ಬೆಂಗಳೂರು:ವಿದ್ಯಾರಣ್ಯಪುರದಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ 27ರಂದು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಯಾಗ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಂಡವರಿಗೆ ವಿವಾಹ ತೊಡಕುಗಳು ನಿವಾರಣೆಯಾಗಲಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಯಾಗದಿಂದ ಕಂಕಣಬಲ:ಸ್ವಯಂವರ ಪಾರ್ವತಿ ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು ಮತ್ತು ವರರಿಗೆ ಅತಿ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿ ಬರುವ ನಂಬಿಕೆ ಇದೆ. ಪುರಾಣಗಳ ಪ್ರಕಾರ, ಸ್ವಯಂವರ ಮಂತ್ರ ಉಪದೇಶದ ನಂತರ ಶಿವ-ಪಾರ್ವತಿ ಯಾಗ ಮಹತ್ವ ಪಡೆದಿದೆ. ಪೂರ್ವಜನ್ಮದ ದೋಷಗಳಿಂದಲೂ ಮದುವೆ ವಿಳಂಬ ಆಗುತ್ತಿರುತ್ತದೆ. ಯಾಗ ಮಾಡಿದರೆ ಎಲ್ಲ ದೋಷಗಳು ಪರಿಹಾರಗೊಳ್ಳುತ್ತವೆ. ಭಾವೀ ವಧು-ವರರು ಮಾತ್ರವಲ್ಲ, ಸಂಸಾರದಲ್ಲಿ ನೆಮ್ಮದಿ ಇಲ್ಲದವರೂ ಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ಶಾಂತಿ ಹೊಂದಬಹುದಾಗಿದೆ.
ಇದನ್ನೂ ಓದಿ:ಚಂದ್ರನ ಮೇಲೆ ಲ್ಯಾಂಡ್​ ಆಗುವ ಮುನ್ನವೇ ತಮಿಳುನಾಡಿನ ನಾಮಕ್ಕಲ್​ ಮಣ್ಣಿನ ಮೇಲೆ ಚಂದ್ರಯಾನ 3 ನೌಕೆ ಇಳಿದಿತ್ತು!
ಪೌರಾಣಿಕ ಹಿನ್ನೆಲೆ:ಪರಮೇಶ್ವರನೊಂದಿಗೆ ಪಾರ್ವತಿ ಜಗಳ ಮಾಡಿಕೊಂಡು ಭೂಲೋಕಕ್ಕೆ ಬರುತ್ತಾಳೆ. ಆಗ ಪಾರ್ವತಿಯನ್ನು ಮರೆತ ಶಿವನು ಏಕಾಂತಕ್ಕೆ ಹೊರಟು ಹೋಗುತ್ತಾನೆ. ಇದರಿಂದ ಲಯಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಈ ಪರಿಸ್ಥಿತಿ ಅರಿತ ಋಷಿ ಮುನಿಗಳು ಹಾಗೂ ದೇವತೆಗಳು ಪ್ರಾರ್ಥನೆ ಮೂಲಕ ಶಿವನನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ. ಇತ್ತ ಭೂಲೋಕ ದಲ್ಲಿದ್ದ ಪಾರ್ವತಿ ಶಿವಲಿಂಗ ರಚಿಸಿ ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ ಸ್ವಯಂವರ ಮಂತ್ರ ಉಪದೇಶಿಸುತ್ತಾರೆ. ಪಾರ್ವತಿ ಈ ಮಂತ್ರವನ್ನು ಜಪಿಸಿದಾಗ ಶಿವನು ಎಚ್ಚರ ಗೊಂಡು ಭೂಲೋಕಕ್ಕೆ ಆಗಮಿಸುತ್ತಾನೆ. ನಂತರ ಪಾರ್ವತಿಯನ್ನು ವಿವಾಹವಾಗಿ ಕೈಲಾಸಕ್ಕೆ ಕರೆದೊಯ್ಯುತ್ತಾನೆ. ಕೆಲವರಿಗೆ ಪೂರ್ವಜನ್ಮದ ಯಾವುದೋ ದೋಷಗಳು ವಿವಾಹ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಅಂಥವರು ಪಾರ್ವತಿ ಸ್ವಯಂವರ ಹೋಮ ಮಾಡಿಸಿ, ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ.
ಸ್ವಯಂವರ ಪಾರ್ವತಿ ಯಾಗದಿಂದ ಜೀವನ ಸಂಗಾತಿ ಶೀಘ್ರ ದೊರಕಲು ಅನುವಾಗುತ್ತದೆ. ಯಾಗದಲ್ಲಿ ಪಾಲ್ಗೊಳ್ಳುವ ಭಾವೀ ವಧು-ವರರು ತಮ್ಮ ಭಾವಚಿತ್ರದೊಂದಿಗೆ ಜಾತಕ ವನ್ನು ತರುವಂತೆ ಕೋರಲಾಗಿದೆ.https://bit.ly/3MZlw2Bಯಲ್ಲಿ ಹೆಸರು ನೋಂದಾಯಿಸಿ. ಉಚಿತ ಹಾಗೂ ವಿಶೇಷ ಪೂಜೆ, ಸಂಕಲ್ಪ ಮತ್ತು ಪ್ರಸಾದಕ್ಕಾಗಿ ಮ್ಯಾಟ್ರಿ ಐಡಿಯನ್ನು ತೋರಿಸಬೇಕು. ವಿವರಗಳಿಗೆ ಮೊ.: 75388 06555 ಸಂರ್ಪಸಬಹುದು.
ಸ್ಥಳ
ವಿದ್ಯಾರಣ್ಯಪುರ ಸಾಂಸ್ಕೃತಿಕ ಕೇಂದ್ರ (ರಿ), ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ನಂ.11, 8ನೇ ಮುಖ್ಯರಸ್ತೆ, 4ನೇ ಬ್ಲಾಕ್, ಬಿ.ಐ.ಎಲ್.ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು – 560097
ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದ ‘ಓ ಮೈ ಗಾಡ್ 2’; ಅಕ್ಷಯ್​ ಕುಮಾರ್ ನಟನೆಯ ಚಿತ್ರ ಗಳಿಸಿದ್ದೆಷ್ಟು?

ಮನೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆಸೆದ ಕಳ್ಳ ಸ್ವಾಮಿ: ನೋಡಿದ ಜನರು ಮಾಡಿದ್ದಿಷ್ಟು..

ರಜನಿಕಾಂತ್​ ಅಭಿನಯದ ‘ಜೈಲರ್​’ ಪ್ರದರ್ಶನಕ್ಕೆ ತಡೆ ನೀಡುವಂತೆ ಪಿಐಎಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
