ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿರುವ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಚುನಾಯಿತರಾಗಿರುವ 17 ಮಂದಿ ವಿಧಾನ ಪರಿಷತ್‌ನ ನೂತನ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವಿಕರಿಸಲಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಸೋಮವಾರ ಬೆಳಗ್ಗೆ 11ಕ್ಕೆ ನೂತನ ಸದಸ್ಯರ ಪ್ರಮಾಣ ವಚನ ಸ್ವಿಕಾರ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ವಿಧಾನಸಭೆಯ ಸದಸ್ಯರಿಂದ 11 ಮಂದಿ, ಶಿಕ್ಷಕರ ಕ್ಷೇತ್ರದಿಂದ ಮೂವರು, ಪದವೀಧರರ ಕ್ಷೇತ್ರದಿಂದ ಮೂವರು ಚುನಾಯಿತರಾಗಿದ್ದಾರೆ.ಆಡಳಿತ ಕಾಂಗ್ರೆಸ್‌ನಿಂದ ಸಚಿವ ಎನ್.ಎಸ್.ಬೋಸರಾಜು, ಕೆ.ಗೋವಿಂದರಾಜು, ಎ.ವಸಂತಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಐವಾನ್ ಡಿಸೋಜ, ಜಗದೇವ ಗುತ್ತೆದಾರ್, ಬಲ್ಕಿಸ್ ಬಾನು, ಡಿ.ಟಿ.ಶ್ರೀನಿವಾಸ, ರಾಮೋಜಿಗೌಡ, ಡಾ. ಚಂದ್ರಶೇಖರ ಬಸವರಾಜ ಪಾಟೀಲ ಸೇರಿದಂತೆ 10 ಮಂದಿ ಚುನಾಯಿತರಾಗಿದ್ದಾರೆ.
ಬಿಜೆಪಿಯಿಂದ ಸಿ.ಟಿ.ರವಿ, ಎನ್.ರವಿಕುಮಾರ್, ಮೂಳೆ ಮಾರುತಿರಾವ್, ಡಾ.ಧನಂಜಯ ಸರ್ಜಿ ಒಳಗೊಂಡು ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಿಂದ ಟಿ.ಎನ್.ಜವರಾಯಿಗೌಡ, ಎಸ್.ಎಲ್.ಭೋಜೇಗೌಡ, ಕೆ. ವಿವೇಕಾನಂದ ಚುನಾಯಿತರಾಗಿದ್ದಾರೆ. ಆಡಳಿತ ಪಕ್ಷದ 10 ಹಾಗೂ ಪ್ರತಿಪಕ್ಷಗಳಿಂದ 7 ಮಂದಿ ಸದಸ್ಯತ್ವದ ಪ್ರಮಾಣ ವಚನ ಸ್ವಿಕರಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
