ರಾಜ್ಯದಲ್ಲಿ ತೆರಿಗೆ ಸಂಗ್ರಹಣೆ ಪ್ರಮಾಣ ದಿನೇದಿನೆ ಕುಸಿಯುತ್ತಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಕಷ್ಟ ಇನ್ನಷ್ಟು ಹೆಚ್ಚಾಗಲಿದೆ ಎಂಬುದನ್ನು ಸರ್ಕಾರ ಅಂದಾಜು ಮಾಡಿದೆ.
ವಿಧಾನಮಂಡಲದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಧ್ಯಮಾವಧಿ ವಿತ್ತೀಯ ಯೋಜನೆ 2021-25ನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಸರ್ಕಾರ ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿರುವ ಸಂಕಷ್ಟದ ಮಾಹಿತಿಯೂ ಕಂಡು ಬರುತ್ತದೆ. ರಾಜ್ಯದ ಆದಾಯ ಪ್ರತಿ ವರ್ಷ ಶೇ. 12 ರಿಂದ 15 ಬೆಳವಣಿಗೆ ಕಂಡರೆ ತೆರಿಗೆ ಸಂಗ್ರಹ ಉತ್ತಮವಾಗಿರುತ್ತದೆ. ಆದರೆ ರಾಜ್ಯಕ್ಕೆ ಆದಾಯ ತರುವ ಯಾವ ವಲಯದಲ್ಲಿಯೂ ಈ ಪ್ರಮಾಣದ ಬೆಳವಣಿಗೆಯನ್ನು ಮುಂದಿನ ವರ್ಷಗಳಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ತೆರಿಗೆ ಸಂಗ್ರಹಣೆ ಕಡಿಮೆಯಾಗುತ್ತದೆ ಎಂಬ ಅಂದಾಜು ಇದ್ದರೂ ಸಹ ಬಜೆಟ್ ಗಾತ್ರವನ್ನು ಸರ್ಕಾರ ಹೆಚ್ಚು ಮಾಡಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಕರೊನಾದಿಂದಾಗಿ ರಾಜಸ್ವ ಸಂಗ್ರಹಣೆ ದುಸ್ತರವಾಗಿದೆ ಎಂಬುದನ್ನು ಸರ್ಕಾರ ಈ ವರದಿಯಲ್ಲಿ ಸ್ಪಷ್ಟವಾಗಿ ಗುರುತಿಸುತ್ತದೆ. ಕೇಂದ್ರದಿಂದ ಸಿಗುವ ತೆರಿಗೆ ಪಾಲು ಹಾಗೂ ಅನುದಾನಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಬೆಳವಣಿಗೆ ಸಾಧ್ಯವಿಲ್ಲವೆಂಬ ಭಾವನೆ ಮೂಡಿರುವುದು ಆತಂಕಕ್ಕೂ ಕಾರಣವಾಗಿದೆ.
ಎಷ್ಟೆಷ್ಟು ಬೆಳವಣಿಗೆ ನಿರೀಕ್ಷೆ: ರಾಜ್ಯಕ್ಕೆ ಆದಾಯ ತರುವ ಎರಡನೇ ದೊಡ್ಡ ವಲಯ ಅಬಕಾರಿ, ಇದರಲ್ಲಿ ಪರಿಷ್ಕರಣೆಯ ದರ ಗರಿಷ್ಠ ಮಟ್ಟವನ್ನು ಮುಟ್ಟಿರುವುದರಿಂದ ಮುಂದಿನ ವರ್ಷಗಳಲ್ಲಿ ಕನಿಷ್ಠ ಶೇ.1 ಬೆಳವಣಿಗೆಯನ್ನು ಮಾತ್ರ ನಿರೀಕ್ಷೆ ಮಾಡಲು ಸಾಧ್ಯವೆಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಆದ್ದರಿಂದ ಅಬಕಾರಿಯಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿಲ್ಲ. ಜಿಎಸ್​ಟಿ ಸಂಗ್ರಹದಲ್ಲಿ ಎರಡು ಹಣಕಾಸು ವರ್ಷಗಳಲ್ಲಿ ಶೇ.8 ಬೆಳವಣಿಗೆ ಮಾತ್ರ ಸಾಧಿಸಲು ಸಾಧ್ಯವಿದೆ. ಆದರೆ ಆ ನಂತರದ ವರ್ಷಗಳಲ್ಲಿ ಶೇ.14 ತಲುಪಬಹುದೆಂದು ಅಂದಾಜು ಮಾಡಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ಮಾರಾಟ ತೆರಿಗೆಯ ಸಂಗ್ರಹದಲ್ಲಿಯೂ ಬೆಳವಣಿಗೆ ಶೇ.8ಕ್ಕಿಂತ ಜಾಸ್ತಿ ಸಾಧ್ಯವಿಲ್ಲ.
ಉಪಕರ ಸಂಗ್ರಹ:ಜಿಎಸ್​ಟಿ ಪರಿಹಾರ 2021-22ಕ್ಕೆ ಕೊನೆಯಾಗುತ್ತದೆ. 2021-22ರ ಜಿಎಸ್​ಟಿ ಸಂಗ್ರಹದ ಕೊರತೆಯನ್ನು ಮುಂದಿನ ವರ್ಷಗಳಲ್ಲಿ ಜಿಎಸ್​ಟಿ ಉಪಕರ ಸಂಗ್ರಹ ಹಾಗೂ ಸಾಲದ ಮರು ಪಾವತಿ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ.
