ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಕೆ.ಆರ್. ಪುರಂ ತಹಸೀಲ್ದಾರ್​ ಅಜಿತ್​ ರೈ, ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸಿದ್ದರು ಎಂಬ ಸ್ಫೋಟಕ ಸಂಗತಿ ಬಯಲಾಗಿದೆ.
ಕಾರ್ ರೇಸ್ ಫಾರ್ಮುಲಾ ಟ್ರ್ಯಾಕ್ ನಿರ್ಮಾಣ ಮಾಡಲು ಅಜಿತ್​ ರೈ ಸಾಕಷ್ಟು ಭೂಮಿ ಖರೀದಿ ಮಾಡಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವ ದೊಡ್ಡಬಳ್ಳಾಪುರ ಬಳಿ 150 ಎಕರೆ ಭೂಮಿಯಲ್ಲಿ ಫಾರ್ಮುಲ ಟ್ರ್ಯಾಕ್​ ನಿರ್ಮಾಣ ಮಾಡಲು ರೈ ಪೂರ್ವ ಸಿದ್ದತೆಯಲ್ಲಿದ್ದರು.
ಉತ್ತರ ಪ್ರದೇಶ ನೋಯ್ಡಾದಲ್ಲಿರುವ ಬುದ್ಧ ಇಂಟರನ್ಯಾಷನಲ್​ ಸರ್ಕಿಟ್ ಫಾರ್ಮುಲಾ ಕಾರ್ ರೇಸ್​ಗೆ ರೈ ಭೇಟಿ ಕೊಟ್ಟಿದ್ದರು. ರೈ ಅವರು ಕಾರುಗಳು ಬಗ್ಗೆ ಕ್ರೇಜ್ ಹೊಂದಿದ್ದರು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ಫಾರ್ಮುಲಾ ರೇಸ್​ಗಳಿಗೆ ಭೇಟಿ ನೀಡುತ್ತಿದ್ದರು. ಇದ್ದರಿಂತ ಪ್ರೇರಿತಗೊಂಡು ಸ್ವಂತ ಫಾರ್ಮುಲಾ ರೇಸ್ ಟ್ರ್ಯಾಕ್ ಆರಂಭಿಸಲು ತಯಾರಿ ನಡೆಸುತ್ತಿದ್ದರು.
ಇದನ್ನೂ ಓದಿ:ವಾಹನ ನೋಂದಣಿ ದಂಧೆಗೆ ತನಿಖೆ ಬಿಸಿ, ಹೊಸಕೋಟೆ ಯಾರ್ಡ್​ಗೆ ಖಾಕಿ ಪಡೆ ಲಗ್ಗೆ
ಅಜಿತ್​ ರೈ 11 ಐಷಾರಾಮಿ ಕಾರು ಹೊಂದಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೇಸ್ ಟ್ರ್ಯಾಕ್ ನಿರ್ಮಾಣ ಮಾಡಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಕ್ಷಕರು ಕೊಡ ಪಾಲ್ಗೊಳಬಹುದು. ಇದರಿಂದ ಹೆಚ್ಚು ಆದಾಯ ಬರುತ್ತದೆ ಎಂದು ಟ್ರ್ಯಾಕ್​ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು.
ಸಹಕಾರ ನಗರದ ಅಜಿತ್​ ರೈ ಮನೆ ಮೇಲೆ ದಾಳಿ ಮಾಡಿದ ವೇಳೆ ಫಾರ್ಮುಲಾ ರೇಸ್ 1ಗೆ ನಿರ್ಮಾಣ ಮಾಡಲು ಸಿದ್ಧಪಡಿಸಿದ್ದ ಯೋಜನೆಯ ನಕ್ಷೆ ಪತ್ತೆಯಾಗಿದ್ದು, ಈ ವಿಚಾರ ಬಹಿರಂಗವಾಗಿದೆ.
ಕೆ.ಆರ್. ಪುರಂ ತಹಸೀಲ್ದಾರ್ ಅಜಿತ್ ರೈರನ್ನು ಲೋಕಾಯುಕ್ತ ಪೊಲೀಸರು ಗುರುವಾರ (ಜೂ.29) ಬಂಧಿಸಿದ್ದಾರೆ. ಎರಡು ದಿನಗಳ ಕಾಲ ತಹಶೀಲ್ದಾರ್ ಮನೆ, ಕಚೇರಿ ಮೇಲೆ ದಾಳಿ ಮಾಡಿ ನಿರಂತರ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಜಿತ್ ರೈರನ್ನು ಬಂಧಿಸಲಾಗಿದೆ.
ಅಜಿತ್​ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್​ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸಮಿತಿ ಸಭೆ- ಶಾಲಾವರಣ ಹದಗೆಡಿಸಿದರೆ ಕೇಸ್ ದಾಖಲಿಸಿ-ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ. ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.(ದಿಗ್ವಿಜಯ ನ್ಯೂಸ್​)
ರಾಮ್​ಚರಣ್​-ಉಪಾಸನಾ ದಂಪತಿಗೆ ಮುಕೇಶ್​ ಅಂಬಾನಿಯಿಂದ ಚಿನ್ನದ ತೊಟ್ಟಿಲು ಗಿಫ್ಟ್​: ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಮೆದುಳು ಹೊರಬಂದು ಸಾಯುವ ಸ್ಥಿತಿಯಲ್ಲಿದ್ದ ಮಹಿಳೆಗೆ ಹಣ ಪಡೆಯದೆ ಚಿಕಿತ್ಸೆ: ಮಾನವೀಯತೆ ಮೆರೆದ ವೈದ್ಯರು

ಹಾವು ಕಚ್ಚಿದ ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಗೆ ಮರುದಿನವೇ ಕಾದಿತ್ತು ಬಿಗ್​ ಶಾಕ್​: ತಪ್ಪಲಿಲ್ಲ ಸಾವು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
