| ಶಿವಾನಂದ ಹಿರೇಮಠ ಗದಗಗ್ಯಾರಂಟಿ ಯೋಜನೆಗಳ ಹೊರೆ ನೀಗಿಸುವ ಆತುರದಲ್ಲಿರುವ ರಾಜ್ಯ ಸರ್ಕಾರ ಗೂಡ್ಸ್ ವಾಹನಗಳ ತೆರಿಗೆ ಮೊತ್ತವನ್ನು ಅಧಿಕಗೊಳಿಸಿದೆ. ಜು.28ರಂದು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಸರ್ಕಾರ ಆ.1ರಿಂದಲೇ ಈ ಕಾಯ್ದೆ ಜಾರಿಗೊಳಿಸಿದೆ. ಮಧ್ಯಮ ಗಾತ್ರದ (ಯಲ್ಲೋ ಬೋರ್ಡ್ ಎಲ್​ಜಿವಿ, ಎಂಜಿವಿ) ಗೂಡ್ಸ್ ವಾಹನ ಮಾಲೀಕರಿಗೆ ಈ ಕಾಯ್ದೆ ಹೊರೆಯಾಗಿ ಪರಿಣಮಿಸಿದೆ.
ಸರ್ಕಾರದ ಈ ನೀತಿಯಿಂದ ತುರ್ತಾಗಿ ರಾಜ್ಯ ಬೊಕ್ಕಸಕ್ಕೆ ಆರ್ಥಿಕ ಸಂಪನ್ಮೂಲ ಹರಿದು ಬಂದರೂ ಭವಿಷ್ಯದಲ್ಲಿ ಸಾರಿಗೆ ಇಲಾಖೆಗೆ ನಿರಂತರ ಆರ್ಥಿಕ ಹರಿವಿನ ಕೊರತೆ ಎದುರಾಗುವುದು ನಿಚ್ಚಳವಾಗಲಿದೆ.
ಈ ಮೊದಲು ಹಳದಿ ಫಲಕದ ಎಲ್​ಜಿವಿ, ಎಂಜಿವಿ ವಾಹನಗಳು ತ್ರೖೆಮಾಸಿಕ 2,000 ರೂ. ತೆರಿಗೆ ಪಾವತಿಸುವ ನಿಯಮವಿತ್ತು. ಈಗ ಕಾಯ್ದೆಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಲಕ್ಷಕ್ಕೂ ಸಮೀಪ ಲೈಫ್​ಟೈಂ ಪಾವತಿ ನಿಯಮ ಜಾರಿಗೆ ತರಲಾಗಿದೆ. ಒಂದೇ ಸಲ ತೆರಿಗೆ ಪಾವತಿ ಅನುಕೂಲ ಇದ್ದರೂ ದುಡಿಯುವ ಮಧ್ಯಮ ವರ್ಗದ ಗೂಡ್ಸ್ ವಾಹನ ಮಾಲೀಕರಿಗೆ ಈ ನಿಯಮ ಅನಿರೀಕ್ಷಿತ ಹೊರೆಯೇ ಆಗಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಈ ಕಾಯ್ದೆ ಜಾರಿಯಾಗಿದೆ. ತ್ರೖೆಮಾಸಿಕ ತೆರಿಗೆ ಪಾವತಿ ಬದಲಾಗಿದೆ. ವಾಹನ ನೋಂದಣಿ ವೇಳೆ ಲೈಫ್​ಟೈಂ (ಏಕ ಕಾಲಿಕ) ಪಾವತಿ ಪಡೆಯುವ ಕಾಯ್ದೆ ಇದಾಗಿದೆ.
ಅಧಿಕ ತೆರಿಗೆ:ಈ ಮೊದಲು 5,500 ಕೆಜಿ ತೂಕದವರೆಗಿನ ಎಲ್​ಜಿವಿ, ಎಂಜಿವಿ (ಗೂಡ್ಸ್) ವಾಹನಗಳ ನೋಂದಣಿ ವೇಳೆ ಲೈಫ್ ಟೈಂ ತೆರಿಗೆ ಪಾವತಿಸುವ ನಿಯಮವಿತ್ತು. 5,500 ಕೆಜಿಗೂ ಅಧಿಕ ತೂಕದ ವಾಹನಗಳ ಮೇಲೆ ತ್ರೖೆಮಾಸಿಕ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಈ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, 12,000 ಕೆಜಿ ತೂಕದವರೆಗೂ ಗೂಡ್ಸ್ ವಾಹನಗಳ ಮೇಲೆ ಲೈಫ್ ಟೈಂ ಪಾವತಿ ವಿಧಿಸಲಾಗುತ್ತಿದೆ. ಈ ತೆರಿಗೆ ಅತ್ಯಧಿಕವಾಗಿದ್ದು, ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ.
