ಬೆಂಗಳೂರು:ಜನ ಸಾಮಾನ್ಯರಿಗೆ ಅನುಕೂಲತೆ, ಉತ್ತಮ ತೆರಿಗೆ ಸಂಗ್ರಹದ ದೃಷ್ಟಿಯಿಂದ ತೆರಿಗೆ ಕಾಯ್ದೆಗಳ ಸರಳೀಕರಣ ಅಗತ್ಯ. ದೇಶದ ಆರ್ಥಿಕತೆಯನ್ನು ತೆರಿಗೆ ಸಂಗ್ರಹದ ಮೂಲಕ ಅಳೆಯಲಾಗುತ್ತದೆ. ಹೆಚ್ಚೆಚ್ಚು ತೆರಿಗೆ ಸಂಗ್ರಹವು ದೇಶದ ಅಭಿವೃದ್ಧಿಯ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅರಮನೆ ಮೈದಾನದಲ್ಲಿ ತೆರಿಗೆ ಸಲಹೆಗಾರರ ಹಾಗೂ ತೆರಿಗೆ ವೃತ್ತಿಪರರ ರಾಷ್ಟ್ರೀಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಆಡಳಿತ ನಡೆಸುವವರು ಕಾಯ್ದೆ ಜಾರಿಗೊಳಿಸುತ್ತೇವೆ. ಅದನ್ನು ಅರ್ಥ ಮಾಡಿಕೊಂಡು, ಅನುಷ್ಠಾನಕ್ಕೆ ತರುವ ಕೆಲಸವನ್ನು ತೆರಿಗೆ ಸಲಹೆಗಾರರು ಮಾಡುತ್ತಿದ್ದಾರೆ. ಸರ್ಕಾರ ಮತ್ತು ವ್ಯಾಪಾರಿ ಸಮುದಾಯದ ಭಾಗವಾಗಿ ದ್ವಿಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ವ್ಯಾಪಾರ ಹಾಗೂ ತತ್ವಜ್ಞಾನದಲ್ಲಿ ಲಾಭ-ನಷ್ಟದ ಲೆಕ್ಕಾಚಾರಗಳು ತದ್ವಿರುದ್ಧವಾಗಿವೆ. ವಾಸ್ತವಿಕವಾಗಿ ವ್ಯಾಪಾರದಲ್ಲಿ ಪಾಪ-ಪುಣ್ಯ, ತತ್ವಜ್ಞಾನದಲ್ಲಿ ಲಾಭ-ನಷ್ಟದ ಲೆಕ್ಕ ಹಾಕಬೇಕು. ಸಾಮಾನ್ಯ ಜನರು ದೇಶದ ಆರ್ಥಿಕತೆಯಲ್ಲಿ ಪ್ರಮುಖಪಾತ್ರವಹಿಸುತ್ತಾರೆ.
ಆಡಳಿತಗಾರರು ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂ. ಬಿಡುಗಡೆ ಮಾಡಿ, ರಸ್ತೆಗೆ ಟಾರ್ ಹಾಕಲು ಆ ಹಣವನ್ನು ಕಾದಿಟ್ಟರೆ, ಟಾರ್ ಹಾಕುವವರು ಟಾರ್ ಹಾಕದೇ ಇದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ?. ಕೆಳ ಹಂತದಿಂದಲೇ ಮಾನವ ಸಂಪನ್ಮೂಲ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.
ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಹಾಗಾದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಗುರಿ ಮುಟ್ಟುವ ಕನಸು ನನಸಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್‌ಟಿ ವಿರೋಧಿಸಿದ್ದರು. ಆದರೆ ಈಗ ಎಲ್ಲರೂ ಒಪ್ಪಿಕೊಂಡಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ.
ಒಂದು ದೇಶದ ಜಿಡಿಪಿಯನ್ನು ಅಳೆಯುವುದು ಹೇಗೆ ಎನ್ನುವುದು ಪ್ರಶ್ನೆ. ಆರ್ಥಿಕ ತಜ್ಞರು ಜಿಡಿಪಿಯನ್ನು ಕ್ಲಿಷ್ಟಮಯಗೊಳಿಸುತ್ತಾರೆ. ಕೆಲವರಿಗೆ ಕಾನೂನಿನ ಅರಿವಿಲ್ಲದೆ ತೆರಿಗೆ ಕಟ್ಟದೇ ಉಳಿಯುತ್ತಾರೆ.
ಕೆಲವರಿಗೆ ಮಾಹಿತಿಯಿದ್ದರೂ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಣ್ಣವರು ಒಂದು ಸಾವಿರ ರೂ.ಗಿಂತ ಹೆಚ್ಚಿಗೆ ಕಟ್ಟಲೂ ಸಿದ್ಧ. ದೊಡ್ಡವರು ಒಂದು ಕೋಟಿ ರೂ. ತೆರಿಗೆ ಹೆಚ್ಚಾಗಿದೆ ಅಂದರೆ, ಅವರಿಂದ ತೆರಿಗೆ ವಸೂಲಿ ಮಾಡುವುದು ದೊಡ್ಡ ಸವಾಲು ಎಂದು ಬೊಮ್ಮಾಯಿ ವಿಶ್ಲೇಷಿಸಿದರು.
ಸವಾಲು ನಿವಾರಣೆ, ಹೆಚ್ಚಿನ ತೆರಿಗೆ ಸಂಗ್ರಹಕ್ಕಾಗಿ ತೆರಿಗೆ ಕಾನೂನು ಸರಳವಾಗಬೇಕು. ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ರಾಜ್ಯ ಸರ್ಕಾರ ಉಚಿತ ಯೋಜನೆಗಳಿಗೆ ಬೊಕ್ಕಸದ ದುಡ್ಡು ಹರಿಸುತ್ತಿದ್ದು, ಆದಾಯ ಕಡಿಮೆಯಾಗಲಿದೆ ಎಂದು ಬೊಮ್ಮಾಯಿ ಟೀಕಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
