ಬೆಂಗಳೂರು:ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ತನ್ನ ಸಿದ್ಧಾಂತವನ್ನು ಬಲಿ ಕೊಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಇದೀಗ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ:ರಿ-ರಿಲೀಸ್ ಆಗಲಿದೆ​ ಮೆಗಾ ಸ್ಟಾರ್​​ ನಟನೆಯ ಬ್ಲಾಕ್​​ಬಸ್ಟರ್​​ ಚಿತ್ರ!; ಯಾವಾಗ? ಇಲ್ಲಿದೆ ಮಾಹಿತಿ
ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ:‘ಜೆಡಿಎಸ್​​ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯಾತೀತತೆ ಏನಾಯಿತು? ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಅಂತಲೇ ಅರ್ಥ’ ಎಂದು ಹೇಳಿದರು. ಇದಕ್ಕೆ ಇದೀಗ ತಿರುಗೇಟು ನೀಡಿರುವ ಎಚ್​​.ಡಿ. ಕುಮಾರಸ್ವಾಮಿ, “ಅವರಿಗೆ ಯಾವ ಸಿದ್ದಾಂತವಿದೆ, ಪಕ್ಕದಲ್ಲೇ ಕೂರಿಸಿಕೊಂಡಿದ್ದಾರಲ್ಲ ನಿತೀಶ್ ಕುಮಾರ್, ಅಬ್ದುಲ್ಲಾ ಇವರಿಗೆ ಯಾವ ಸಿದ್ದಾಂತವಿದೆ. ಕಾಂಗ್ರೆಸ್ ಜತೆ ಯಾವಾಗ ಇದ್ದರು, ಬಿಜೆಪಿಯೊಟ್ಟಿಗೆ ಎಂದು ಸರ್ಕಾರ ರಚನೆ ಮಾಡಿದರು ಎಂಬುದಕ್ಕೆ ಉದಾಹರಣೆಗಳಿದೆ” ಎಂದು ಹೇಳಿದರು.
“ಜೆಡಿಎಸ್‌ಗೆ ಮಾತ್ರ ಸಿದ್ದಾಂತವಿಲ್ಲ. ಇವರಿಗೆ ಮಾತ್ರ ಸಿದ್ದಾಂತವಿದ್ಯಾ? 2008-2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿಗೆ ಹೋಗಿದ್ದು ಯಾರು, ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದಾಗ ಮೈತ್ರಿಗೆ ಹೋಗಿರಲಿಲ್ಲವೇ? ಅವರನ್ನೇ ಕೇಳಿ, ಈ ಬೂಟಾಟಿಕೆಗಳು ಬೇಡ” ಎಂದು ಹೇಳುವ ಮುಖೇನ ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಭಾರತ್‌ NCAP ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ: ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲಿ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 + eighteen =
Remember me
