
ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರು ವಿಜಯನಗರದಲ್ಲಿ ರೋಡ್ ಶೋ ಮುಖಾಂತರ ಮತ ಯಾಚನೆ ಮಾಡಿದರು. ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಹಿರಿಯ ಶಾಸಕರಾದ ಕೃಷ್ಣಪ್ಪ ಉಪಸ್ಥಿತರಿದ್ದರು.ಇದೇ ವೇಳೆ ಮಾತಾಡಿದ ಸಚಿವರಾದ ರಾಮಲಿಂಗಾ ರೆಡ್ಡಿ ಅವರು, ನಮ್ಮ ಪಕ್ಷ ಇನ್ನು ಹತ್ತು ವರ್ಷ ಅಧಿಕಾರದಲ್ಲಿ ಇರಲಿದೆ. ನಮ್ಮ ಅಧಿಕಾರವಧಿಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಗ್ಯಾರೆಂಟಿಗಳು ರದ್ದಾಗುವುದಿಲ್ಲ ಎಂದು ಹೇಳಿದರು.ನಾವಿರೋದು ಜನರಿಗೋಸ್ಕರ ಹಾಗೂ ನಾವು ನುಡಿದಂತೆ ನಡೆದು ಎಲ್ಲ ಜನರ ಕೆಲಸವನ್ನು ಮಾಡುತ್ತಿದ್ದೇವೆ. ಯಾವುದೇ ಒಂದು ಸುಳ್ಳು ಆಶ್ವಾಸನೆಯನ್ನು ನೀಡಿಲ್ಲ ಎಂದರು.ಇದೇ ವೇಳೆ ಮಾತಾಡಿದ ಹಿರಿಯ ಶಾಸಕರಾದ ಕೃಷ್ಣ ಪಲೇಪಾರು ಅವರು, ಸೌಮ್ಯರೆಡ್ಡಿ ವಿದ್ಯಾವಂತೆಯಾಗಿದ್ದಾರೆ. ನಮ್ಮ ರಾಜ್ಯಕ್ಕೆ ಲೋಕಸಭೆಯಲ್ಲಿ ಮಾತಾಡಲು ಇಂತವರು ಅವಶ್ಯಕತೆ ಇದೆ ಆದುದರಿಂದ ಎಲ್ಲರೂ ಸೌಮ್ಯರೆಡ್ಡಿ ಬೆಂಬಲಿಸಿ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಮಾತನಾಡಿ, ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಒಂದು ಹೆಣ್ಣಿಗೆ ಆದ ಮೋಸವನ್ನು ನೀವು ನೋಡಿದ್ದೀರಿ. ಈ ಮೋಸವನ್ನು ಸರಿಪಡಿಸಲು ವಿಜಯನಗರದ ಜನರು ನನ್ನ ಕೈ ಹಿಡಿಬೇಕೆಂದು ಮನವಿ ಮಾಡಿದರು.ಬೆಂಗಳೂರು ದಕ್ಷಿಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಹಸಿರು ಬೆಂಗಳೂರ ದಕ್ಷಿಣ ಭಾರತದಲ್ಲಿ ನೀವೆಲ್ಲರೂ ನನ್ನ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಕಿವಿ ಮಾತು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
