ಶಿವಮೊಗ್ಗ:ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸದ ಕಾರಣಕ್ಕೆ ಹೊಸನಗರ ತಹಸೀಲ್ದಾರ್​ ಹಾಗೂ ಎಫ್​ಡಿಎಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ತಲಾ 200 ರೂ. ದಂಡ ವಿಧಿಸಿದ್ದಾರೆ.
ತಹಸೀಲ್ದಾರ್​ ರಾಜೀವ್​ ಹಾಗೂ ಬೈಕ್​ ಚಾಲನೆ ಮಾಡುತ್ತಿದ್ದ ಎಫ್​ಡಿಎ ಪ್ರದಿಪ್​ ಎಂಬುವವರು ದಂಡ ಕಟ್ಟಿದ್ದಾರೆ. ನಗರದ ಆಲ್ಕೊಳ ವೃತ್ತದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿರಿಬೊಗಳಿತೆಂದು ನಾಯಿಯ ಕೊಲ್ಲಲು ಹೋದವ ತಾನೇ ಶವವಾದ!
ತಹಸೀಲ್ದಾರ್​ ರಾಜೀವ್​ ನಿವಾಸ ಆಲ್ಕೊಳ ಸಮೀಪವೇ ಇದ್ದು ಪ್ರದಿಪ್​ ಜತೆ ಮಾಸ್ಕ್​ ಧರಿಸದೆ ಆಲ್ಕೊಳ ವೃತ್ತದಲ್ಲಿ ತೆರಳುತ್ತಿದ್ದಾಗ ತಡೆದ ಅಧಿಕಾರಿಗಳು ದಂಡ ಹಾಕಿದ್ದಾರೆ. ನಂತರ ರಾಜೀವ್​ ಅವರು ತಹಸೀಲ್ದಾರ್​ ಎಂಬುದು ಅಧಿಕಾರಿಗಳಿಗೆ ಅರಿವಾಗಿದೆ.
ಇತ್ತೀಚೆಗಷ್ಟೇ ಹೊಸನಗರ ತಹಸೀಲ್ದಾರ್​ ಆಗಿ ಅಧಿಕಾರ ಸ್ವೀಕರಿಸಿದ್ದ ಅವರು ವೈಯಕ್ತಿಕ ಕೆಲಸದ ನಿಮಿತ್ತ ಪ್ರದಿಪ್​ ಜತೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಇಬ್ಬರೂ ಮಾಸ್ಕ್​ ಧರಿಸಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿರಿಕರೊನಾ ಟೆಸ್ಟ್ ಮಾಡಿಸಿಕೊಳ್ಳದ ದಿನಗೂಲಿ ಕಾರ್ಮಿಕನನ್ನು ಕೊಂದ ಸಂಬಂಧಿಗಳು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nine =
Remember me
