್ಳಬೇಕು.– ಹರ್ದೀಪ್‌ಸಿಂಗ್ ಪುರಿ, ಸಚಿವ, ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
