ರಾಯಚೂರು:ದೇವದುರ್ಗದ ಬಿ.ಗಣೇಕಲ್​ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರಿಗೆ ಇಂದು (ಶುಕ್ರವಾರ) ಹೋಳಿಗೆಯೂಟ ಬಡಿಸಲಾಗಿದೆ. ಕೆಲವೆಡೆ ಕ್ವಾರಂಟೈನ್​ಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಆರೋಪದ ನಡುವೆಯೂ ಇಲ್ಲಿನ ಗ್ರಾಪಂ ಸಿಹಿಯೂಟ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿರಿಪೇದೆಗೆ ಕರೊನಾ ಸೋಂಕು, ಪಿಜಿಗೆ ಡ್ರಾಪ್​ ಪಡೆದ ಮಹಿಳಾ ಪೇದೆಗೂ ಸಂಕಷ್ಟ!
ಶುಕ್ರವಾರ ಅಮಾವಸ್ಯೆ. ಹಾಗಾಗಿ ತಾಲೂಕು ಆಡಳಿತದ ಅನುಮತಿ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರಾಮಸ್ಥರ ಸಹಕಾರದೊಂದಿಗೆ ಮಧ್ಯಾಹ್ನ ಹೋಳಿಗೆಯೂಟ, ಜತೆಗೆ ಮಾವಿನ ಹಣ್ಣಿನ ಸೀಕರಣೆ ಬಡಿಸಿದೆ.
ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ್​ನಲ್ಲಿರುವ 52 ಜನರಿಗೆ ಮನೆಯ ಮಾದರಿಯಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿತ್ಯ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ‌ ಸಾಂಬಾರು ನೀಡಲಾಗುತಿತ್ತು.
ಇದನ್ನೂ ಓದಿರಿಐಸಿಎಸ್​ಇ ಮತ್ತು ಐಎಸ್​ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
