|ವಿಲಾಸ ಮೇಲಗಿರಿಬೆಂಗಳೂರು
ವಿಧಾನಸಭೆ ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಗ್ರಾಮ ಪಂಚಾಯಿತಿ ಎಲೆಕ್ಷನ್ ಬಳಿಕ ಇದೀಗ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿವೆ. ಕೋವಿಡ್ ಕಾರಣದಿಂದ 6 ತಿಂಗಳು ಚುನಾವಣೆ ಮುಂದೂಡುವಂತೆ ಸರ್ಕಾರ ಮಾಡಿಕೊಂಡ ಮನವಿ, ಸೀಮಾ ಪುನರ್ವಿಂಗಡಣೆ, ಮೀಸಲು ನಿಗದಿ ಕಾರಣಗಳಿಂದ ಜಿಪಂ ಮತ್ತು ತಾಪಂ ಚುನಾವಣೆಗಳು ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ನಲ್ಲಿ ಚುನಾವಣಾ ಸಿದ್ಧತೆ ಶುರುವಾಗಿದೆ. ಮೀಸಲು ಕರಡು ಪ್ರಕಟಗೊಂಡಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ಗರಿಗೆದರಿದೆ. ಟಿಕೆಟ್ ಆಕಾಂಕ್ಷಿಗಳು ತಮ್ಮಪಕ್ಷಗಳ ನೇತಾರರ ಬೆನ್ನು ಬಿದ್ದಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಲೀಸು ಎಂಬ ದೃಷ್ಟಿಯಿಂದ ಈ ಚುನಾವಣೆಯತ್ತ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದೆ. ರಾಜ್ಯದ 3,285 ತಾಪಂ ಮತ್ತು 1,191 ಜಿ.ಪಂ. ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಮೀಸಲು ಕರಡು ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿದೆ. ಮೀಸಲು ಅಂತಿಮ ಪಟ್ಟಿ ಪ್ರಕಟಿಸಿ 45 ದಿನ ತರುವಾಯ ವೇಳಾಪಟ್ಟಿ ಪ್ರಕಟಿಸಬಹುದು.
ದರ್ಬಾರು ಮುಂದುವರಿಕೆ:ಕೋವಿಡ್ 2ನೇ ಅಲೆ ಕಾರಣ ಜಿಪಂ ಮತ್ತು ತಾಪಂ ಚುನಾವಣೆ ಮುಂದೂಡಿರುವ ಹಿನ್ನೆಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡಿರುವ ಪಂಚಾಯಿತಿಗಳಿಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಚುನಾವಣೆ ಸಾಧ್ಯತೆಗಳಿರುವುದರಿಂದ ಈ ಆಡಳಿತಾಧಿಕಾರಿಗಳಿಗೆ ಇನ್ನೂ ನಾಲ್ಕರಿಂದ ಐದು ತಿಂಗಳು ಆಡಳಿತದ ಅವಕಾಶ ಸಿಗಲಿದೆ.

ಮಕ್ಕಳಿಗೆ ಮೆಟ್ಟಿಲು:ರಾಜಕಾರಣಿಗಳು, ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರ ಮಕ್ಕಳು ಹಾಗೂ ಪತ್ನಿಯರಿಗೆ ಜಿಲ್ಲಾ ಮತ್ತು ತಾ.ಪಂ ಚುನಾವಣೆ ರಾಜಕೀಯ ರಹದಾರಿಗೆ ಮೆಟ್ಟಿಲಾಗಿದೆ.
ಪುನರಾವರ್ತನೆ ಇಲ್ಲ:ಎಲ್ಲ ತಾ.ಪಂಗಳಿಗೆ ಹೊಸದಾಗಿ ಮೀಸಲು ನಿಗದಿಪಡಿಸಿರು ವುದರಿಂದ ಮೀಸಲು ಪುನರಾವರ್ತನೆಯಾಗುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಆದಾಗ್ಯೂ ಅನೇಕರು ಮೀಸಲು ನಿಗದಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಇವುಗಳನ್ನು ಆಯೋಗ ಪರಿಶೀಲಿಸಿ ತೀರ್ಪು ಪ್ರಕಟಿಸಲಿದೆ. ಆಡಳಿತ ಪಕ್ಷದ ಕೆಲವು ಶಾಸಕರೇ ಮೀಸಲು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯೂನತೆ ಸರಿಪಡಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವರ ಮೇಲೆ ಒತ್ತಡ ತಂದಿದ್ದಾರೆ.
ಎಲ್ಲವೂ ಹೊಸತು!:ಬೆಂಗಳೂರು ನಗರ ಜಿ.ಪಂ ವ್ಯಾಪ್ತಿಯಲ್ಲಿ ಹೊಸ ತಾಲೂಕು ರಚನೆಯಾಗಿರುವುದರಿಂದ ಮತ್ತು ಇದರ ವ್ಯಾಪ್ತಿಯಲ್ಲಿ ಕ್ಷೇತ್ರಕ್ಕೆ ನಿಗದಿಯಾಗಿದ್ದ ಪ್ರತಿ 20 ಸಾವಿರ ಜನಸಂಖ್ಯೆಗೆ ಬದಲಾಗಿ 35-45 ಸಾವಿರ ಜನಸಂಖ್ಯೆಗೆ ಒಂದು ಸ್ಥಾನ ನಿಗದಿಪಡಿಸಿರುವುದರಿಂದ ಈ ಹಿಂದೆ ಇದ್ದ ಒಟ್ಟು 50 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಕಡಿಮೆಯಾಗಿದೆ. ಕಾರಣ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಾಗಿ ಪರಿವರ್ತಿತವಾಗಿದ್ದು, ಭೌಗೋಳಿಕವಾಗಿ ಕ್ಷೇತ್ರದ ವ್ಯಾಪ್ತಿ ಬದಲಾಗಿದೆ. ಆದ್ದರಿಂದ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಹೊಸ ಮತಕ್ಷೇತ್ರಗಳೆಂದು ಪರಿಗಣಿಸಿ ಮೀಸಲಾತಿ ಹೊಸದಾಗಿ ನಿಗದಿಪಡಿಸಲಾಗಿದೆ.
ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

ಫ್ಯಾಷನ್​ ಡಿಸೈನರ್ ಅಂಗಸೌಷ್ಠವಕ್ಕೆ ಫಿದಾ ಆದ ನೆಟ್ಟಿಗರು; ಈಕೆಯ ವಯಸ್ಸೆಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
