ಚಾಮರಾಜನಗರ:ದೇಶಾದ್ಯಂತ ಕೋಲಾಹಲ ಎಬ್ಬಿಸಿದ್ದ ಕೇರಳದ ಗರ್ಭಿಣಿ ಆನೆ ಕೊಲೆ ಪ್ರಕರಣ ಜನಮಾನಸದಲ್ಲಿ ಮರೆಯಾಗುವ ಮುನ್ನವೇ ದುರುಳರು ಗರ್ಭಿಣಿ ಕಾಡೆಮ್ಮೆಯನ್ನು ಬೇಟೆಯಾಡಿ ವಿಕೃತಿ ಮೆರೆದಿದ್ದರು. ಇದೀಗ ಇಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ತಮಿಳುನಾಡಿನ ಮಧುಮಲೈನಲ್ಲಿ ಸಂಭವಿಸಿದ್ದು, ಹುಲಿ ಮತ್ತು ಐದು ಕೆನ್ನಾಯಿಗಳು ಮೃತಪಟ್ಟಿವೆ.
ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಮತ್ತು ಐದು ಕೆನ್ನಾಯಿಗಳು ಮೃತಪಟ್ಟಿದ್ದು, ಕಾಡುಹಂದಿ ಮಾಂಸಕ್ಕೆ ವಿಷವಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಹುಲಿ ಸತ್ತ ಜಾಗದಲ್ಲೇ ಎರಡು ಹುಲಿಮರಿಗಳನ್ನು ರಕ್ಷಣೆ ಮಾಡಲಾಗಿದ್ದು, ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ಮೂಖರೋದನ ಮನಕಲಕುವಂತಿದೆ.
ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಸಿಂಗಾರಾ ಅರಣ್ಯ ವ್ಯಾಪ್ತಿಯಲ್ಲಿ ಕೆಲ ದಿನಗಳ‌ ಹಿಂದೆ ಹುಲಿ ಸತ್ತ ಜಾಗದಲ್ಲೇ 5 ಕೆನ್ನಾಯಿಗಳು ವಿಷ ಪ್ರಾಷನದಿಂದ ಮೃತಪಟ್ಟಿವೆ ಎನ್ನಲಾಗಿದೆ. ಇದೀಗ ಹುಲಿ ಸಾವಿನ‌ ಸುತ್ತ ಅನುಮಾನ ಹುತ್ತ ಬೆಳೆದಿದೆ.
ಸೂಕ್ತ ತನಿಖೆ ನಡೆಸುವಂತೆ ಯುನೈಟೆಡ್ ಕನ್ಸರ್​ವೇಶನ್ ಮೂವ್​ಮೆಂಟ್ ವತಿಯಿಂದ ಪ್ರಧಾನಿಗೆ ಟ್ವೀಟ್ ಮಾಡಲಾಗಿದೆ.
ಮಾಂಸದ ಹಸಿವಿನಿಂದ ಗರ್ಭಿಣಿ ಕಾಡೆಮ್ಮೆ ಹತ್ಯೆ, ಐವರ ಬಂಧನ

ಆನೆಗಳನ್ನು ಹೀಗೆ ದಾರುಣವಾಗಿ ಕೊಲ್ಲುವುದು ಕೇರಳದಲ್ಲಿ ಮಾಮೂಲಿಯಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
