|ಕೆ.ಆರ್​. ಚಂದ್ರಶೇಖರ್​ಲಕ್ಕೂರುಇದು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿರೋದು ಒಟ್ಟು 7 ವಿದ್ಯಾರ್ಥಿಗಳು. ಅದರಲ್ಲಿ ಐವರು ತಮಿಳುನಾಡಿನ ಮಕ್ಕಳು! ಇವರ ಮಾತೃಭಾಷೆ ತಮಿಳು ಆದರೂ ಕನ್ನಡದ ಮೇಲೆ ಅಪಾರ ಪ್ರೀತಿ. ಕನ್ನಡ ಶಾಲೆಯಲ್ಲೇ ಓದುತ್ತಿದ್ದಾರೆ.
ಅಂದಹಾಗೆ ಈ ಶಾಲೆ ಇರೋದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗಡಿಭಾಗ ಹೊಸಮನೆಗಳು ಎಂಬ ಗ್ರಾಮದಲ್ಲಿ. ದಿನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಿಳುನಾಡಿನ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಇದು ಎರಡೂ ರಾಜ್ಯಗಳ ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ತಮಿಳುನಾಡಿನ ಹೊಸೂರು ತಾಲೂಕಿನ ಚಾಪರವಲ್ಲಿ ಗ್ರಾಮದ ಐವರು ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಿದ್ದು, 1 ನೇ ತರಗತಿಯಲ್ಲಿ ಜಿ.ಕುಮಾರ್​, 2ನೇ ತರಗತಿಯಲ್ಲಿ ಶಂಕರನ್​ ಹಾಗೂ ಪ್ರಜ್ವಲ್​, 3ನೇ ತರಗತಿಯಲ್ಲಿ ನಿತಿನ್​, 5ನೇ ತರಗತಿಯಲ್ಲಿ ದೀಪಾ ಕಲಿಯುತ್ತಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಕಲಿತಿದ್ದಾರೆ. ಚಾಪರವಲ್ಲಿಯಲ್ಲಿ ಶಾಲೆ ಇಲ್ಲ ಎಂದಲ್ಲ, ಅಲ್ಲಿಯೂ ತಮಿಳು ಶಾಲೆಯಿದ್ದರೂ ಕನ್ನಡ ಭಾಷೆ ಕಲಿಯಬೇಕೆನ್ನುವ ಹಂಬಲದಿಂದ ಈ ಶಾಲೆಗೆ ಬರುತ್ತಿದ್ದಾರೆ.ತಮಿಳುನಾಡು ರಾಜ್ಯದ ವಿದ್ಯಾರ್ಥಿಗಳು ಕನ್ನಡದ ಮಕ್ಕಳೊಡನೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಭೇದ ಭಾವವಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ಸತ್ಯನಾರಾಯಣ.
ಹೊರ ರಾಜ್ಯದ ಗಡಿ ಗ್ರಾಮಗಳಿಂದ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಹೀಗಿರುವಾಗ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಹಾಗಾಗಿ ಮಕ್ಕಳಿಗೆ ಬೇಕಾದ ಸೌಲಭ್ಯ ನೀಡಲಾಗುತ್ತಿದೆ.|ಚಂದ್ರಕಲಾಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ
ತಮಿಳುನಾಡಿನ ಗಡಿ ಭಾಗದ ಗ್ರಾಮದಿಂದ ನಮ್ಮ ಕನ್ನಡ ಶಾಲೆಗೆ ಮಕ್ಕಳು ಬಂದು ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಗೆ ಮೂಲಸೌಲಭ್ಯ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕಿದೆ.|ಉಮಾ ಜಲಂದರ್​ಗ್ರಾಪಂ ಅಧ್ಯಕ್ಷೆ ದಿನ್ನಹಳ್ಳಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 15 =
Remember me
