ಬೆಂಗಳೂರು:ರಾಜಧಾನಿಯ ರಸ್ತೆಗಳಲ್ಲಿ ಓಡಾಡುವ ನಾಗರಿಕರಿಗೆ ತೆರಿಗೆ ಆಘಾತ ನೀಡಲು ಬಿಬಿಎಂಪಿ ಮುಂದಾಗಿದೆ. ಆಸ್ತಿ ತೆರಿಗೆ ಜತೆಯಲ್ಲೇ ಹೆಚ್ಚುವರಿಯಾಗಿ ಶೇ.2 ಭೂ ಸಾರಿಗೆ (ಉಪ) ತೆರಿಗೆ ವಿಧಿಸಲು ಪಾಲಿಕೆ ನಿರ್ಣಯ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಹೊಸ ನಿಯಮ ಜಾರಿಗೆ ಬರಲಿದೆ.
ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಶೇ.2 ಭೂ ಸಾರಿಗೆ ಉಪ ತೆರಿಗೆ ಸಂಗ್ರಹಣೆ ಮಾಡುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಈ ತೆರಿಗೆಯು ರಸ್ತೆ ತೆರಿಗೆಗೆ ಹೊರತಾಗಿದ್ದು, ರಸ್ತೆ ಬದಿಯ ಪಾದಚಾರಿ ಮಾರ್ಗಗಳ ಬಳಕೆ, ಪಾರ್ಕಿಂಗ್​, ಹಾಗೂ ಸೈಕಲ್ ಸವಾರಿಗೆ ಬಳಸುವ ಭೂಮಿಗೆ ತೆರಿಗೆ ಕಟ್ಟಬೇಕಿದೆ.
2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭೂ ಸಾರಿಗೆ ತೆರಿಗೆ ವಿಧಿಸಿ ಭೂ ಸಾರಿಗೆ ಇಲಾಖೆಗೆ ನೀಡುವಂತೆ ಪಾಲಿಕೆಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ತೆರಿಗೆ ಹೇರುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
3500 ಕೋಟಿ ರೂ.ಗುರಿ:2019-20ನೇ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಮೂಲದಿಂದ 3500 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆದರೆ ಜ. 15ರವರೆಗೆ 2425.30 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಒಮ್ಮೆಯೂ ಶೇ. 100 ತೆರಿಗೆ ವಸೂಲಿ ಮಾಡಲು ಸಾಧ್ಯವಾಗಿಲ್ಲ.
ಶೇ.5 ರಿಯಾಯಿತಿ ಆಫರ್:ಪ್ರತಿ ವರ್ಷ ಏಪ್ರಿಲ್​ನಲ್ಲಿ ತೆರಿಗೆ ಆರ್ಥಿಕ ವರ್ಷ ಆರಂಭವಾಗಲಿದ್ದು, ಏ.30 ರ ಒಳಗೆ ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಿದರೆ ಶೇ 5 ರಿಯಾಯಿತಿ ದೊರೆಯುತ್ತದೆ. ಏ.30 ರ ನಂತರ ವಿಳಂಬವಾಗುವ ಪ್ರತಿ ತಿಂಗಳಿಗೆ ಶೇ.2 ತೆರಿಗೆ ಹೆಚ್ಚಳವಾಗುತ್ತದೆ.
150 ಕೋಟಿ ರೂಪಾಯಿ ಹೆಚ್ಚಳ
ಪಾಲಿಕೆ ವ್ಯಾಪ್ತಿಯಲ್ಲಿ 19 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿದ್ದು, ಇವರಿಂದ ಸುಮಾರು 3.5 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗುವ ಅಂದಾಜಿದೆ. ಅದಕ್ಕೆ ಶೇ 2 ಭೂ ಸಾರಿಗೆ ಉಪಕರ ಸೇರಿದರೆ ಸುಮಾರು 150 ಕೋಟಿ ರೂ. ಹೆಚ್ಚು ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.
ಸ್ವಬಳಕೆಗೆ ಕೋರಿಕೆ
ಹೆಚ್ಚುವರಿಯಾಗಿ ಸಂಗ್ರಹವಾಗುವ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿ ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಪಾಲಿಕೆ ಆಲೋಚನೆ ನಡೆಸಿದೆ. ಪಾಲಿಕೆಯಲ್ಲಿ ಭೂ ಸಾರಿಗೆ ಉಪಕರವನ್ನು ಸಂಗ್ರಹಿಸಿದರೆ ಅದನ್ನು ಭೂ ಸಾರಿಗೆ ಇಲಾಖೆಗೆ ನೀಡಬೇಕು ಎಂಬ ನಿಯಮವಿದೆ.
ಆದರೆ ನಗರದ ರಸ್ತೆ, ಬೀದಿದೀಪ, ಪಾದಚಾರಿ ಮಾರ್ಗ ಮತ್ತು ಚರಂಡಿಗಳನ್ನು ಪಾಲಿಕೆಯೇ ನಿರ್ವಹಣೆ ಮಾಡುತ್ತಿದೆ. ಹೀಗಾಗಿ ಸಂಗ್ರಹಿಸಿದ ಹೆಚ್ಚುವರಿ ತೆರಿಗೆಯನ್ನು ಬಿಬಿಎಂಪಿಯೇ ಬಳಕೆ ಮಾಡುವ ಹಕ್ಕು ಹೊಂದಿದೆ. ಆದ್ದರಿಂದ ಭೂ ಸಾರಿಗೆ ಉಪಕರವನ್ನು ಪಾಲಿಕೆ ಬಳಸುವಂತೆ ಅವಕಾಶ ಮಾಡಿಕೊಡುವಂತೆ ಕಡತವನ್ನು ಸರ್ಕಾರಕ್ಕೆ ಕಳಿಸಲಾಗುತ್ತಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ತರುವಾಯ ಮುಂದಿನ ಪ್ರಕ್ರಿಯೆ ಶುರುವಾಗಲಿದೆ.
ಯಾವುದಕ್ಕೆ ಅನ್ವಯ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
