ತುಮಕೂರು:ನಗರದ ಮಂಡಿಪೇಟೆ-ಚಿಕ್ಕಪೇಟೆ ರಸ್ತೆಯ ಶ್ರೀ ವೀರಭದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆ.21ರಂದು (ಭಾನುವಾರ)ವಿಜಯವಾಣಿ ಮತ್ತು ದಿಗ್ವಿಜಯ 247ನ್ಯೂಸ್ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ಆಯೋಜನೆಗೊಂಡಿದೆೆ.
ಅಂದು ಬೆಳಗ್ಗೆ 9 ಗಂಟೆಗೆ ಯಾಗ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಂಡವರಿಗೆ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸುವುದು ತಪ್ಪಲಿದ್ದು, ವಿವಾಹ ತೊಡಕುಗಳು ನಿವಾರಣೆಯಾಗಿ ವಧು ವರರಿಗೆ ಕಂಕಣ ಭಾಗ್ಯ ಕೂಡಿಬರಲಿದೆ ಎನ್ನುವುದು ಈ ಯಾಗದ ವಿಶೇಷ. ಯಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಹೊಂದಲಾಗಿದೆ. ಯಾಗದಲ್ಲಿ ಭಾಗಿಯಾಗುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಪೌರಾಣಿಕ ಹಿನ್ನೆಲೆ:ಪರಮೇಶ್ವರನೊಂದಿಗೆ ಪಾರ್ವತಿ ಜಗಳ ಮಾಡಿಕೊಂಡು ಭೂ ಲೋಕಕ್ಕೆ ಬರುತ್ತಾಳೆ. ಆಗ ಪಾರ್ವತಿಯನ್ನು ಮರೆತ ಶಿವನು ಏಕಾಂತಕ್ಕೆ ಹೊರಟು ಹೋಗು ತ್ತಾನೆ. ಇದರಿಂದ ಲಯಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಈ ಪರಿಸ್ಥಿತಿ ಅರಿತ ಋಷಿ ಮುನಿಗಳು ಹಾಗೂ ದೇವತೆಗಳು ಪ್ರಾರ್ಥನೆ ಮೂಲಕ ಶಿವನನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ. ಇತ್ತ ಭೂಲೋಕದಲ್ಲಿದ್ದ ಪಾರ್ವತಿ ಶಿವಲಿಂಗ ರಚಿಸಿ ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ ಸ್ವಯಂವರ ಮಂತ್ರ ಉಪದೇಶಿಸುತ್ತಾರೆ. ಪಾರ್ವತಿ ಈ ಮಂತ್ರವನ್ನು ಜಪಿಸಿದಾಗ ಶಿವನು ಎಚ್ಚರಗೊಂಡು ಭೂಲೋಕಕ್ಕೆ ಆಗಮಿಸುತ್ತಾನೆ. ನಂತರ ಪಾರ್ವತಿಯನ್ನು ವಿವಾಹವಾಗಿ ಕೈಲಾಸಕ್ಕೆ ಕರೆದೊಯ್ಯುತ್ತಾನೆ. ಕೆಲವರಿಗೆ ಪೂರ್ವಜನ್ಮದ ಯಾವುದೋ ದೋಷಗಳು ವಿವಾಹ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಅಂಥವರು ಪಾರ್ವತಿ ಸ್ವಯಂವರ ಹೋಮ ಮಾಡಿಸಿ, ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.
ಜಾತಕ, ಭಾವಚಿತ್ರ ತನ್ನಿ:ಸ್ವಯಂವರ ಪಾರ್ವತಿ ಯಾಗದಿಂದ ಜೀವನ ಸಂಗಾತಿ ಶೀಘ್ರ ದೊರಕಲು ಅನುವಾಗುತ್ತದೆ. ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು-ವರರು ತಮ್ಮ ಭಾವಚಿತ್ರದೊಂದಿಗೆ ಜಾತಕವನ್ನು ತರುವಂತೆ ಕೋರಲಾಗಿದೆ. ಹೆಸರು ನೋಂದಾಯಿಸಿ. ಉಚಿತ ಸಂಕಲ್ಪ ಪೂಜೆ, ಪ್ರಸಾದಕ್ಕಾಗಿ ನಿಮ್ಮ ಮೊಬೈಲ್​ನಲ್ಲಿ ನೋಂದಣಿ ಲಿಂಕ್ ಎಸ್​ಎಂಎಸ್ ಪಡೆಯಲು ವಿವರಗಳಿಗೆ ಮೊ: 7538806555 ಮಿಸ್ಡ್ ಕಾಲ್ ನೀಡಿ.
ಸ್ಥಳ:ತುಮಕೂರಿನ ಮಂಡಿಪೇಟೆ-ಚಿಕ್ಕಪೇಟೆ ರಸ್ತೆಯ ಶ್ರೀ ವೀರಭದ್ರ ಸ್ವಾಮಿ ಕಲ್ಯಾಣ ಮಂಟಪ.
ಬಿಬಿಎಂಪಿ ಚುನಾವಣೆ: ವಾರ್ಡ್​ ವಿಂಗಡಣೆ ಮೀಸಲಾತಿ ಅಧಿಸೂಚನೆ ಪ್ರಕಟ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seven =
Remember me
