ಬೆಂಗಳೂರು:ವಿಧಾನಪರಿಷತ್​​ ಕಲಾಪದಲ್ಲಿ ಅನ್ನ ಭಾಗ್ಯ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಎನ್​​. ರವಿಕುಮಾರ್​ ನಡುವೆ ಮಾತಿನ ಜಟಾಪಟಿ ನಡೆದಿದೆ.
​ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದನ್ನು ಉಲ್ಲೇಖಿಸಿದ ಸಿಎಂಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಪ್ರಧಾನಿ ಮೋದಿ ಅವರು 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದಾರೆ. ಮನಮೋಹನ್ ಸಿಂಗ್ ಕಾಯ್ದೆ ಮಾಡಿದರು, ಮೋದಿ ಅಕ್ಕಿ ನೀಡಿದ್ದಾರೆ. ಹಾಗಾಗಿ ಬಿಜೆಪಿ ಸದಾ ಬಡವರ ಪರ ಎಂದು ಹೇಳಿದರು.
ಇದನ್ನೂ ಓದಿ:‘ಕಾವಾಲಯ್ಯ’ ಸಾಂಗ್ ಟ್ರೆಂಡ್​​ ಆದ ಬೆನ್ನಲ್ಲೇ ಜೈಲರ್‌ ಚಿತ್ರದ ಮತ್ತೊಂದು ಹಾಡಿನ ರಿಲೀಸ್​​ ಡೇಟ್​​ ಫಿಕ್ಸ್​!
ರವಿಕುಮಾರ್ ಹೇಳಿಕೆಗೆ ಕೋಪಗೊಂಡ ಸಿದ್ದರಾಮಯ್ಯ, “ಕುಳಿತುಕೊಳ್ಳಪ್ಪ, ಹಾಲು, ಮಜ್ಜಿಗೆ, ಮೊಸರಿನ ಮೇಲೆ ಟ್ಯಾಕ್ಸ್ ಹಾಕಿದ್ದು ಯಾರು? ನೀವು ಬಡವರ ಪರವೇ?” ಎಂದು ಹೇಳುವ ಮೂಲಕ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಈ ಮಧ್ಯೆ ಧ್ವನಿ ಎತ್ತಿದ ಆಹಾರ ಸಚಿವ ಕೆ.ಎಚ್​. ಮುನಿಯಪ್ಪ, “ನಾನು ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇ. ಆದ್ರೆ, ಅವರು ಸಮಯವೇ ಕೊಡಲಿಲ್ಲ. ನಾನು ಮಾಧ್ಯಮಗಳ ಮುಂದೆ ಹೇಳಿದ ನಂತರದಲ್ಲಿ ಸಮಯ ಕೊಟ್ಟಿದ್ದು” ಎಂದು ಹೇಳಿದರು.
“ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ನಮಗೂ ಅಕ್ಕಿ ಕೊಡಲಿಲ್ಲ, ಓಪನ್ ಮಾರುಕಟ್ಟೆಯಲ್ಲಿ ಯಾರೂ ಖರೀದಿ ಮಾಡಲಿಲ್ಲ, ಯಾರೂ ಮಾರಾಟ ಮಾಡಲಿಲ್ಲ. ಕೇಂದ್ರ ನಮಗೆ ಅನ್ಯಾಯ ಮಾಡಿದೆ” ಎಂದು ಹೇಳಿದರು.
ಸದನದಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
