ಬೆಂಗಳೂರು:ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕತೆ ತರಲು ಮತ್ತು ವ್ಯವಸ್ಥೆ ಸುಧಾರಿಸುವ ದೃಷ್ಟಿಯಲ್ಲಿ ಮೇಜರ್ ‘ಸರ್ಜರಿ’ ನಡೆಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ವಿಜಯವಾಣಿಯೊಂದಿಗಿನ ಸಂವಾದದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸರ್ಕಾರ ತಕ್ಷಣವೇ ಕೈಗೊಳ್ಳುವ ಎರಡು ಮಹತ್ವದ ನಿರ್ಧಾರಗಳ ಬಗ್ಗೆ ತಿಳಿಸಿದ್ದಾರೆ.ಸರ್ಕಾರಿ ಆಸ್ಪತ್ರೆಗಳ ಆಡಳಿತ ವ್ಯವಸ್ಥೆಯನ್ನು ರಿಪೇರಿ ಮಾಡಲು ಹಾಗೂ ಕೆಳಮಟ್ಟದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರಕ್ಕೆ ನಿಯಂತ್ರಣ ಹಾಕಲು ಅಧಿಕಾರಯುತ ಟಾಸ್ಕ್ ಫೋರ್ಸ್ ರಚನೆಯಾಗಲಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾಗೂ ರೋಗಿಗಳು – ರೋಗಿಗಳ ಸಂಬಂಧಿಗಳೊಂದಿಗೆ ಸಮಾಲೋಚನೆ ಮಾಡಿ ಪರಿಸ್ಥಿತಿ ಅರಿತುಕೊಳ್ಳಲಿದೆ. ಈ ಕಾರ್ಯಕ್ಕಾಗಿ ಟಾಸ್ಕ್​ಫೋರ್ಸ್​ಗೆ ಹೆಚ್ಚಿನ ಅಧಿಕಾರವನ್ನೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಅನೇಕ ಸಂದರ್ಭದಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸಾ ವೆಚ್ಚದಲ್ಲಿ ಅನೇಕ ಹಿಡನ್ ಕಾಸ್ಟ್​ಗಳ ಪ್ರಮಾಣವೇ ಹೆಚ್ಚಿರುತ್ತದೆ. ಶೇ.10-15 ಹೆಚ್ಚಾದರೆ ಒಪ್ಪಿಕೊಳ್ಳಬಹುದು, ಶೇ. 200-300 ಹೆಚ್ಚಾಗುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ದರದ ವಿಷಯದಲ್ಲಿ ಪಾರದರ್ಶಕತೆ ತರಲು ಬಯಸಲಾಗಿದೆ.
ಖಾಸಗಿಯವರ ಜತೆ ಚರ್ಚೆ ಮಾಡಿಯೇ, ದರ ನಿಯಂತ್ರಣ ಮಾಡುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಜನರಿಗೆ ಅನಗತ್ಯ ಹೊರೆ ಹಾಕುವುದನ್ನು ತಡೆಯಲಾಗುತ್ತದೆ. ದರ ನಿಯಂತ್ರಣ ಹಾಗೂ ಪಾರದರ್ಶಕತೆಗಾಗಿ ತಜ್ಞರ ಸಮಿತಿ ರಚಿಸಲಾಗುತ್ತದೆ, ಅದರಲ್ಲಿ ಖಾಸಗಿ ಆಸ್ಪತ್ರೆಯವರನ್ನು ಸೇರಿಸಿಕೊಂಡು ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುತ್ತದೆ ಎಂದರು.
ಯಾರಿರಲಿದ್ದಾರೆ ತಂಡದಲ್ಲಿ?:ಆಸ್ಪತ್ರೆಗಳ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಜಿಲ್ಲಾಮಟ್ಟದಲ್ಲಿ ರಚಿಸುವ ಟಾಸ್ಕ್​ಫೋರ್ಸ್​ನಲ್ಲಿ ತಜ್ಞರು ಹಾಗೂ ವಿವಿಧ ಕ್ಷೇತ್ರದ ಪ್ರಮುಖರು ಇರಲಿದ್ದಾರೆ. ಈ ತಂಡ ಆಸ್ಪತ್ರೆಗಳಿಗೆ ಹಠಾತ್ ಭೇಟಿಕೊಡುವ ಮೂಲಕ ಪರಿಶೀಲನೆ ನಡೆಸುತ್ತದೆ. ಈ ರೀತಿ ಮಾಡುವುದರಿಂದ ಒಮ್ಮೆಲೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳುವುದಿಲ್ಲ, ಹಂತಹಂತವಾಗಿ ಸುಧಾರಣೆಯಾಗಬಹುದು ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಆರೋಗ್ಯ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಅಧಿಕಾರಯುತ ಟಾಸ್ಕ್​ಫೋರ್ಸ್ ರಚಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು.
|ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ಶೀಘ್ರ 4000 ನೇಮಕಾತಿ:ಸರ್ಕಾರಿ ಆಸ್ಪತ್ರೆಯಲ್ಲಿನ ಆರೋಗ್ಯ ಸೇವೆಗೆ ಪೂರಕವಾಗಿ ವಿವಿಧ ಸೇವೆಗೆ ಅಗತ್ಯವಾದ 4 ಸಾವಿರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ. ನೇರ ನೇಮಕ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. 10000 ಹುದ್ದೆ ಭರ್ತಿಯ ಅವಶ್ಯಕತೆಯನ್ನು ಸಿಎಂಗೆ ತಿಳಿಸಲಾಗಿದೆ. ಮೊದಲ ಹಂತದಲ್ಲಿ 3-4 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಬಹುದೆಂದು ಹೇಳಿದ್ದಾರೆ, ಇದೀಗ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದರು. ನರ್ಸ್, ಟೆಕ್ನಿಷಿಯನ್, ಸಹಾಯಕ ಸಿಬ್ಬಂದಿಯನ್ನು ಆದ್ಯತೆ ಮೇಲೆ ನೇಮಕ ಮಾಡಲು ಆರೋಗ್ಯ ಇಲಾಖೆ ಬಯಸಿದೆ.
ಸಿಎಂ ದೃಷ್ಟಿಭಾಗ್ಯ ಯೋಜನೆ:ಅರವತ್ತು ವರ್ಷ ದಾಟಿದ ಎಲ್ಲರ ಕಣ್ಣುಗಳ ತಪಾಸಣೆ ನಡೆಸುವ ದೊಡ್ಡ ಕಾರ್ಯಕ್ರಮ ‘ಸಿಎಂ ದೃಷ್ಟಿ ಭಾಗ್ಯ’ಮುಂದಿನ 3ತಿಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಕಣ್ಣಿನ ಚಿಕಿತ್ಸೆ, ಆರೈಕೆ, ಸಲಕರಣೆಗಳನ್ನು ಪೂರೈಸುವ ಈ ಕಾರ್ಯಕ್ರಮದಿಂದ ಬಡವರು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಜಿಲ್ಲಾಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್:ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾರ್ಗದರ್ಶನ ಮಾಡಲು ಮುಂದಿನ 15 ದಿನಗಳೊಳಗಾಗಿ ಹೆಲ್ಪ್ ಡೆಸ್ಕ್ ಆರಂಭಿಸಲಾಗುತ್ತದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯ ಕೇಂದ್ರಕ್ಕೆ ನಾಲ್ವರು ಸಿಬ್ಬಂದಿ ನೇಮಿಸಲಾಗುತ್ತದೆ. ಅವರು ರೋಗಿಗಳು ಆಗಮಿಸುತ್ತಿದ್ದಂತೆ ಅವರ ಅಗತ್ಯತೆ ತಿಳಿದು ಮಾರ್ಗದರ್ಶನ ಮಾಡಿ, ಯಾವ ಘಟಕಕ್ಕೆ ತಲುಪಬೇಕೋ ಅಲ್ಲಿಗೆ ಖುದ್ದು ಕರೆದೊಯ್ಯುತ್ತಾರೆ. ಹತ್ತರಿಂದ ಹದಿನೈದು ದಿನದಲ್ಲಿ ಈ ಸೇವೆ ಮೂವತ್ತೊಂದು ಜಿಲ್ಲೆಗಳಲ್ಲಿಯೂ ಆರಂಭವಾಗಲಿದೆ. ಮುಂದೆ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಗೇಮ್ ಚೇಂಜರ್ ನಮ್ಮ ಕ್ಲಿನಿಕ್:ನಗರಪ್ರದೇಶದ ಬಡವರನ್ನು ಗುರಿಯಾಗಿಸಿಡು ‘ನಮ್ಮ ಕ್ಲಿನಿಕ್’ ಆರಂಭಿಸಲಾಗುತ್ತಿದೆ, ಈ ಕಾರ್ಯಕ್ರಮ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಾಖ್ಯಾನಿಸಿದ್ದಾರೆ. ಜನವರಿ ಅಂತ್ಯದೊಳಗೆ ರಾಜ್ಯಾದ್ಯಂತ 150 ಕೋಟಿ ರೂ. ವೆಚ್ಚದಲ್ಲಿ 438 ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲಾಗುವುದು. ಮೊದಲ ಹಂತವಾಗಿ ಬಿಬಿಎಂಪಿ ಹೊರತುಪಡಿಸಿ ಉಳಿದ ನಗರಗಳಲ್ಲಿ ಡಿ.14ರಂದು 114 ಕ್ಲಿನಿಕ್​ಗಳು ಏಕಕಾಲದಲ್ಲಿ ಉದ್ಘಾಟನೆಗೊಳ್ಳಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಚಿತ ಆರೋಗ್ಯ ಸೇವೆ ನೀಡುವ 114 ‘ನಮ್ಮ ಕ್ಲಿನಿಕ್’ ರಾಜ್ಯದಲ್ಲಿ ಏಕಕಾಲಕ್ಕೆ ಉದ್ಘಾಟನೆ; ಎಲ್ಲೆಲ್ಲಿ, ಯಾವಾಗ? ಇಲ್ಲಿದೆ ಮಾಹಿತಿ
‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
