ಬೆಂಗಳೂರು: ಕರೊನಾ ಸೋಂಕು ತಡೆಗಟ್ಟಲು ನಾಕಾಬಂದಿ ವಿಚಾರದಲ್ಲಿಯೂ ತಮಿಳುನಾಡು ಸರ್ಕಾರ ಗಡಿ ಕ್ಯಾತೆಯನ್ನು ಬಿಟ್ಟಿಲ್ಲ.
ಗಡಿ ಮೀರಿ 50 ಮೀಟರ್ ಒಳಗೆ ಕರ್ನಾಟಕದ ನೆಲದಲ್ಲಿ ತಮಿಳುನಾಡು ಚೆಕ್​ಪೋಸ್ಟ್ ನಿರ್ವಿುಸಿದ್ದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಪರಿಶೀಲನೆ ನಡೆಸಿ ಅಲ್ಲಿಂದ ಎತ್ತಂಗಡಿ ಮಾಡುವಂತೆ ತಮಿಳುನಾಡು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಕರೊನಾ ಸೋಂಕು ಪರಿಣಾಮ ನಾಕಾಬಂದಿ ಮಾಡಿರುವ ಪೊಲೀಸರ ಕಾರ್ಯವೈಖರಿ ತಪಾಸಣೆಗೆ ಗೃಹ ಸಚಿವರು ಗುರುವಾರವೂ ರಸ್ತೆಗಿಳಿದು ಬಿಸಿ ಮುಟ್ಟಿಸಿದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಾಥ್ ನೀಡಿದರು. ಹೊಸೂರು ರಸ್ತೆ ಅತ್ತಿಬೆಲೆ ಕರ್ನಾಟಕ ಮತ್ತು ತಮಿಳುನಾಡು ಗಡಿಯ ಚೆಕ್​ಪೋಸ್ಟ್​ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ತಮಿಳುನಾಡು ಪೊಲೀಸರು ಕನ್ನಡ ನೆಲದಲ್ಲಿ ಚೆಕ್​ಫೋಸ್ಟ್ ನಿರ್ವಿುಸಿ ವಾಹನ ತಪಾಸಣೆ ನಡೆಸುತ್ತಿರುವುದು ನೋಡಿ ಅತ್ತಿಬೆಲೆ ಪೊಲೀಸರನ್ನು ಪ್ರಶ್ನಿಸಿದರು. ಅಲ್ಲಿಂದ ಎತ್ತಂಗಡಿ ಮಾಡಿಸುವಂತೆ ಆದೇಶಿಸಿದರು.
ವಾಹನಗಳನ್ನು ಖುದ್ದು ತಡೆದು ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಚಾಲಕ, ಪ್ರಯಾಣಿಕರನ್ನು ಪ್ರಶ್ನಿಸಿ ಅವರ ಬಳಿಯಿದ್ದ ಪಾಸ್​ಗಳ ವಿವರ ಪರಿಶೀಲನೆ ನಡೆಸಿದರು. ಕರೊನಾ ಲಾಕ್​ಡೌನ್ ಮುಗಿಯುವವರೆಗೂ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ವಾಹನ ಚಾಲಕರು ಹಾಗೂ ಸವಾರರಿಗೆ ಸೂಚನೆ ನೀಡಿದರು. ಸ್ಥಳೀಯ ಪೊಲೀಸರಿಗೂ ಕಟ್ಟುನಿಟ್ಟಾಗಿ ವಾಹನ ತಪಾಸಣೆ ನಡೆಸಿ ಒಳಗೆ ಬಿಡುವಂತೆ ಸೂಚನೆ ನೀಡಿದರು. ಬಿಬಿಎಂಪಿ ಗುತ್ತಿಗೆದಾರ ರಮಣ ರೆಡ್ಡಿ ಎಂಬಾತ ಪಾಸ್ ದುರುಪಯೋಗ ಪಡಿಸಿಕೊಂಡಿರುವುದು ಗೊತ್ತಾಗಿ ಸ್ಥಳದಲ್ಲೇ ಬೆಂಜ್ ಕಾರನ್ನು ಜಪ್ತಿ ಮಾಡಿಸಿದರು.
ಸಿಲಿಕಾನ್ ಸಿಟಿಯಲ್ಲಿ ಇನ್ನೂ ಮೂರು ದಿನ ಇರಲಿದೆ ಮಳೆ: ಗುರುವಾರ ಮುಸ್ಸಂಜೆ ಒಂದೂವರೆ ಗಂಟೆ ಸುರಿದ ವರುಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
