ಬೆಂಗಳೂರು:ಬೇಸಿಗೆಯ ರಣ ಬಿಸಿಲಿನಿಂದ ಬಚಾವ್ ಆಗಲು ರಾಜಧಾನಿ ಜನ, ತಂಪುಪಾನಿಯ ಮೊರೆ ಹೋಗುತ್ತಿದ್ದಾರೆ. ಈ ರಣ ಬಿಸಿಲಿನಿಂದ ಮಾನವರು, ಪ್ರಾಣಿ, ಪಕ್ಷಿಗಳಿಗೆ ಮಾತ್ರವಲ್ಲದೇ ಕೆಲವು ವಸ್ತುಗಳ ಮೇಲೆಯೂ ಬಿಸಿಲು ಪ್ರಭಾವ ಬೀರಿದೆ.
ಟಾಟಾ ಹ್ಯಾರಿಯರ್‌ನ ಮುಂಭಾಗದ ಬಂಪರ್ ಭಾರೀ ಶಾಖದಿಂದಾಗಿ ಕರಗಲು ಪ್ರಾರಂಭಿಸಿತು. ಈ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.ಸೌರವ್ ನಹತಾ ಎಂಬ ಹೆಸರಿನ ಕಾರು ಮಾಲೀಕರು ತಮ್ಮ ಟ್ವೀಟ್‌ನಲ್ಲಿ, ʻತನ್ನ ಎಸ್‌ಯುವಿಯನ್ನು ತಮ್ಮ ಕಚೇರಿಯ ಹೊರಗೆ ನಿಲ್ಲಿಸಿದ್ದರು. ನಂತರ ಕಾರಿನ ಬಳಿ ಬಂದಾಗ ಸೂರ್ಯನ ಶಾಖದಿಂದ ʻಟಾಟಾ ಹ್ಯಾರಿಯರ್‌ʼ ನ ಮುಂಭಾಗದ ಬಂಪರ್ ಕರಗಿದ್ದನ್ನು ಗಮನಿಸಿದೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅದರ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
I drive a Tata Harrier since Dec 2021. My reasons for buying Tata Harrier:1. Good reviews on@TeamBHPforum2. Excellent build quality reviews onlineThis is what happened standing for 10 hr in Bangalore Sun on 12th Apriland@TataMotors_Carsis asking me to pay for it now!pic.twitter.com/TUbLA8OSSO
— Saurav Nahata (@iamsauravnahata)April 18, 2023

ಏಪ್ರಿಲ್ 12 ರಂದು ತನ್ನ ಕಾರನ್ನು 10 ಗಂಟೆಗಳ ಕಾಲ ಬೆಂಗಳೂರಿನ ಬಿಸಿಲಿನಲ್ಲಿ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಫೋಟೋದಲ್ಲಿ ಮುಂಭಾಗದ ಗ್ರಿಲ್ ಮತ್ತು ಬಂಪರ್ ಕರಗುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ:ಖೇಲ್ ಖತಮ್..ನನ್ನ ದುಡ್ಡು ಹೋಯ್ತು, ಈಗೇನು ಮಾಡ್ಲಿ?: ಅಮಿತಾಭ್​​ ಬಚ್ಚನ್​​2021 ಡಿಸೆಂಬರ್ ನಿಂದ ಟಾಟಾ ಹ್ಯಾರಿಯರ್ ಕಾರ್​​ ಬಳಸುತ್ತಿದ್ದಾರೆ. ಅದರ ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತೆಯ ರೇಟಿಂಗ್‌ಗಳ ಸಕಾರಾತ್ಮಕ ವಿಮರ್ಶೆಗಳಿಂದಾಗಿ ಅವರು ಎಸ್‌ಯುವಿಯನ್ನು ಖರೀದಿಸಿದ್ದರು. ಆದಾಗ್ಯೂ, ಇದು ನಿರೀಕ್ಷೆಗಳಿಗೆ ತಕ್ಕಂತೆ ಬಾಳಕೆ ಬಂದಿಲ್ಲ. ಸಾಮಾನ್ಯ ಶಾಖದ ಅಲೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ, ಗ್ರಾಹಕರು ನಿರಾಶೆಗೊಂಡಿದ್ದಾರೆ.
ಸ್ವಾಭಿಮಾನ ಇದ್ದವರು ಜೆಡಿಎಸ್ ಪಕ್ಷದಲ್ಲಿ ಇರಲ್ಲ: ಸುಮಲತಾ ಅಂಬರೀಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
