ಬೆಂಗಳೂರು:ಕಾಗದದ ಮೇಲೆ ಸುಂದರವಾಗಿ ಕಾಣುವ ಯೋಜನೆಗಳು ಸಕಾಲಕ್ಕೆ ಅನುಷ್ಠಾನವಾಗುವುದಿಲ್ಲ. ಸಣ್ಣಪುಟ್ಟ ಕೆಲಸಗಳಿಗೆ ಸಿಎಂ ಕಚೇರಿ, ವಿಧಾನಸೌಧಕ್ಕೆ ಅಲೆಯುವುದು ತಪ್ಪಿಲ್ಲವೆಂಬ ಜನರ ‘ವರಿ’ ದೂರ ಮಾಡಲು ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆಯಿಟ್ಟಿದೆ.
ಕರ್ನಾಟಕ ಆಡಳಿತ ಸೇವೆ (ಕೆಎಎಸ್)ಯ ಅಧಿಕಾರಿಗಳನ್ನು ತಾಲೂಕಿಗೊಬ್ಬರಂತೆ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ ಶನಿವಾರ ಆದೇಶಿಸಿದೆ. ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಉಸ್ತುವಾರಿ ಅಧಿಕಾರಿಗಳ ಗುರುತರ ಜವಾಬ್ದಾರಿಯಾಗಿದೆ.
ಜಿಲ್ಲಾಮಟ್ಟದ ಆಯಾ ಉಸ್ತುವಾರಿ ಸಚಿವರು, ರಾಜ್ಯಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಸ್ವತಃ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ್ದರು. ದೂರದ ಊರುಗಳಿಂದ ಜನರು ಖರ್ಚು ಮಾಡಿ ಅಹವಾಲು ಸಲ್ಲಿಸಲು ಸಚಿವರು, ಸಿಎಂ ಬಳಿಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಚಾಟಿ ಬೀಸಿದ್ದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅಹವಾಲುಗಳ ತ್ವರಿತ ವಿಲೇವಾರಿ, ಬಗೆಹರಿಸಲಾಗದ ಅರ್ಜಿಗಳ ಬಗ್ಗೆ ನಿರ್ದಿಷ್ಟ ಕಾರಣಗಳ ಸಹಿತ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಅಭಿವೃದ್ಧಿ ಕೆಲಸಗಳ ಜಾರಿಗೂ ಕೆಂಪುಪಟ್ಟಿ ಕಡತ ಅಡ್ಡಗಾಲು ಹಾಕುತ್ತಿದೆ ಎಂಬ ಮಾತು, ಹಿಮ್ಮಾಹಿತಿ ಅನುಸರಿಸಿ ಪ್ರತಿ ತಾಲೂಕಿಗೆ ಕೆಎಎಸ್ ಅಧಿಕಾರಿಯನ್ನೇ ಉಸ್ತುವಾರಿಯಾಗಿಸಿದ್ದಾರೆ.
ಈ ಕ್ರಮದಿಂದ ಆಡಳಿತಾತ್ಮಕ ನೆಪವೊಡ್ಡಿ ಕಾಲಹರಣ ಮಾಡುವುದು ತಪ್ಪುತ್ತದೆ. ಸಕಾಲದಲ್ಲಿ ಜಾರಿಗೆ ಬಂದರೆ ಯೋಜನೆಯ ಪ್ರಯೋಜನ ಉದ್ದೇಶಿತರಿಗೆ ತಲುಪಲಿದ್ದು, ಅಂದಾಜು ವೆಚ್ಚದ ಗಾತ್ರ ಪದೇ ಪದೆ ಪರಿಷ್ಕರಿಸುವುದು ತಪ್ಪಲಿದೆ ಎಂಬ ಅಭಿಪ್ರಾಯಗಳಿವೆ.
ಕೆಎಎಸ್ ಅಧಿಕಾರಿಗಳನ್ನು ತಾಲೂಕು ಉಸ್ತುವಾರಿಯನ್ನಾಗಿಸಿ ಸರ್ಕಾರ ಅಷ್ಟಕ್ಕೇ ಬಿಟ್ಟಿಲ್ಲ. ನಿರ್ವಹಣೆಗೆ ಮಾರ್ಗಸೂಚಿಯನ್ನು ಗೊತ್ತುಪಡಿಸಿ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಹೊಣೆಗಾರಿಕೆಯೊಂದಿಗೆ ಉತ್ತರದಾಯಿಗಳೆಂದು ಸೂಚ್ಯವಾಗಿ ಹೇಳಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಣೆ, ಉಸ್ತುವಾರಿ ಕಾರ್ಯದರ್ಶಿ ಒಪ್ಪಿಸಿದ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿ, ಆಡಳಿತಯಂತ್ರದ ಸಮನ್ವಯತೆ ಮತ್ತು ಸಮತೋಲನದತ್ತಲೂ ಗಮನಹರಿಸಿದೆ.
