| ರುದ್ರಣ್ಣ ಹರ್ತಿಕೋಟೆ ಬೆಂಗಳೂರುಆಡಳಿತವನ್ನು ತಳಮಟ್ಟದಲ್ಲಿ ಚುರುಕುಗೊಳಿಸುವ ಉದ್ದೇಶ ದಿಂದ ಇದೇ ಮೊದಲ ಬಾರಿಗೆ ತಾಲೂಕು ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲು ನಿರ್ಧರಿಸಿದ್ದ ಸರ್ಕಾರ, ಆ ಅಧಿಕಾರಿಗಳಿಗೆ 23 ಜವಾಬ್ದಾರಿಗಳ ಚೌಕಟ್ಟು ರೂಪಿಸಿದೆ.
170 ತಾಲೂಕುಗಳಿಗೆ ಹಿರಿಯ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೆ ಸಿದ್ಧಪಡಿಸಲಾಗಿದೆ. ಉಳಿದ 66 ತಾಲೂಕುಗಳಿಗೆ ಕಿರಿಯ ದರ್ಜೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆಗೆ ಬಹುತೇಕ ಹೊಸ ವರ್ಷ ಜನವರಿಯಿಂದ ಆರಂಭ ಆಗಲಿದೆ. ಅಧಿಕಾರಿಗಳಲ್ಲಿ ಬಹುತೇಕರು ಉತ್ಸಾಹ ತೋರಿಸಿರುವುದು ವಿಶೇಷ.
ಸರ್ಕಾರ ರೂಪಿಸುವ ಯೋಜನೆಗಳು ತಾಲೂಕು ಮಟ್ಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಳಾಗಿರುವ ಐಎಎಸ್ ಅಧಿಕಾರಿಗಳಲ್ಲಿ ಬಹುತೇಕರು ತಾಲೂಕಿಗೆ ಹೋಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕುಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಆದ್ದರಿಂದಲೇ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಂಡಿದೆ. ಕೆಎಎಸ್ ಅಧಿಕಾರಿಗಳಾದರೆ ರಾಜ್ಯದವರೇ ಆಗಿರುತ್ತಾರೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರಿಗೂ ಕಾಳಜಿ ಇರುತ್ತದೆ. ಆದ್ದರಿಂದ ಕೆಎಎಸ್ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ತಾಲೂಕುಗಳ ಪ್ರಗತಿ ಕಾಣಬೇಕೆಂದರೆ ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿ ಸೂಚ್ಯಂಕ ಹೆಚ್ಚಾಗಬೇಕು. ಆ ರೀತಿಯಾಗಲು ಇಡೀ ತಾಲೂಕು ಆಡಳಿತ ಒಟ್ಟಾಗಿ ದುಡಿಯಬೇಕು. ಅದಕ್ಕೊಬ್ಬರ ನೇತೃತ್ವ ಬೇಕಾಗುತ್ತದೆ. ಆ ಕೆಲಸ ಉಸ್ತುವಾರಿ ಅಧಿಕಾರಿಗಳ ಮೂಲಕ ಮಾಡಲು ಸರ್ಕಾರ ಮುಂದಾಗಿದೆ.
ಜನಸ್ನೇಹಿ ಆಡಳಿತ:ತಳಮಟ್ಟದಲ್ಲಿ ಅಧಿಕಾರ ಸುಧಾರಣೆಯಾದರೆ ಮಾತ್ರ ಜನಸ್ನೇಹಿ ಆಡಳಿತ ನೀಡಲು ಸಾಧ್ಯವಾಗುತ್ತದೆ. ಬಹುತೇಕ ತಾಲೂಕುಗಳಲ್ಲಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಟ್ಟಾಗಿ ಸೇರಿಸಿದರೆ ಮಾತ್ರ ಯಾವುದೇ ಯೋಜನೆ ಪುನಾರಾವರ್ತನೆಯಾಗದಂತೆ, ಸರ್ಕಾರದ ಹಣ ಪೋಲಾಗದಂತೆ ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಕೆಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ.
ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಆದ್ಯತೆ: ರಾಜ್ಯದಲ್ಲಿ 100 ಅಧಿಕ ಆಕಾಂಕ್ಷಿ ತಾಲೂಕುಗಳಿವೆ. ಸರಾಸರಿ ಪ್ರಗತಿಗಿಂತ ಕಡಿಮೆ ಪ್ರಗತಿ ಸಾಧನೆ ಮಾಡಿವೆ. ಈ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಲಿಂಗ ಸಮಾನತೆ, ಬಡತನ ನಿವಾರಣೆ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಆಯಾಮಗಳನ್ನು ವೃದ್ಧಿಸಬೇಕಾಗಿದೆ. ಉಳಿದ ತಾಲೂಕುಗಳಲ್ಲಿ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗಬೇಕಾಗಿದೆ. ಆ ಕಾರ್ಯವನ್ನು ಉಸ್ತುವಾರಿ ಅಧಿಕಾರಿಗಳ ಮೂಲಕ ನಿರೀಕ್ಷೆ ಮಾಡಲಾಗುತ್ತಿದೆ.
ಗ್ಯಾರಂಟಿಗಳ ಪ್ರಚಾರ:ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿಯೇ ಸುಮಾರು 40 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವ ಗ್ಯಾರಂಟಿಗಳನ್ನು ಜಾರಿಗೆ ಕೊಟ್ಟಿದೆ. ಆದರೆ ತಳ ಮಟ್ಟದಲ್ಲಿ ಸಿಗಬೇಕಾದ ರೀತಿಯಲ್ಲಿ ಪ್ರಚಾರ ಸಿಗುತ್ತಿಲ್ಲ. ಅಧಿಕಾರಿ ವೃಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ತಾಲೂಕಿಗೆ ನೇಮಕವಾಗುವ ಉಸ್ತುವಾರಿ ಅಧಿಕಾರಿಗಳ ಮೂಲಕ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಉದ್ದೇಶ ಇದ್ದರೂ ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ.
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
