ಬೆಂಗಳೂರು:ಪ್ರಧಾನ ಮಂತ್ರಿ ಸ್ವನಿಧಿ ಸಮೃದ್ಧಿ ಯೋಜನೆ (ಬೀದಿ ವ್ಯಾಪಾರಿಗಳಿಗೆ ಸಾಲ)ಯಡಿ ಕರ್ನಾಟಕದಲ್ಲಿ ಈವರೆಗೆ 423 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕಿಶನ್ ರಾವ್ ಕರಾಡ್ ಹೇಳಿದರು.ಕರ್ನಾಟಕ ಈ ಯೋಜನೆಯಡಿ ಶೇ.68 ರಷ್ಟು ಪ್ರಗತಿ ಸಾಧಿಸಿದ್ದು, ಈವರೆಗೆ 4.03 ಲಕ್ಷ ಫಲಾನುಭವಿಗಳ ಗುರಿಯಲ್ಲಿ 3.2 ಲಕ್ಷ ಗುರಿ ಸಾಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸ್ವನಿಧಿ ಸಮೃದ್ಧಿ ಯೋಜನೆಯಡಿ ದೇಶಾದ್ಯಂತ 39 ಲಕ್ಷ ಬೀದಿ ಬದಿ ವ್ಯಾಪಾರಗಳಿಗೆ ನೆರವು ನೀಡಲಾಗಿದೆ. ಈ ವರ್ಷ 51 ಲಕ್ಷ ಗುರಿ ಹೊಂದಲಾಗಿದೆ. 10 ಸಾವಿರ ರೂ.ಗಳಿಂದ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಇದುವರೆಗೆ 7, 460 ಕೋಟಿ ರೂ. ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಸ್ವನಿಧಿ ಮೇಳ ಆಯೋಜಿಸಲು ಸೂಚನೆನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್‌ಬಿ) ತಮ್ಮ ಸ್ಥಳಗಳಲ್ಲಿ ಸ್ವನಿಧಿ ಮೇಳವನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ಈ ಯೋಜನೆಯನ್ನು ಪಡೆಯಲು ಹೆಚ್ಚಿನ ಮಾರಾಟಗಾರರಿಗೆ ಸಹಾಯ ಮಾಡಲು, ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಬುಧವಾರ ಕಿಯೋಸ್ಕ್‌ಗಳನ್ನು ತೆರೆಯಲು ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಅಧಿಕೃತ ಬೀದಿ ವ್ಯಾಪಾರಿಸಾಲ ಸವಲತ್ತು ಪಡೆಯಲು ನೀಡಲಾದ ಪ್ರಮಾಣಪತ್ರವು ಅವರನ್ನು ಅಧಿಕೃತ ಬೀದಿ ವ್ಯಾಪಾರಿಯನ್ನಾಗಿ ಮಾಡುತ್ತದೆ. ಅದು ಅವರನ್ನು ಪೊಲೀಸ್ ಮತ್ತು ಕಾರ್ಪೊರೇಷನ್ ಅಧಿಕಾರಿಗಳಿಂದ ರಕ್ಷಿಸುತ್ತದೆ ಎಂದು ಹೇಳಿದರು.
ಸಾಲ ನೀಡಿಕೆ ಮತ್ತಷ್ಟು ಸರಳಬ್ಯಾಂಕ್ ಸಾಲ ಪಡೆಯಲು ಬೀದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ದೂರುಗಳೂ ಇವೆ. ಆ ಬಗ್ಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಸ್ವ ನಿಧಿ ಸಮೃದ್ಧಿ ಯೋಜನೆಯ ಸಾಲ ನೀಡಿಕೆಯನ್ನು ಸರಳೀಕರಣಗೊಳಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.ಫಲಾನುಭವಿಗಳು ಯುಎಲ್‌ಬಿಯಲ್ಲಿ ತಮ್ಮ ಹೆಸರು ನೋಂದಾಯಿಸಿರಬೇಕು. ಜನಧನ್ ಬ್ಯಾಂಕ್ ಖಾತೆ ಮತ್ತು ಆಧಾರ್ ಹೊಂದಿದ್ದರೆ ಮಾತ್ರ ಸಾಲ ಸೌಲಭ್ಯ ದೊರೆಯಲಿದೆ ಎಂದರು.ಡಿಸೆಂಬರ್ 2023 ರ ವೇಳೆಗೆ 50 ಲಕ್ಷ ಫಲಾನುಭವಿಗಳಿಗೆ ಸಾಲ ನೀಡುವ ಗುರಿಯನ್ನು ಹೊಂದಿದ್ದು, ಪ್ರಸ್ತುತ ಅವರು 43 ಲಕ್ಷ ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eleven =
Remember me
