ಬೆಂಗಳೂರು:ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಕುರಿತು ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ.ಸುರೇಶ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಏಟು-ತಿರುಗೇಟು ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ.
ಕೇಂದ್ರ ಸರ್ಕಾರ ಒಟ್ಟು 1.39 ಲಕ್ಷ ಕೋಟಿ ರೂ. ತೆರಿಗೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಿರುವುದು ಮಂಗಳವಾರ ಹೊರಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯವಾರು ತೆರಿಗೆ ಹಂಚಿಕೆ ಪಟ್ಟಿ ಸಹಿತ ಡಿ.ಕೆ.ಸುರೇಶ್ ಸಂದೇಶ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಐದು ರಾಜ್ಯಗಳು ಸ್ವೀಕರಿಸಿದ ಒಟ್ಟು ಮೊತ್ತ ಸೇರಿಸಿದರೂ ಉತ್ತರಪ್ರದೇಶಕ್ಕೆ ಹಂಚಿಕೆಯಾದ 25,069 ಕೋಟಿ ರೂ.ಗಳಿಗೆ ಸಮಾನಾಗುವುದಿಲ್ಲ ಎಂದು ಡಿ.ಕೆ.ಸುರೇಶ್ ಏಟು ನೀಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ 2012-13ರಲ್ಲಿ ತೆರಿಗೆ ಹಂಚಿಕೆ ಮಾಡಿದ ಪಟ್ಟಿಯನ್ನು ಲಗತ್ತಿಸಿ, ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಅವಿಭಜಿತ ಆಂಧ್ರಪ್ರದೇಶ ಸಹಿತ ದಕ್ಷಿಣ ನಾಲ್ಕುಗಳಿಗೆ ಹಂಚಿಕೆಯಾದ ಒಟ್ಟು ಮೊತ್ತ ಸೇರಿಸಿದರೂ ಉತ್ತಪ್ರದೇಶಕ್ಕೆ ಹಂಚಿದ 59,528 ಕೋಟಿ ರೂ.ಗಳಿಗೆ ಸಮಾನವಾಗುವುದಿಲ್ಲ.
ಕರ್ನಾಟಕ ದಕ್ಷಿಣಭಾರತ ರಾಜ್ಯಗಳಿಗೆ ಅನ್ಯಾಯ, ತಾರತಮ್ಯವೆಂಬ ಆರೋಪವನ್ನು ಯುಪಿಎ ಸಂಚಾಲಕರಾಗಿದ್ದ ಸೋನಿಯಾಗಾಂಧಿ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಅನ್ವಯಿಸುವಿರಾ ?. ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿದರೂ ಕೇಂದ್ರದ ವಿರುದ್ಧ ಕಾಂಗ್ರೆಸ್‌ನವರ ಅಪಪ್ರಚಾರ, ಸುಳ್ಳು ಹೇಳಿಕೆಗಳು ನಿಂತಿಲ್ಲವೆಂದು ಆರ್.ಅಶೋಕ್ ಛೇಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
