ಬೆಂಗಳೂರು:ಸೊರಗುತ್ತಿರುವ ರಾಜ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳ ಪಾಲಿಗೆ ಆಶಾಕಿರಣ ಗೋಚರಿಸಿದೆ. ಟಾಟಾ ಟೆಕ್ನಾಲಜೀಸ್ ಲಿ. ಸಹಭಾಗಿತ್ವದಡಿ 150 ಐಟಿಐಗಳನ್ನು 4636.50 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಐಟಿಐಗಳ ಮೇಲ್ದರ್ಜೆ ಜತೆಯಲ್ಲೇ ಪ್ರಸ್ತುತ ಕೈಗಾರಿಕೆ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲ ಸೃಷ್ಟಿಸಲು ಬದಲಾವಣೆ ತರುವುದು ಸೇರಿದಂತೆ ಡಿಜಿಟಲ್ ಉಪಕ್ರಮ ತರಲಾಗುತ್ತಿದೆ. ಟಾಟಾ ಟೆಕ್ನಾಲಜೀಸ್ ಈಗಾಗಲೇ ಮಹಾರಾಷ್ಟ್ರದಲ್ಲಿ ಇದೇ ರೀತಿ ಯೋಜನೆ ಕೈಗೆತ್ತಿಕೊಂಡಿದ್ದು, ಮೂರು ವರ್ಷದಲ್ಲಿ 419 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಒಪ್ಪಂದ ಮಾಡಿಕೊಂಡಿದೆ.
ಪಾಲುದಾರಿಕೆ ಪಾತ್ರವೇನು?:150 ಸ್ವಂತ ಕಟ್ಟಡದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಟಾಟಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಆಧುನಿಕ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಹೊಸ ತಂತ್ರಜ್ಞಾನ ಯಂತ್ರೋಪಕರಣ ಅಳವಡಿಸಲಾಗುತ್ತದೆ.ಇದನ್ನೂ ಓದಿ:VIRAL | ರಸ್ತೆ ಬದಿ ಪೊದೆಯಲ್ಲಿ ರಾಹುಲ್: ವಿಡಿಯೋ ವೈರಲ್​.. ಹಿನ್ನೆಲೆ ಏನು..?
ಕೈಗಾರಿಕೆಗಳ ಜತೆ ಲಿಂಕೇಜ್/ಪಾಲುದಾರಿಕೆ ಮಾಡಿಕೊಂಡು ಉದ್ಯೋಗಕ್ಕಾಗಿ ಟೆಕ್ನಾಲಜಿ ಹಬ್​ಗಳನ್ನು ತೆರೆದು ತರಬೇತಿ ಪಡೆಯುವವರಿಗೆ ರಾಜ್ಯದ ಹಾಗೂ ಹೊರ ರಾಜ್ಯದ ಉದ್ದಿಮೆಗಳ ಬೇಡಿಕೆಗೆ ಅನುಸಾರವಾಗಿ ಕೌಶಲ ಉನ್ನತೀಕರಿಸಲಾಗುತ್ತದೆ.
ಪ್ರತಿ ಐಟಿಐಗೆ  3.71 ಕೋಟಿ ರೂ., ಶೇ.18 ಜಿಎಸ್​ಟಿ ಒಟ್ಟು  4.38 ಕೋಟಿ ರೂ. ನಂತೆ 657 ಕೋಟಿ ರೂ.ಭರಿಸಬೇಕು. ಸದ್ಯ ಈ 150 ಐಟಿಐ ಕಾಲೇಜುಗಳಿಗೆ ಹೊಸ ಯಂತ್ರೋಪಕರಣ ಇಡಲು ಹೆಚ್ಚುವರಿ ಕಟ್ಟಡ ಕಾಮಗಾರಿ, ದುರಸ್ತಿ, ಪೀಠೋಪಕರಣ, ಹೆಚ್ಚುವರಿ ವಿದ್ಯುತ್ ಸಂಪರ್ಕ, ನೆಟ್​ವರ್ಕಿಂಗ್ ಇತ್ಯಾದಿಗಾಗಿ ಅಗತ್ಯ ಅಂದಾಜು ಮೊತ್ತ 105 ಕೋಟಿ ರೂ.ಗಳನ್ನು ಕರ್ನಾಟಕ ಕೌಶಲ ಅಭಿವೃದ್ಧಿಯಲ್ಲಿರುವ ಅನುದಾನ ಬಳಸಿಕೊಂಡು ಕಾಮಕಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗೆಯೇ 657 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಸಾಲ ಪಡೆಯಲೂ ಸಂಪುಟ ಒಪ್ಪಿಗೆ ನೀಡಿದೆ.ಇದನ್ನೂ ಓದಿ:ಯುಪಿ ಸರ್ಕಾರದ ವಿರುದ್ಧ ದೇವೇಗೌಡರ ಆಕ್ರೋಶ; ಪಿಯಾಂಕಾ, ರಾಹುಲ್​​ರನ್ನು ಬಿಡುಗಡೆ ಮಾಡಲು ಆಗ್ರಹ
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 76 ಸಾವಿರ ಕಟ್ಟಡ ಕಾರ್ವಿುಕರಿಗೆ ಅವಶ್ಯವಾದ ಮೇಸನ್ ಟೂಲ್ ಕಿಟ್​ಗಳನ್ನು -ಠಿ;23.18 ಕೋಟಿ ವೆಚ್ಚದಲ್ಲಿ ಖರೀದಿಸಲು ಹಾಗೂ 90 ಸಾವಿರ ಕಟ್ಟಡ ಕಾರ್ವಿುಕರಿಗೆ ಅವಶ್ಯಕವಾದ ಸೇಫ್ಟಿ ಕಿಟ್​ಗಳನ್ನು 42.39 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಮೇಸನ್ ಕಿಟ್​ನಲ್ಲಿ ಕರಣೆಗಳು, ಮಟ್ಟಗೋಲು, ಮೂಲೆಮಟ್ಟ ಇತ್ಯಾದಿ ಪರಿಕರಗಳಿದ್ದರೆ, ಸೇಫ್ಟಿ ಕಿಟ್​ನಲ್ಲಿ ಜಾಕೆಟ್, ಹೆಲ್ಮೆಟ್, ಗ್ಲೌಸ್, ಶೂಸ್ ಇರುತ್ತದೆ ಎಂದು ತಿಳಿದುಬಂದಿದೆ.