ನೋಂದಣಿ ಮತ್ತು ಮುದ್ರಾಂಕದಲ್ಲಿ ಸಣ್ಣ ಪ್ರಮಾಣದ ವಿನಾಯ್ತಿಯನ್ನು ನೀಡಿರುವುದರಿಂದ ಇದೊಂದು ವಲಯದಲ್ಲಿ ಮಾತ್ರ ಶೇ.10 ಬೆಳವಣಿಗೆಯನ್ನು ಸರ್ಕಾರ ನಿರೀಕ್ಷೆ ಮಾಡಿದೆ. 45 ಲಕ್ಷದೊಳಗಿನ ಪ್ಲಾ್ಯಟ್​ಗಳ ನೋಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬಹುದೆಂದು ಸರ್ಕಾರ ಅಂದಾಜು ಮಾಡಿದೆ. ಮೋಟಾರ್ ವಾಹನಗಳ ಬೇಡಿಕೆ ಕುಸಿತದಿಂದಾಗಿ ಈ ವಲಯದಲ್ಲಿ ತೆರಿಗೆ ಸಂಗ್ರಹಣೆಯ ಬೆಳವಣಿಗೆ ಶೇ.4 ದಾಟುವುದು ಕಷ್ಟವೆಂದು ಸರ್ಕಾರ ಅಂದಾಜು ಮಾಡುತ್ತಿದೆ. ಎಲ್ಲ ವರದಿಗಳು ಸಹ ತೆರಿಗೆಯೇತರ ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಬೇಕೆಂದು ಹೇಳುತ್ತಿವೆ. ಆದರೆ ವರದಿಯ ಪ್ರಕಾರ ಈ ವಲಯದ ಬೆಳವಣಿಗೆ ಶೇ.5ರ ಆಸುಪಾಸಿನಲ್ಲಿಯೇ ಇರುತ್ತದೆ ಎಂದು ಹೇಳಲಾಗುತ್ತಿದೆ.
ಕಡಿಮೆಯಾಗಿದೆ ಪುರಸ್ಕೃತ ಯೋಜನೆಗಳ ಪ್ರಮಾಣ:ಹಿಂದೆ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಲ್ಲಿ ಅಲ್ಲಿಂದ ಸಿಗುತ್ತಿದ್ದ ಪಾಲು ಶೇ.59ರ ತನಕ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಶೇ.25ಕ್ಕೆ ಬಂದು ನಿಂತಿದೆ. ಇದರಿಂದಾಗಿ ರಾಜ್ಯದ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಇದನ್ನು ಹೇಗೆ ಸರಿದೂಗಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ತಗ್ಗಿದ ಮಹಿಳಾ ಅನುದಾನ
ಮಹಿಳಾ ಆಯವ್ಯಯ ಹಾಗೂ ಮಹಿಳಾ ದಿನಾಚರಣೆಯ ದಿನ ಮಂಡನೆಯಾಗಿದ್ದರು ಸಹ ಮಹಿಳೆಯರಿಗೆ ಮಾತ್ರ ಬಜೆಟ್​ನಲ್ಲಿ ಪ್ರಮಾಣ ಕಡಿಮೆಯಾಗಿದೆ. ಶೇ.2.8 ಇದ್ದ ಅನುದಾನ ಶೇ. 1.83ಕ್ಕೆ ಇಳಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ವೇತನ ಆಯೋಗ
ಸರ್ಕಾರ ಮತ್ತೆ 2023-24ಕ್ಕೆ 7 ನೇ ವೇತನ ಆಯೋಗ ರಚನೆ ಮಾಡುವ ಸಾಧ್ಯತೆಗಳಿವೆ. ವೆಚ್ಚಗಳು ಆ ಸಮಯಕ್ಕೆ ಎಷ್ಟು ಹೆಚ್ಚಾಗಬಹುದೆಂದೇ ಸರ್ಕಾರ ಅಂದಾಜು ಮಾಡಿದೆ. ವೇತನಗಳು 57592 ಕೋಟಿ ರೂ.ಗಳಾಗುತ್ತದೆ. ಪಿಂಚಣಿಗಳ ವೆಚ್ಚವನ್ನು ಮಾತ್ರ ಶೇ.9ರ ಬೆಳವಣಿಗೆಯಲ್ಲಿ ಲೆಕ್ಕ ಹಾಕಲಾಗಿದೆ. ಜಿಎಸ್​ಟಿ ಪರಿಹಾರದ ನಿಲುಗಡೆ ಹಾಗೂ 15 ನೇ ಹಣಕಾಸು ಆಯೋಗದ ವರದಿಯ ಶಿಫಾರಸಿನ ಫಲವಾಗಿ ಮುಂಬರುವ ದಿನಗಳಲ್ಲಿ ಬಂಡವಾಳ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದನ್ನು ವರದಿ ಅಂದಾಜು ಮಾಡಿದೆ.
ಶ್ರೀಶೈಲ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆದ ಮೊಹಮ್ಮದ್ ಮಸ್ತಾನ್; ಶಿವಸಂಸ್ಕೃತಿಗೆ ಮಾರುಹೋದ ಮುಸ್ಲಿಂ ಯುವಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
