ಹಾಸನ: ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ರಸ್ತೆಗೆ ಕಸ ಎಸೆಯುತ್ತಿದ್ದ ರಜತ ಕಾಂಪ್ಲೆಕ್ಸ್ ನ ವರ್ತಕರಿಗೆ ನಗರಸಭೆ ಸಿಬ್ಬಂದಿ ಹೊಸ ರೀತಿಯಲ್ಲಿ ಪಾಠ ಕಲಿಸಿದ್ದಾರೆ.
ನಗರದ ಹಳೆ ಮುನಿಸಿಪಲ್ ರಸ್ತೆಯಲ್ಲಿರುವ ರಜತ ಕಾಂಪ್ಲೆಕ್ಸ್ ನ ವರ್ತಕರು ನಿತ್ಯವೂ ಬೆಳಗ್ಗೆ ತ್ಯಾಜ್ಯ ವಸ್ತುಗಳನ್ನು ಎದುರಿನ ರಸ್ತೆಗೆ ಸುರಿಯುತ್ತಿದ್ದರು.ಹೀಗೆ ಮಾಡದಂತೆ ನಗರಸಭೆ ಸ್ವಚ್ಛತಾ ಸಿಬ್ಬಂದಿ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಒಂದು ಡ್ರಮ್ ಬಳಸಿ ತ್ಯಾಜ್ಯ ಸಂಗ್ರಹಿಸಿ ಕೊಡುವಂತೆ ಹಲವಾರು ಬಾರಿ ಸೂಚಿಸಿದ್ದರು.
ಹೀಗಿದ್ದರೂ ವರ್ತಕರು ತಮ್ಮ ಚಾಳಿ ಬಿಟ್ಟಿರಲಿಲ್ಲ. ಶನಿವಾರ ಬೆಳಗ್ಗೆಯೂ ವರ್ತಕರು ತ್ಯಾಜ್ಯಗಳನ್ನು ರಸ್ತೆಗೆ ಸುರಿದಿದ್ದರು. ಅದನ್ನು ಕಂಡ ಸ್ಥಳಕ್ಕೆ ಬಂದ ನಗರಸಭೆ ಸ್ವಚ್ಛತಾ ಸಿಬ್ಬಂದಿ, ತ್ಯಾಜ್ಯಗಳನ್ನು ಗುಡಿಸಿ ಒಂದೆಡೆ ಸಂಗ್ರಹಿಸಿ ಪುನಃ ರಜತ ಕಾಂಪ್ಲೆಕ್ಸ್ ನ ಅಂಗಡಿಗಳ ಎದುರಿಗೆ ಸುರಿದರು.
ಇದರಿಂದ ತ್ಯಾಜ್ಯ ಉತ್ಪಾದಿಸಿ ಬೇಕಾಬಿಟ್ಟಿಯಾಗಿ ಎಸೆಯುತ್ತಿದ್ದ ವರ್ತಕರು ಕಕ್ಕಾಬಿಕ್ಕಿಯಾದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
