ಹುಬ್ಬಳ್ಳಿ/ಹಾವೇರಿ/ಬೆಳಗಾವಿ:ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಆಯೋಜಿಸಿದ್ದ ಪ್ರಾರ್ಥನೆಯಲ್ಲಿ ಭಾಗಿಯಾಗಿ ವಾಪಸಾದವರನ್ನು ಪತ್ತೆಹಚ್ಚಿ ಕ್ವಾರಂಟೈನ್​ಗೇನೋ ಒಳಪಡಿಸಿಯಾಗಿದೆ. ಆದರೆ, ಆಸ್ಪತ್ರೆಗಳಲ್ಲಿ ಅವರ ಹುಚ್ಚಾಟ ಹೆಚ್ಚಾಗಿದ್ದು ವೈದ್ಯರು, ನರ್ಸ್​ಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಪೀಕಲಾಟ ಶುರುವಾಗಿದೆ.
ಹುಬ್ಬಳ್ಳಿಯ ಕಿಮ್್ಸ ವಿಶೇಷ ವಾರ್ಡ್​ನಲ್ಲಿ ಇರುವವರಲ್ಲಿ ಒಬ್ಬಾತ ಗುಟ್ಖಾ ತರಿಸಿಕೊಡಿ ಎಂದು ವೈದ್ಯರಿಗೇ ಬೇಡಿಕೆ ಇಟ್ಟಿದ್ದಾನಂತೆ! ‘ಗುಟ್ಖಾ ಬಿಟ್ಟಿರಲು ಆಗುವುದಿಲ್ಲ. ಹೊರಗೆ ಹೋಗಲು ನೀವು ಬಿಡುತ್ತಿಲ್ಲ. ಹಾಗಾಗಿ ನೀವೇ ತರಿಸಿಕೊಡ್ರಿ. ಇಲ್ಲಾಂದ್ರೆ ನನ್ನನ್ನು ಬಿಟ್ಟು ಕಳಿಸ್ರಿ’ ಎಂದು ಆವಾಜ್ ಹಾಕಿದವನನ್ನು ಸಮಾಧಾನಪಡಿಸುವಲ್ಲಿ ಸಿಬ್ಬಂದಿ ಹೈರಾಣಾಗಿದ್ದಾರೆ. ಇನ್ನೊಬ್ಬನಿಗೆ ಎಲ್ಲೆಂದರಲ್ಲಿ ಉಗುಳುವ ಚಟ! ಮತ್ತೊಮ್ಮೆ ಹಾಗೆಲ್ಲ ಉಗಿದರೆ ಪೊಲೀಸರನ್ನು ಕರೆಸಿ ಬುದ್ಧಿ ಕಲಿಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ ನಂತರವಷ್ಟೇ ಆತ ತೆಪ್ಪಗಾಗಿದ್ದಾನೆ. ಕೆಲ ಶಂಕಿತರು ಹೆಸರು, ವಯಸ್ಸು ಮತ್ತಿತರ ಮಾಹಿತಿ ಕೇಳಿದರೂ ಹೇಳದೇ ಸತಾಯಿಸುತ್ತಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರಾಣೆಬೆನ್ನೂರಿನ ಶಂಕಿತನೊಬ್ಬ ‘ಇಲ್ಲಿನ ವ್ಯವಸ್ಥೆ ಸರಿಯಿಲ್ಲ, ಊಟ ಚೆನ್ನಾಗಿಲ್ಲ’ ಎಂದು ಸಿಬ್ಬಂದಿ ಮೇಲೆ ರೇಗಾಡಿ, ಕಿರಿಕಿರಿ ಉಂಟು ಮಾಡಿದ್ದಾನೆ.
‘ಇಂಥದ್ದೇ ಟೂತ್ ಬ್ರಶ್, ಪೇಸ್ಟ್ ತರಿಸಿಕೊಡಿ, ನನಗೆ ಇಷ್ಟು ಬೇಗ ಊಟ ಬೇಡ, ರಾತ್ರಿ 10ಗಂಟೆಗೆ ಊಟ ಕೊಡಿ’ ಎಂದು ಜಬರ್​ದಸ್ತ್ ಮಾಡಿದ್ದಾನೆ. ಭಾನುವಾರ ಬೆಳಗ್ಗೆ ಲ್ಯಾಬ್ ರಿಪೋರ್ಟ್​ನಲ್ಲಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಆತನನ್ನು ಆಂಬುಲೆನ್ಸ್​ನಲ್ಲಿ ರಾಣೆಬೆನ್ನೂರಿಗೆ ಬಿಟ್ಟು ಬರುವ ಸಂದರ್ಭದಲ್ಲೂ ಕಿರಿಕ್ ಮಾಡಿದ್ದಾನೆ. ನನಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾನೆ.
