ಬೆಂಗಳೂರು:ಕಲಾಕಾರರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬ ಮಾತು ಇದಕ್ಕೇ ಹೇಳಿರಬೇಕು ನೋಡಿ. ಕುಶಲಕಮಿರ್ಯೊಬ್ಬರು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್​ಮಹಲ್​ ಪ್ರತಿಕೃತಿಯನ್ನು ಚಿನ್ನದಲ್ಲಿ ತಯಾರಿಸಿದ್ದಾರೆ. ಅದೂ ಅತೀ ಸಣ್ಣ ಮೂಗೂತಿ ಗಾತ್ರದಷ್ಟು!
ಶ್ರೀರಾಮಪುರದ ಲಕ್ಷ್ಮೀ ನಾರಾಯಣಪುರದಲ್ಲಿರುವ ಶ್ರೀ ಮಂಜುನಾಥ ಜ್ಯುವೆಲರಿಯ ನಾಗರಾಜು ರೇವಣ್ಕರ್​ ಕೇವಲ 16.990 ಗ್ರಾಂ ಚಿನ್ನದಲ್ಲಿ ಪ್ರತಿಕೃತಿ ರೂಪಿಸಿ ಎಲ್ಲರ ಹುಬ್ಬೇರಿಸಿದ್ದಾರೆ. 4 ಸೆಂ.ಮೀ. ಎತ್ತರ ಹಾಗೂ 3.5 ಸೆಂ.ಮೀ. ಅಗಲದ ತಾಜ್​ಮಹಲ್​ ಪ್ರತಿಕೃತಿ ತಯಾರಿಸಿ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಇದನ್ನೂ ಓದಿರಿರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?
ತಾಜ್​ಮಹಲ್​ನ ಕೆಳಭಾಗದಲ್ಲಿ “ಐ ಲವ್​ ಮೋದಿ ಜೀ”, “ಕರ್ನಾಟಕ ರತ್ನ”, “ಡಾ.ರಾಜ್​ಕುಮಾರ್​’ ಹಾಗೂ “ಎಂಟು ಜ್ಞಾನಪೀಠ’ ಎಂದು ಚಿನ್ನದ ಎಳೆಗಳಿಂದ ಅಕ್ಷರ ಬರೆದಿದ್ದಾರೆ. ತಾಜ್​ಮಹಲ್​ ಮಧ್ಯಭಾಗದಲ್ಲಿ ‘ಐ ಲವ್​ ಮೈ ಇಂಡಿಯಾ’ ಬರೆದಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಕರೊನಾ ನಿಯಂತ್ರಿಸಲು ಲಾಕ್​ಡೌನ್​ ಹೇರಿದ್ದರಿಂದ ಸಮಯ ಸಿಕ್ಕಿತ್ತು. ಹೀಗಾಗಿ, ಚಿನ್ನದಲ್ಲಿ ಕಡಿಮೆ ತೂಕದ ಪ್ರತಿಕೃತಿ ತಯಾರಿಸುವ ಯೋಚನೆ ಬಂದಿತು. ಅಂಗಡಿ ಬಾಗಿಲು ಹಾಕಿಕೊಂಡು ಒಳಗೆ ಚಿನ್ನದಲ್ಲಿ ತಾಜ್​ಮಹಲ್​ ರೂಪಿಸಲು ಆರಂಭಿಸಿದೆ. 27 ದಿನಗಳಲ್ಲಿ ತಯಾರಿಸಿದೆ. 20 ವರ್ಷದಿಂದ ಚಿನ್ನಾಭರಣಗಳ ತಯಾರಿಕೆ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ವಿಶ್ವಕಪ್​ ಪ್ರತಿಕೃತಿ ತಯಾರಿಸಿದ್ದೆ. ವಿಶೇಷ ಹಬ್ಬದ ದಿನಗಳಲ್ಲಿ ಬಗೆಬಗೆಯ ಕಲಾಕೃತಿ ರಚಿಸಿದ್ದೇನೆ ಎನ್ನುತ್ತಾರೆ ನಾಗರಾಜು ರೇವಣ್ಕರ್​.
ಇದನ್ನೂ ಓದಿರಿಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − eleven =
Remember me
