ಆನೇಕಲ್ (ಬೆಂಗಳೂರು):ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ತಾಳಿ ಕಟ್ಟಿದ ಪತಿಗೆ ಸಾವಿನ ದಾರಿ ತೋರಿಸಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಮೇತ ಸಿಕ್ಕಿಬಿದ್ದಿರುವ ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ಹಾರಗದ್ದೆಯಲ್ಲಿ ನಡೆದಿದೆ.
ಅಕ್ಟೋಬರ್​ 17ರಂದು ಕೊಲೆ ನಡೆದಿತ್ತು. ಮಾದೇಶ್ ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲಾಗಿತ್ತು. ಇದೇ ಪ್ರಕರಣದಲ್ಲಿ ಮೃತ ಮಾದೇಶ್​ ಪತ್ನಿ ಪ್ರೇಮಾ, ಆಕೆಯ ಪ್ರಿಯಕರ ಶಿವಮಲ್ಲ ಅಲಿಯಾಸ್​ ಕರಿಯ ಮತ್ತು ಕೊಲೆಗೆ ಸಹಕರಿಸಿದ ಸ್ನೇಹಿತ ಮಲ್ಲೇಶ್​ನನ್ನು ಬಂಧಿಸಲಾಗಿದೆ.
ಪ್ರೇಮಾ ಮತ್ತು ಮಾದೇಶ್​ ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಇವರು ತಮಿಳುನಾಡು ಮೂಲದವರು. ಕೆಲಸ ಅರಸಿ ಜಿಗಣಿಯಲ್ಲಿ ವಾಸವಿದ್ದರು. ಕರೊನಾ ಲಾಕ್​ಡೌನ್ ಸಮಯದಲ್ಲಿ ದಂಪತಿ ತಮಿಳುನಾಡಿಗೆ ಹೋಗಿದ್ದರು. ಆಗ ಆರೋಪಿ ಕರಿಯ ಮತ್ತು ಪ್ರೇಮಾ ನಡುವೆ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿ:ಕುತ್ತಿಗೆಯಲ್ಲಾದ ಬದಲಾವಣೆ ನಿರ್ಲಕ್ಷಿಸಿದ ಯುವತಿ: ಕೊನೆಗೆ ವೈದ್ಯರ ಬಳಿ ಹೋದವಳಿಗೆ ಕಾದಿತ್ತು ಶಾಕ್​!
ಪ್ರೇಮಾಗೆ ಮದುವೆಯಾಗಿ ಮಕ್ಕಳಿದ್ದರು ಸಹ ಕರಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇಬ್ಬರ ಅಕ್ರಮ ಸಂಬಂಧ ಪತಿಗೆ ತಿಳಿದಿರಲಿಲ್ಲ. ಈ ನಡುವೆ ಪ್ರೇಮಾ, ಪ್ರಿಯಕರ ಕರಿಯ ಜತೆ ಬಾಳುವುದಕ್ಕೆ ನಿರ್ಧಾರ ಮಾಡಿದ್ದಳು. ಆದರೆ, ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಗೋಡೆಯಾಗಿದ್ದರಿಂದ ಆತನನ್ನು ಕೊಲೆ ಮಾಡಲು ಪ್ರಿಯಕರನ ಜತೆ ಸೇರಿ ಸಂಚು ರೂಪಿಸಿದ್ದಳು.
ಕರಿಯನಿಗೆ ಸಾಥ್​ ನೀಡಿದ ಸ್ನೇಹಿತ ಮಲ್ಲೇಶ್, ಮಾದೇಶ್​ನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಮಾದೇಶ್​ ಕುಟಂಬದ ಮೇರೆಗೆ ದೂರು ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಶುರುವಾಗಿದೆ 5 ಅಂತಸ್ತಿನ ವಯಸ್ಕರ ಥೀಮ್​ಪಾರ್ಕ್​- ಪೋರ್ನ್​ ಸ್ಟಾರ್​ಗಳಿಂದಲೇ ಸೇವೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