ಬೆಂಗಳೂರು:ಭೂಸುಧಾರಣಾ ಕಾಯ್ದೆ, ಎಪಿಎಂಸಿ ಮತ್ತು ಕೈಗಾರಿಕೆ ವಿವಾದಗಳ ಕಾಯ್ದೆಗಳ ತಿದ್ದುಪಡಿ ಜಾರಿಗೆ ವಿಧಾನಮಂಡಲ ಅಧಿವೇಶನದಲ್ಲಿ ಪೂರ್ಣ ಸಹಮತಿ ಸಿಗದ ಕಾರಣ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ಎರಡು ವಿಧೇಯಕಗಳು ವಿಧಾನಪರಿಷತ್​ನಲ್ಲಿ ಅನುಮೋದನೆಗೆ ಬಾಕಿ ಇವೆ, ಕೈಗಾರಿಕೆ ವಿವಾದ ಕಾಯ್ದೆಗೆ ವಿಧಾನ ಪರಿಷತ್​ನಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಅಧಿವೇಶನ ಪೂರ್ವಭಾವಿಯಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಕಾಯ್ದೆಯನ್ನು ಜೀವಂತವಾಗಿಡುವುದಕ್ಕಾಗಿ ಪುನಃ ಸುಗ್ರೀವಾಜ್ಞೆ ತರಲಾಗಿದೆ. ಮುಂದಿನ ಹಂತವಾಗಿ ಸಂಪುಟದ ತೀರ್ವನವನ್ನು ರಾಜ್ಯಪಾಲರಿಗೆ ಕಳಿಸಿ ಒಪ್ಪಿಗೆ ಪಡೆಯಲಾಗುತ್ತದೆ.
ಮುಂದಿನ 6 ತಿಂಗಳು ಈ ಸುಗ್ರೀವಾಜ್ಞೆಗೆ ಜೀವ ಇರಲಿದ್ದು, ಅಷ್ಟರೊಳಗೆ ಸರ್ಕಾರ ಅಧಿವೇಶನ ಕರೆದು ಎರಡೂ ಸದನಗಳ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಕೈಗಾರಿಕೆ ಕಾಯ್ದೆ ವಿಧಾನಪರಿಷತ್​ನಲ್ಲಿ ಬಿದ್ದುಹೋದ ಪರಿಣಾಮ ಅದು ಪುನಃ ವಿಧಾನಸಭೆ ಮುಂದೆ ಬರಲಿದ್ದು, ಅಲ್ಲಿ ಒಪ್ಪಿಗೆ ಪಡೆದುಕೊಂಡರೂ ಸಾಕಾಗುತ್ತದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಬಂದರೆ, ಮೊದಲ ಸುಗ್ರೀವಾಜ್ಞೆಯಲ್ಲಿ 5 ಜನರಿರುವ ಕುಟುಂಬ 108 ಎಕರೆ ಭೂಮಿ ಖರೀದಿಸಲು ಅವಕಾಶ ನೀಡಲಾಗಿತ್ತು.
ಈಗ ವಿಧಾನಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದಂತೆ 5 ಜನರ ಕುಟುಂಬಕ್ಕೆ 54 ಎಕರೆ ಭೂಮಿ ಸೀಮಿತಗೊಳಿಸಿ ಸುಗ್ರೀವಾಜ್ಞೆ ಪ್ರಕಟಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಮೂರು ಕ್ಲಸ್ಟರ್ ವಿಶ್ವವಿದ್ಯಾಲಯ ವಿಚಾರವು ವಿಧಾನಸಭೆಯಲ್ಲೇ ಬಾಕಿ ಇರುವುದರಿಂದ ಅದಕ್ಕೂ ಮತ್ತೊಮ್ಮೆ ಸುಗ್ರೀವಾಜ್ಞೆ ತರಲಾಗುತ್ತಿದೆ.
ರಾಜ್ಯದಲ್ಲಿ ಶೇ.97 ಕರೊನಾ ಸೋಂಕಿತರಿಗೆ ಲಕ್ಷಣಗಳೇ ಇಲ್ಲ; ಅದರಲ್ಲೂ ಈ ಜಿಲ್ಲೆ ಮುಂಚೂಣಿಯಲ್ಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × five =
Remember me
