ಬೆಂಗಳೂರು :ಮಳೆಯನ್ನು ಲೆಕ್ಕಿಸದ ಸಂಗೀತಪ್ರೇಮಿಗಳು ಭಾನುವಾರ, ರಾಜರಾಜೇಶ್ವರಿ ನಗರದಲ್ಲಿ ನಡೆದ ಸ್ವರಮೇಧಾ ಸಂಗೀತೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
‘ಇಂದಿನ ಯುವ ಪೀಳಿಗೆ ಬೇರೆಯವರನ್ನು ಅನುಕರಿಸುವುದನ್ನು ಬಿಟ್ಟು ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಸಂಗೀತದ ಕಲಿಕೆಯಲ್ಲಿ ನಿಜವಾದ ಸಂಕಲ್ಪಶಕ್ತಿ ಹಾಗೂ ಶ್ರದ್ಧೆಯಿದ್ದರೆ ಮಾತ್ರ ಸಾಧಿಸಬಹುದು’ ಎಂದು ‘ಸ್ವರಮೇಧಾ ಸಂಗೀತಶ್ರೀ‘ ಬಿರುದನ್ನು ಪಡೆದು ಮಾತನಾಡಿದ ಪ್ರಖ್ಯಾತ ಹಿನ್ನೆಲೆ ಗಾಯಕಿ ಚೈತ್ರ ಹೇಳಿದರು.
91 ವರ್ಷದ ಹಿರಿಯ ಸಂಗೀತ ವಿದ್ವಾಂಸ ವಿದ್ವಾನ್ ಟಿ.ಆರ್ ರಂಗಸ್ವಾಮಿಗೆ ‘ಸ್ವರಮೇಧ ಸಂಗೀತರತ್ನ‘ ಬಿರುದನ್ನು ಪ್ರದಾನ ಮಾಡಲಾಯಿತು. ಹಿರಿಯ ಸಂಗೀತ ವಿದುಷಿ ಶ್ರೀಮತಿಗೆ ‘ಸ್ವರಮೇಧಾ ಸಂಗೀತ ವಿಭೂಷಣ‘ ಬಿರುದನ್ನು ಕೊಟ್ಟು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ನಟ ವಿಜಯ್ ಕಾಶಿ ‘ಗ್ರಾಮೀಣ ಭಾಗದಿಂದ ಇಂತಹ ಮಹಾನಗರಕ್ಕೆ ಬಂದು ಸಂಗೀತದ ಸೇವೆಯಲ್ಲಿ ತೊಡಗಿರುವ ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಚಿನ್ಮಯ ರಾವ್ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವಂತಾಗಲಿ‘ ಎಂದು ಶುಭಹಾರೈಸಿದರು.
ಸಭಾಕಾರ್ಯಕ್ರಮದ ಕಡೆಗೆ ವಿದ್ಯಾರ್ಥಿಗಳು ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು. ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಭರತ್ ರಾವ್ ಕೆ.ಎಸ್, ಸುಪ್ರಸಿದ್ಧ ಗೋಸೇವಕ ಮಹೇಂದ್ರ ಮುನ್ನೋಟ್ ಹಾಗೂ ಉದ್ಯಮಿ ರಾಜೇಶ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twelve =
Remember me
