ತಲಕಾವೇರಿ:ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಗುಡ್ಡ ಕುಸಿದು ಭೂಸಮಾಧಿಯಾದ ಆರು ದಿನಗಳ ಬಳಿಕ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಮೃತದೇಹ ಪತ್ತೆಯಾಗಿದೆ.
ಸತತ 3 ದಿನಗಳಿಂದ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿಶಾಮಕದಳ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮೂರು ಹಿಟಾಚಿಗಳ ಮೂಲಕ ಮೂರನೇ ದಿನವಾದ ಮಂಗಳವಾರ ಭೂಸಮಾಧಿ ಆಗಿರುವ ನಾಲ್ವರ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.
ಮನೆಯಿಂದ 2 ಕಿ.ಮೀ. ದೂರದಲ್ಲಿರುವ ನಾಗತೀರ್ಥ ಎಂಬ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದ ತಂಡಕ್ಕೆ ಮಣ್ಣಿನಡಿ ಸಿಲುಕಿದ್ದ ನಾರಾಯಣಾಚಾರ್ ಮೃತದೇಹ ಪತ್ತೆಯಾಯಿತು. ಬಳಿಕ ಅದನ್ನು ತಲಕಾವೇರಿಗೆ ತರಲಾಯಿತು. ನಾರಾಯಣಾಚಾರ್ ಸಹೋದರ ಆನಂದತೀರ್ಥ ಸ್ವಾಮೀಜಿ ಶವ ಮೊದಲ ದಿನವಾದ ಶನಿವಾರದ ಕಾರ್ಯಾಚರಣೆಯಲ್ಲೇ ಪತ್ತೆಯಾಗಿತ್ತು.
2 ಕಾರು ಪತ್ತೆ:ನಾರಾಯಣಾಚಾರ್ ಅವರ ಶವ ಪತ್ತೆಯಾಗುವ ಮುನ್ನ ಅವರ 2 ಕಾರುಗಳು ಪತ್ತೆಯಾದವು. ಮನೆಯ ಶೆಡ್​ನಲ್ಲಿ ನಿಲ್ಲಿಸಿದ್ದ ಡಸ್ಟರ್, ಒಮ್ನಿ ಕಾರು 60 ಅಡಿ ದೂರದಲ್ಲಿ ಪತ್ತೆಯಾದವು. ಎರಡು ಕಾರು ಕೂಡ ಗುರುತಿಸಲು ಸಾಧ್ಯವಾಗದಷ್ಟು ನುಜ್ಜುಗುಜ್ಜಾಗಿದ್ದವು.ಇದನ್ನೂ ಓದಿ:ಶಾಸಕ ಅಖಂಡ ಶ್ರೀನಿವಾಸ್​ ಮನೆ ಮೇಲೆ ಕಲ್ಲು ತೂರಾಟ, ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ; ಉದ್ವಿಗ್ನ ಸ್ಥಿತಿ
ಕಾರ್ಯಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮತ್ತಿತರರಿದ್ದರು.
ಬೆಟ್ಟ ಕುಸಿದ ತಕ್ಷಣ ಬೆಂಗಳೂರಿನಿಂದ ಬಂದಿದ್ದ ಸಚಿವ ಸೋಮಣ್ಣ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಭೂಸಮಾಧಿ ಆದ ಐವರ ಪತ್ತೆಗಾಗಿ 6 ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರ ಜತೆ ಭಾಗಮಂಡಲದಲ್ಲಿದ್ದು ತಲ ಕಾವೇರಿಯಲ್ಲಿ ನಡೆಯುತ್ತಿದ್ದ ಶೋಧಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.
ಅಂತ್ಯಕ್ರಿಯೆ:ನಾರಾಯಾಣಾಚಾರ್ ಅಂತ್ಯಕ್ರಿಯೆ ಮಂಗಳವಾರ ರಾತ್ರಿ ಬಟ್ಟಿಕಾಡು ಎಸ್ಟೇಟ್​ನಲ್ಲಿ ವಿಧ್ಯುಕ್ತವಾಗಿ ಪುತ್ರಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅವರ ಸಹೋದರ ಆನಂದತೀರ್ಥ ಸ್ವಾಮೀಜಿ ಅವಿವಾಹಿತರಾಗಿದ್ದರಿಂದ ಅವರ ಶವವನ್ನು ಹೂಳಲಾಗಿತ್ತು.
ಭೂಸಮಾಧಿ ಆದ ನಾರಾಯಣಾಚಾರ್​ರ ಮನೆಯಲ್ಲಿತ್ತು ಲಕ್ಷ ಲಕ್ಷ ಹಣ , ಚಿನ್ನಾಭರಣ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
