| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಭ್ರಷ್ಟಾಚಾರದ ಕೂಪಗಳಾಗಿರುವ ತಾಲೂಕು ಕಚೇರಿಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲು ಚರ್ಚೆ ನಡೆಸಿದ್ದು, ಜನರ ಅಲೆದಾಟ ತಪ್ಪಿಸಿ ಸುಲಲಿತ ಸೇವೆ ನೀಡಲು ಮುಂದಾಗಿದೆ.
ಕಂದಾಯ ಇಲಾಖೆಯೇ ಸರ್ಕಾರದ ಎಲ್ಲ ಇಲಾಖೆಗಳಿಗೂ ಮೂಲ ಇಲಾಖೆಯಾಗಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಕಚೇರಿಗೆ ಜನ ಬರುವುದು ಹೆಚ್ಚಾಗಿರುವುದರಿಂದ ಸುಲಿಗೆ ಕೇಂದ್ರಗಳಾಗಿ ಪರಿವರ್ತನೆ ಆಗಿವೆ. ರಾಜ್ಯದಲ್ಲಿರುವ 233 ತಾಲೂಕುಗಳ ಕಚೇರಿಗಳಲ್ಲಿಯೂ ಸುಗಮ ಆಡಳಿತಕ್ಕೆ ಮನ್ನಣೆ ನೀಡಲು ಸರ್ಕಾರ ಮುಂದಾಗಿದೆ. ಜನರ ಮನೆ ಬಾಗಿಲಿಗೆ ಸೇವೆ ಸಿಗುವಂತಾಗಲು ಎಲ್ಲ ಸೇವೆಗಳಿಗೂ ಆನ್​ಲೈನ್ ವ್ಯವಸ್ಥೆ ಜಾರಿ ಮಾಡುವ ಕಡೆ ಸರ್ಕಾರ ಚಿತ್ತ ನೆಟ್ಟಿದೆ. ಅದರಿಂದ ಕ್ರಾಂತಿಕಾರಕ ಬದಲಾವಣೆಯನ್ನು ಸರ್ಕಾರ ನಿರೀಕ್ಷೆ ಮಾಡಿದೆ.
ಹಿಂದೆ ಸರ್ಕಾರ ಮೊಬೈಲ್ ಒನ್, ಗ್ರಾಮ ಒನ್, ಜನಸೇವಕ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ತಾಲೂಕು ಕಚೇರಿಯ ಸೇವೆಗಳಿಗೆ ಆನ್​ಲೈನ್ ಸ್ಪರ್ಶದ ಮೂಲಕ ಇನ್ನಷ್ಟು ಹತ್ತಿರವಾಗುವಂತೆ ಮಾಡಲು ಮುಂದಾಗಿದೆ.
ತಾಲೂಕು ಕೇಂದ್ರದಲ್ಲಿ ತಹಸೀಲ್ದಾರ್ ಕಚೇರಿಯೇ ಸರ್ಕಾರ ಇದ್ದಂತೆ ಇದೆ. ತಾಲೂಕು ಮಟ್ಟದ ಇಲಾಖೆಗಳ ಜತೆ ಸಮನ್ವಯ ಸಾಧಿಸುವುದು ಇವರ ದೊಡ್ಡ ಜವಾಬ್ದಾರಿಯಾಗಿದೆ. ಸುಮಾರು 40 ರೀತಿಯ ವಿವಿಧ ಪ್ರಮಾಣ ಪತ್ರಗಳು, ಭೂಮಿಗೆ ಸಂಬಂಧಿಸಿದ ವಿಷಯಗಳು, ತಹಸೀಲ್ದಾರ್ ನ್ಯಾಯಾಲಯ, ಸಾಮಾಜಿಕ ಭದ್ರತೆ ಹೀಗೆ ಹೊಣೆಗಾರಿಕೆ ಹೆಚ್ಚಿದೆ. ಆದ್ದರಿಂದಲೇ ಯಾವ ತಾಲೂಕು ಕಚೇರಿಗೆ ಹೋದರು ಜನ ತುಂಬಿ ತುಳುಕುತ್ತಿರುತ್ತಾರೆ. ನಿಯಮಾವಳಿಗಳನ್ನು ಸರಳಗೊಳಿಸಿ ಜನರಿಗೆ ಹತ್ತಿರವಾಗುವ ರೀತಿಯಲ್ಲಿ ಸರ್ಕಾರ ಆಲೋಚಿಸುತ್ತಿದೆ.
