ಮೈಸೂರು:ಟಿ.ನರಸೀಪುರ (T. Narasipura) ತಾಲ್ಲೂಕಿನಲ್ಲಿ ಚಿರತೆ (Leopard) ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಮನೆಯ ಮುಂದೆ ಕುಳಿತ್ತಿದ್ದ ಯುವತಿಯ ಮೇಲೆ ಚಿರತೆ ದಾಳಿ ಮಾಡಿ ಕೊಂದ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ದುರ್ಘಟನೆ ಸಂಭವಿಸಿದ್ದು, 11 ವರ್ಷದ ಬಾಲಕ ಚಿರತೆ ದಾಳಿ (Leopard attack)ಗೆ ಬಲಿಯಾಗಿದ್ದಾನೆ.
ಹೊರಳಹಳ್ಳಿ ಗ್ರಾಮದ ಜಯಂತ್ (11) ಮೃತ ಬಾಲಕ. ಈ ಘಟನೆ ನಿನ್ನೆ (ಜ.21) ತಡರಾತ್ರಿ ನಡೆದಿದೆ. ಬಾಲಕನ ಮೇಲೆ ದಾಳಿ ಮಾಡಿದ ಚಿರತೆ ಆತನನ್ನು ಕೊಂದು, ದೇಹವನ್ನು ಹೊತ್ತೊಯ್ದಿದೆ. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯೆಲ್ಲ ಹುಡುಕಾಟ ನಡೆಸಿದ್ದು, ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಲಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಮೃತ ಬಾಲಕನ ಶವ ಪತ್ತೆ ಹಚ್ಚುವ ಭರವಸೆ ನೀಡಿದರು.
ಶವ ಪತ್ತೆಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಮೃತ ಬಾಲಕನ ದೇಹ ಪತ್ತೆಯಾಗಿದೆ. ಬಾಲಕನ ಸ್ವಲ್ಪ ದೇಹವನ್ನು ಚಿರತೆ ತಿಂದು ಹಾಕಿದ್ದು, ಅದನ್ನು ನೋಡಿದ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಶವ ಸಿಕ್ಕ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಿರುಗಿ ಬಿದ್ದ ಜನತೆಟಿ. ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಗುಡುಗಿದ್ದಾರೆ. ನರಸೀಪುರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳು ಮನುಷ್ಯರು, ಸಾಕು ಪ್ರಾಣಿಗಳನ್ನ ಬಲಿ ಪಡೆಯುತ್ತಲೇ ಇದೆ. ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ? ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ತಪ್ಪಿಸಲು ಯಾವ ಕ್ರಮ ಕೈಗೊಂಡಿದ್ದೀರಾ? ನಿಮ್ಮ ಸುಳ್ಳು ಭರವಸೆಗಳು, ಪರಿಹಾರಗಳು ನಮಗೆ ಬೇಡ. ಚಿರತೆಗಳನ್ನು ಕೊಂದಾದರೂ ತಾಲ್ಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಿ. ಇಲ್ಲ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳ್ತಾರೆ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಎಚ್ಚರಿಕೆ ನೀಡಿದರು.
ಮೇಘನಾ ಸಾವುಕಳೆದ ಡಿಸೆಂಬರ್​ 1ರಂದು ಟಿ.ನರಸೀಪುರ ತಾಲೂಕಿನ ಎಸ್​. ಕಬ್ಬೆಹುಂಡಿಯಲ್ಲಿ ಮನೆಯ ಮುಂದೆ ಕುಳಿತಿದ್ದ ಯುವತಿ ಮೇಘನಾ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮೇಘನಾಳನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೇಘನಾ ಅಸುನೀಗಿದಳು.(ದಿಗ್ವಿಜಯ ನ್ಯೂಸ್​)
ಇಪಿಎಫ್ ಕುರಿತ ದೂರುಗಳಿಗೆ ಪೋರ್ಟಲ್: ಪಿಂಚಣಿದಾರರು, ಉದ್ಯೋಗದಾತರಿಗೆ ಅನುಕೂಲ

ಮುಸ್ಲಿಂ ಯುವಕನ ಜತೆ 4 ಮಕ್ಕಳ ತಾಯಿ ಎಸ್ಕೇಪ್​ ಪ್ರಕರಣ: ಮಹಿಳೆ ಹೇಳಿಕೆಯಲ್ಲಿ ಅನುಮಾನ, ಪತ್ನಿಗಾಗಿ ಗಂಡನ ಕಣ್ಣೀರು

ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