ನಿರ್ವಹಿಸಿದ ಕಾರ್ಯಗಳ ಬಗ್ಗೆ ಪ್ರತಿ ತಿಂಗಳು ಸರ್ಕಾರ, ಆಯಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗೆ ಕಾರ್ಯವರದಿಯನ್ನು ಸಲ್ಲಿಸಬೇಕು ಎಂದು ತಾಲೂಕು ಉಸ್ತುವಾರಿ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
– ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನೆ– ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಹಾಸ್ಟೆಲ್‌ಗಳು, ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನ್ಯೂನತೆ ಸರಿಪಡಿಸಲು ಕ್ರಮ– ಶಾಲೆ, ಕಾಲೇಜು, ಐಟಿಐಗಳಿಗೆ ಭೇಟಿ ನೀಡಿ ಸಮಸ್ಯೆಗಳ ಅಧ್ಯಯನ, ಶಿಕ್ಷಣದ ಗುಣಮಟ್ಟದ ಸುಧಾರಣೆಗೆ ಪರಿಹಾರ. ಶಾಲಾ ಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿ ಪರಿಶೀಲನೆ– ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳಿಗೆ ನಿವೇಶನದ ಲಭ್ಯತೆ ತಪಾಸಣೆ, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳ ಪರಿಶೀಲನೆ. ಅಪೌಷ್ಟಿಕ ಮಕ್ಕಳ ವಿವರ ಪಡೆದು, ಸರ್ಕಾರದ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮದ ಪ್ರಗತಿ ಪರಾಮರ್ಶೆ.– ಕೃಷಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆ ಪ್ರಮುಖ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಆರ್ಥಿಕ, ಭೌತಿಕ ಪ್ರಗತಿ ಪರಿಶೀಲನೆ– ಯುವಜನರಿಗೆ ಉದ್ಯೋಗಾಧಾರಿತ ತರಬೇತಿ ಕುರಿತು ಸಮನ್ವಯ, ಸಾಲ ಮಂಜೂರಾತಿಗೆ ಬೇಕಾದ ಸಲಹೆ. ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಯುವಕ-ಯುವತಿಯರಿಗೆ ವೃತ್ತಿನೈಪುಣ್ಯತೆ ಹೆಚ್ಚಿಸಿ ಜೀವನೋಪಾಯ ಸದೃಢಗೊಳಿಸಲು ಕ್ರಮ– ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಸವಲತ್ತುಗಳ ಅರಿವು ಮೂಡಿಸಿ, ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಕ್ರಮವಹಿಸುವುದು– ಸಿಎಸ್‌ಆರ್ ಅಡಿ ವಿವಿಧ ಕಂಪನಿಗಳಿಂದ ಆರ್ಥಿಕ ಸಹಾಯ ಪಡೆದು ತಾಲೂಕಿನ ಶೈಕ್ಷಣಿಕೆ, ಆರೋಗ್ಯ, ಸ್ವಚ್ಛತೆ ಹಾಗೂ ನೈಸರ್ಗಿಕ ಕಾರ್ಯಗಳ ನಿರ್ವಹಣೆ– ಪ್ರತಿ ಗ್ರಾ.ಪಂ.ವಾರು ಕುಡಿಯುವ ನೀರಿನ ವ್ಯವಸ್ಥೆ, ಮೇಲ್ತೊಟ್ಟಿಗಳ ಸ್ವಚ್ಛತೆ ವರದಿ ಸಲ್ಲಿಕೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬಾಧಿತ ಪ್ರದೇಶದಲ್ಲಿ ತುರ್ತು ಕ್ರಮ– ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ– ಪ್ರತಿ ತಾಲೂಕಿಗೆ ಕನಿಷ್ಠ ಎರಡು ಬಾರಿ ಭೇಟಿ. ವಿವಿಧ ಇಲಾಖೆಗಳ ಯೋಜನೆ ಕಾಮಗಾರಿಗಳ ಸ್ಥಳ ಪರಿಶೀಲನೆ, ಯೋಜನೆಗಳು ನಾಗರಿಕ ಸ್ನೇಹಿಗೊಳಿಸುವುದು, ಸರ್ಕಾರದ ಹಿತಕ್ಕೆ ಧಕ್ಕೆಯಾಗದಂತೆ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುವುದು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