ಸರ್ಕಾರದ ಉದ್ದೇಶವೇನು?:ತಾಲೂಕು ಕಚೇರಿಗಳಿಗೆ ಜನ ಅಲೆದಾಡುವುದನ್ನು ತಪ್ಪಿಸಬೇಕು. ಆಗ ಮಾತ್ರ ಸುಲಲಿತವಾದ ಆಡಳಿತ ನೀಡಲು ಸಾಧ್ಯವಾಗುತ್ತದೆ. ಆ ರೀತಿ ಆಗಬೇಕಾದರೆ ತಂತ್ರಜ್ಞಾನದ ಬಳಕೆ ಅನಿವಾರ್ಯ. ಅಲ್ಲಿ ಸಿಗುವ ಎಲ್ಲ ಸೇವೆಗಳು ಯಾಂತ್ರೀಕೃತಗೊಂಡಾಗ (ಆಟೋಮೇಷನ್) ಮಾತ್ರ ಜನ ಬರುವುದು ಕಡಿಮೆಯಾಗುತ್ತದೆ. ಆದಷ್ಟು ಬೇಗ ಸೇವೆ ಲಭ್ಯವಾಗುತ್ತದೆ. ಜನ ಬರುವುದು ಕಡಿಮೆಯಾದರೆ ಸುಲಿಗೆಯೂ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಈಗ ಕೆಲವು ಪ್ರಮಾಣ ಪತ್ರಗಳಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸೇವೆಗೆ ತಾವಿರುವ ಸ್ಥಳದಿಂದಲೇ ಆನ್​ಲೈನ್ ಮೂಲಕ ಪಡೆಯುವಂತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚರ್ಚೆ ಆರಂಭಿಸಿದ್ದಾರೆ.
ಸಕಾಲ ಮಾದರಿ:ಸಕಾಲ ಯೋಜನೆಯಲ್ಲಿ ಈಗ ಎಲ್ಲ ಸೇವೆಗಳನ್ನು ನೀಡಲು ಸಮಯ ನಿಗದಿಯಾಗಿದೆ. ಅದೇ ಮಾದರಿಯಲ್ಲಿ ತಾಲೂಕು ಕಚೇರಿಯ ಯೋಜನೆಗಳಿಗೆ ಗಡುವು ವಿಧಿಸುವ ಮೂಲಕ ಜನ ಅನಗತ್ಯ ಅಲೆದಾಟ ತಪ್ಪಿಸಬಹುದೆಂದು ಚರ್ಚೆಯಾಗಿದೆ. ಅದರಿಂದ ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆಯಾಗಲಿದೆ.
ಬಳಕೆ:ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳನ್ನು ಸಹ ಬಳಕೆ ಮಾಡಿಕೊಂಡು ಹಳ್ಳಿಗಳ ಮೂಲಕವೇ ಜನ ತಾಲೂಕು ಕಚೇರಿಯಿಂದ ತಮಗೆ ಬೇಕಾದ ಸೇವೆಗೆ ಅರ್ಜಿ ಸಲ್ಲಿಸಿ ಅಲ್ಲಿಯೇ ಪಡೆದುಕೊಳ್ಳಬಹುದು. ಆನ್​ಲೈನ್ ಮೂಲಕವೇ ಶುಲ್ಕ ಪಾವತಿಗೂ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬಹುದಾಗಿದೆ ಎಂದು ಮೂಲಗಳು ಹೇಳಿವೆ.
ಪ್ರತ್ಯೇಕ ಸಾಫ್ಟ್​ವೇರ್:ಎಲ್ಲ ಆನ್​ಲೈನ್ ಸೇವೆಗಳಿಗೆ ಭೂಮಿ ತಂತ್ರಾಂಶ ದಲ್ಲಿಯೇ ಅವಕಾಶ ಕಲ್ಪಿಸಬಹುದೇ ಅಥವಾ ಪ್ರತ್ಯೇಕ ಸಾಫ್ಟ್​ವೇರ್ ಬೇಕೆ ಎಂಬುದನ್ನು ಪರಿಶೀಲನೆ ಮಾಡ ಲಾಗುತ್ತಿದೆ. ತಜ್ಞರ ಅಭಿಪ್ರಾಯವನ್ನು ಆಧರಿಸಿ ಸರ್ಕಾರ ಹೆಜ್ಜೆಯನ್ನಿಡಲಿದೆ ಎಂದು ಕಂದಾಯ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಈಗ ಪರಿಹಾರ, ಪಹಣಿ ವಿವಿಧ ತಂತ್ರಾಂಶಗಳಿವೆ.