ಭಯ ಸೃಷ್ಟಿಸುತ್ತಿರುವ ದುರುಳರು:ಬೆಳಗಾವಿಯ ಬೀಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಸೋಂಕಿತರು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್​ಗಳಿಗೆ ಸಹಕಾರ ನೀಡದೆ ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗುಳಿ ವಿಕೃತಿ ಮೆರೆದಿದ್ದಾರೆ. ಇದೇ ಆಸ್ಪತ್ರೆಯಲ್ಲಿರುವ 24 ಶಂಕಿತರೂ ಸಿಬ್ಬಂದಿಗೆ ತೊಂದರೆ ಕೊಡುತ್ತಿದ್ದಾರೆ. ‘ನಮಗೆ ಕರೊನಾ ಲಕ್ಷಣಗಳಿಲ್ಲ. ನಮ್ಮನ್ನು ಬಿಟ್ಟು ಬಿಡಿ’ ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಶಂಕಿತರಲ್ಲಿ ಒಬ್ಬ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಿಬ್ಬಂದಿಗೆ ಆತಂಕ ಹೆಚ್ಚಿಸಿದ್ದಾನೆ. ಆತ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಹ ವೈರಲ್ ಆಗಿದೆ. ಸದ್ಯ ಆತನನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ವಿರೋಧ:ಹುಕ್ಕೇರಿ ತಾಲೂಕಿನ ಐವರಿಗೆ ಬೆಳಗಾವಿ ಖಡೇ ಬಜಾರ್​ನಲ್ಲಿರುವ ಹೋಟೆಲ್ ಮತ್ತು ಲಾಡ್ಜ್ ನಲ್ಲಿ ಹೋಂ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕ್ವಾರಂಟೈನ್​ನಲ್ಲಿರುವವರ ಅವಧಿ ಬಹುತೇಕ ಮುಗಿವ ಹಂತಕ್ಕೆ ಬಂದಿದ್ದು, ದೆಹಲಿಯ ನಿಜಾಮುದ್ದೀನ್ ಶಿಬಿರದಿಂದ ಬಂದವರ ಕ್ವಾರಂಟೈನ್ ಅವಧಿಯನ್ನು ಮತ್ತೆ 14 ದಿನ ಮುಂದುವರಿಸಲಾಗುವುದು. ಕ್ವಾರೆಂಟೈನ್​ಲ್ಲಿರುವ ತಬ್ಲಿಘಿಗಳು ವೈದ್ಯ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ನಮಗೆ ಇಂಥದ್ದೆ ಊಟ, ತಿಂಡಿ ಬೇಕು ಎಂದು ಒತ್ತಡ ಹೇರುತ್ತಿರುವುದು ಸರಿಯಲ್ಲ. ಚಿಕಿತ್ಸೆಗೆ ಸ್ಪಂದಿಸದಿದ್ದರೆ ಅವರ ಪ್ರಾಣ ಅವರೇ ಕಳೆದುಕೊಳ್ಳುತ್ತಾರೆ. ಖಾಸಗಿ ಆಸ್ಪತ್ರೆಗಳು ಸೇವೆ ಬಂದ್ ಮಾಡಿದರೆ ಪರವಾನಗಿ ರದ್ದು ಮಾಡಲಾಗುವುದು.
| ಬಿ.ಶ್ರೀರಾಮುಲು ಆರೋಗ್ಯ ಸಚಿವ
ಮೂರು ತಿಂಗಳ ಇಎಂಐ ಪಾವತಿಗೆ ವಿನಾಯಿತಿ, ಸೈಬರ್​ ಕಳ್ಳರಿಗೆ ಹಣ ದೋಚಲು ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + two =
Remember me