ಬದಲಾವಣೆ ಏನಿದೆ?:1,500 ರಿಂದ 2,000 ಕೆಜಿ ತೂಕದ ಯಲ್ಲೋ ಬೋರ್ಡ್ ಗೂಡ್ಸ್ ವಾಹನಗಳ ಮೇಲೆ ಈ ಮೊದಲು ವಿಧಿಸುತ್ತಿದ್ದ 11,100 ರೂ. ಮೊತ್ತದ ಬದಲಾಗಿ 22,200 ರೂ. ಮೊತ್ತಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ 2,000 ರಿಂದ 3,000 ಕೆಜಿ ತೂಕದ ವಾಹನಗಳಿಗೆ ಈ ಮೊದಲು ವಿಧಿಸುತ್ತಿದ್ದ 16,650 ರೂ.ಗಳ ಬದಲಾಗಿ 33,300 ರೂ.ಗಳಿಗೆ ಮತ್ತು 3,000 ದಿಂದ 5,500 ಕೆಜಿ ತೂಕದ ವಾಹನಗಳಿಗೆ 22,200 ರೂ. ಬದಲಾಗಿ 44,400 ರೂ. ಲೈಫ್​ಟೈಂ ತೆರಿಗೆ ವಿಧಿಸಲಾಗುತ್ತಿದೆ.

ಹೊಸ ನಿಯಮದಿಂದ ಅನುಕೂಲ, ಅನನುಕೂಲ ಎರಡೂ ಇವೆ. ವಾಹನ ಮಾಲೀಕರನ್ನು ಪದೇಪದೆ ತೆರಿಗೆ ಪಾವತಿ ಮಾಡುವ ಪ್ರಕ್ರಿಯೆಯಿಂದ ಮುಕ್ತಗೊಳಿಸಲು ಅನುಕೂಲ. ಆದರೆ ಮಧ್ಯಮ ವರ್ಗಕ್ಕೆ ಹೊರೆಯಾಗಬಹುದು.
| ದಯಾನಂದ ಎನ್. ತಿಳವಳ್ಳಿ, ಅಧೀಕ್ಷಕರು ಆರ್​ಟಿಒ ಗದಗ
ಅನುಕೂಲ/ಅನನುಕೂಲ:ದುಡಿಯುವ ಮಧ್ಯಮ ವರ್ಗದ ಮಾಲೀಕರಿಗೆ ಏಕಕಾಲದಲ್ಲಿ ಪಾವತಿ ಹೊರೆಯಾಗಿ ಪರಿಣಮಿಸಲಿದೆ. ಆದರೆ, ತೆರಿಗೆ ಡಿಫಾಲ್ಟರ್ ಆಗುವುದನ್ನು, ಕಚೇರಿಗೆ ಬಂದು ಪಾವತಿ ಮಾಡುವುದನ್ನು ತಪ್ಪಿಸಲು ಈ ನಿಯಮ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಕ್ಯಾಬ್ ವಾಹನಗಳ ಮೇಲೂ ಬದಲಾವಣೆ:10 ಲಕ್ಷದಿಂದ 15 ಲಕ್ಷ ರೂ.ವರೆಗಿನ ಮೌಲ್ಯದ ಕ್ಯಾಬ್ ವಾಹನಗಳ ಖರೀದಿ ಮೊತ್ತದ ಮೇಲೆ ಶೇ.9 ತೆರಿಗೆ ಹಾಗೂ ತೆರಿಗೆ ಮೊತ್ತದ ಮೇಲೆ ಶೇ.11 ಲೈಫ್ ಟೈಂ ತೆರಿಗೆ ವಿಧಿಸಲು ನಿಯಮ ತಿದ್ದುಪಡಿ ಮಾಡಲಾಗಿದೆ. ಈ ಮೊದಲು 15 ಲಕ್ಷ ರೂ. ಒಳಗಿನ ವಾಹನಗಳಿಗೆ 655 ರೂ.ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು.
ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲೇ ಆಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 4 =
Remember me