ಲಭ್ಯ ಪ್ರಮಾಣ ಪತ್ರಗಳು:ಜಾತಿ ಮತ್ತು ಆದಾಯ, ಬೇ ಬಾಕಿ, ನೆಲಸಿಗರು, ವಾಸ ದೃಢೀಕರಣ, ಕುಟುಂಬ ಸಮರ್ಥನ, ಜನನ ಮತ್ತು ಮರಣ, ರಾಷ್ಟ್ರೀಯತೆ ದೃಢೀಕರಣ, ಕೃಷಿ, ಕೃಷಿ ಕಾರ್ವಿುಕ, ಭೂ ರಹಿತ, ಭೂ ಮೌಲ್ಯ, ಹಕ್ಕು ಬದಲಾವಣೆ, ವಿಭಜನೆ, ವಾರಸುದಾರ, ಜಮೀನು ನೋಂದಣಿ ನಿರಪೇಕ್ಷಣಾ ಪತ್ರ, ಭೂ ಪರಿವರ್ತನೆ, ವೃದ್ದಾಪ್ಯ, ಅಂಗವಿಕಲ, ವಿಧವಾ, ಪ್ರಕೃತಿ ವಿಕೋಪ, ಬೆಳೆ ನಾಶ ಪರಿಹಾರ, ಬಂದೂಕು ಪರವಾನಗಿ, ಆದರ್ಶ ವಿವಾಹ.
ದೋಷ ತಿದ್ದುಪಡಿ:ಹಿಂದೆ ಸರ್ಕಾರ ಕಂದಾಯ ಅದಾಲತ್ ನಡೆಸಿದ್ದರ ಪರಿಣಾಮ 19.18 ಲಕ್ಷ ಪಹಣಿಯಲ್ಲಿದ್ದ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗಿದೆ. ಅಂತಹ ಅದಾಲತ್​ಗಳನ್ನು ಮುಂದುವರೆಸಬೇಕೆಂಬ ಬೇಡಿಕೆ ಇದೆ.
ತಾಲೂಕು ಕಚೇರಿಗೆ ಬರುವ ಜನ ಸುಲಿಗೆಗೆ ಒಳಗಾಗದೇ ಸುಲಲಿತ ಸೇವೆ ಸಿಗುವಂತಾಗಬೇಕು. ಅನಗತ್ಯ ಅಲೆದಾಟ ತಪ್ಪಿಸಬೇಕು. ಆದ್ದರಿಂದ ಕಚೇರಿಗಳನ್ನು ಆಟೋಮೇಷನ್ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಎಲ್ಲ ಸೇವೆಗಳನ್ನು ಆನ್​ಲೈನ್ ಮಾಡಿ ಸರಳ ಮಾಡುವುದು ಉದ್ದೇಶ.
| ಕೃಷ್ಣ ಬೈರೇಗೌಡ, ಕಂದಾಯ ಸಚಿವ
70ಕ್ಕೂ ಅಧಿಕ ಚಿನ್ನದ ಪದಕ ಗಳಿಸಿರುವ ‘ಯೋಗಸಂಧ್ಯಾ’; ಹೆಗ್ಗಡೆ-ಬಿಎಸ್​ವೈ ಅವರಿಂದ ಯೋಗರತ್ನ ಪ್ರಶಸ್ತಿ ಪ್ರದಾನ

ಆಸ್ಪತ್ರೆಯಲ್ಲಿದ್ದ ಸಂಬಂಧಿಯನ್ನು ನೋಡಲು ಬಂದವರೇ ಇನ್ನಿಲ್ಲ!; ತಾಯಿ ಸಾವು, ಮಗ-ಮೊಮ್ಮಗಳಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fourteen =
Remember me
