ಬೆಂಗಳೂರು:ಹೊಸ ಸರ್ಕಾರ ಬಂದ ಬಳಿಕ ಮತ್ತೊಮ್ಮೆ ಪಠ್ಯ ಪರಿಷ್ಕರಣೆಯ ಪ್ರಕ್ರಿಯೆ ಕುರಿತ ಸದ್ದು ಜೋರಾಗಿದ್ದು, ಇದೀಗ ವಚನ ಸಾಹಿತ್ಯವನ್ನೂ ಪಠ್ಯಕ್ಕೆ ಸೇರಿಸಬೇಕು ಎಂಬ ಮಾತು ಕೇಳಿ ಬಂದಿದೆ. ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದು, ಅವರ ಮುಂದೆ ಸ್ವಾಮೀಜಿ ಈ ಬೇಡಿಕೆ ಇರಿಸಿದ್ದಾರೆ. ಪಠ್ಯದಲ್ಲಿ ಏನೇನೋ ಅನಾಹುತ ಆಗಿರುವುದು ನಿಮಗೆ ಗೊತ್ತಿದೆ. ಬಸವಣ್ಣ, ಅಂಬೇಡ್ಕರ್, ಕುವೆಂಪು, ಕನಕದಾಸರ ವಿಚಾರ ಏನೇನೋ ವ್ಯತ್ಯಾಸ ಆಗಿತ್ತು, ಆ ಸಂದರ್ಭದಲ್ಲಿ ನಾನೇ ಮೊದಲು ಪ್ರತಿಭಟಿಸಿದ್ದೆ, ನಂತರ ಸ್ವಲ್ಪ ಬದಲಾವಣೆ ಮಾಡಿದ್ದರೂ ಇನ್ನೂ ಸಾಕಷ್ಟು ಬದಲಾವಣೆ ಆಗಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನಮ್ಮೂರಲ್ಲಿ ಸರ್ಕಾರಿ ವೈದ್ಯರೇ ಉಳಿಯಲ್ಲ.. ನೋಡಿ ಎಂಥ ಪರಿಸ್ಥಿತಿ!: ಸಿಎಂ ಸಿದ್ದರಾಮಯ್ಯ
ಪಠ್ಯ ಬದಲಾವಣೆಗೆ ಸರ್ಕಾರ ಈಗಾಗಲೇ ಮುಂದಾಗಿದೆ. ಅದು ಮತ್ತಷ್ಟು ಬದಲಾವಣೆ ಮಾಡುವ ವಿಶ್ವಾಸ ಇದೆ ಎಂದು ಸಾಣೇಹಳ್ಳಿ ಸ್ವಾಮೀಜಿ, ಪಠ್ಯಗಳಲ್ಲಿ ವಚನ ಸಾಹಿತ್ಯವನ್ನೂ ಸೇರಿಸಬೇಕು, ಎಲ್ಲ ವಿದ್ಯಾರ್ಥಿಗಳೂ ವಚನವನ್ನು ಓದುವಂತಾಗಬೇಕು ಎಂದು ಮನವಿ ಮಾಡಿಕೊಂಡರು. ಪಠ್ಯಗಳಲ್ಲಿ ವಚನಗಳನ್ನು ಸೇರಿಸಬೇಕಾದರೆ ಯಾವ್ಯಾವುದನ್ನು ಸೇರಿಸಬೇಕು ಎಂಬುದನ್ನು ನಾವು ಪಟ್ಟಿ ಮಾಡಿಕೊಡುತ್ತೇವೆ ಎಂದೂ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಸಿಎಂಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ ಮಾತನಾಡುತ್ತಾರೆ. ಆದರೆ ಕೆಲವು ಸಚಿವರು ಈಗಲೇ ಫೋನ್​ ಕರೆ ಸ್ವೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎದುರೇ ಸ್ವಾಮೀಜಿ ಆರೋಪಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಶಿವರಾಜ ತಂಗಡಗಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.
‘ಲವ್ ಮಾಡು’ ಎಂದು ಟೀಚರ್ ಮಗನ ಕಾಟ, ಆತನಿಗೆ ಅಮ್ಮನ ಬೆಂಬಲ?: ಸಾವಿಗೆ ಶರಣಾದ್ಲು ಹತ್ತನೇ ತರಗತಿ ವಿದ್ಯಾರ್ಥಿನಿ

ಮಕ್ಕಳಿಬ್ಬರ ಪ್ರಾಣ ಉಳಿಸಿ ಸಾವಿಗೀಡಾದ ತಾಯಿ!; ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twelve =
Remember me
