| ಶ್ರೀಕಾಂತ್ ಶೇಷಾದ್ರಿಬೆಂಗಳೂರುಹಳ್ಳಿ ಫೈಟ್​ಗೆ ದಿನಗಣನೆ ಶುರುವಾಗಿರುವಂತೆಯೇ ರಾಜ್ಯದ ಗ್ರಾಮ ಪಂಚಾಯಿತಿಗಳು ವಿಧಿಸುತ್ತಿರುವ ತೆರಿಗೆಯನ್ನು ಪರಿಷ್ಕರಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಇದರಿಂದಾಗಿ ಚುನಾವಣೆಯಲ್ಲಿ ಆಯ್ಕೆಯಾಗುವ ಹೊಸ ಸದಸ್ಯರಿಗೆ ತಮ್ಮ ವ್ಯಾಪ್ತಿಯಲ್ಲಿ ಪರಿಷ್ಕೃತ ತೆರಿಗೆಯನ್ನು ಒಟ್ಟುಗೂಡಿಸುವ ಹೊಣೆಗಾರಿಕೆ ಸಿಗುವುದು ನಿಶ್ಚಿತವಾಗಿದೆ.
5762 ಪಂಚಾಯಿತಿಗಳಲ್ಲಿ 92 ಸಾವಿರ ಪ್ರತಿನಿಧಿಗಳ ಆಯ್ಕೆಗೆ ಪ್ರಕ್ರಿಯೆ ಶುರುವಾಗಿದೆ. ಇಲ್ಲಿ ಆಯ್ಕೆಯಾದವರು ತಮ್ಮ ಗ್ರಾಮ ಉದ್ಧಾರಕ್ಕಾಗಿ ತೆರಿಗೆ ಹೆಚ್ಚಳಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ಪ್ರಕಟಗೊಂಡಿದ್ದು, ಈ ಪ್ರಕ್ರಿಯೆ ನಡೆಸುವ ವೇಳಾಪಟ್ಟಿಯನ್ನು ಸಹ ಸರ್ಕಾರ ನಿಗದಿ ಮಾಡಿತ್ತು. ಗ್ರಾಮ ಪಂಚಾಯಿತಿಗಳು ಸಾರ್ವಜನಿಕ ಸಹಭಾಗಿತ್ವದಲ್ಲಿ ಆಸ್ತಿಗಳ ಮೌಲ್ಯಮಾಪನ, ಹೊಸ ತೆರಿಗೆ ನೀತಿಯ ಅನುಷ್ಠಾನ, ಸ್ಥಳೀಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಆದಾಯದ ಉತ್ಪಾದಕತೆ ಮತ್ತು ಸಂಗ್ರಹಣೆ ಹೊಂದುವಂತಾಗಬೇಕೆಂಬುದು ಸರ್ಕಾರದ ಬಯಕೆ. ಕೇವಲ ಸರ್ಕಾರದ ಅನುದಾನಕ್ಕೆ ಎದುರು ನೋಡದೆ ಸ್ವಾವಲಂಬಿ ಆಗಬೇಕೆಂಬುದು ಉದ್ದೇಶ. ಈ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುತ್ತ ಬಂದಿದೆ.
ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್​ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ನಿಯಮಾವಳಿಗೆ ಅನುಗುಣವಾಗಿ ನಿಗದಿತ ನಮೂನೆಗಳನ್ನು ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ತಿ ವಿವರ, ತೆರಿಗೆ ನಿರ್ಧರಣೆ ಮತ್ತು ಬೇಡಿಕೆ, ವಸೂಲಾತಿ, ಬಾಕಿ ವಿವರಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲು ಕೆಲಸ ಹಂತಹಂತವಾಗಿ ಜಾರಿಗೆ ಬರುತ್ತಿದೆ. ಅಷ್ಟೇ ಅಲ್ಲದೇ ಮಾಸಿಕ ಪ್ರಗತಿಯನ್ನು ಗಮನಿಸಲು ಆನ್​ಲೈನ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.
ಇದೀಗ ತೆರಿಗೆ ಪರಿಷ್ಕರಣೆಗೆ ಮಾರ್ಗಸೂಚಿ ಸಿದ್ಧಮಾಡಿದ್ದು, ನಿವಾಸ, ವಾಣಿಜ್ಯ ಕಟ್ಟಡಕ್ಕೆ ಎಷ್ಟು ಹೆಚ್ಚಿಸಬೇಕು, ಕಾರ್ಖಾನೆಗಳಿದ್ದರೆ ಎಷ್ಟು ತೆರಿಗೆ ಏರಿಸಬೇಕೆಂಬ ವಿಚಾರವನ್ನು ಸರ್ಕಾರ ಸ್ಪಷ್ಟ ಮಾಡಿದೆ. ಎಷ್ಟು ಹೆಚ್ಚಳ ಮಾಡಬಹುದು, ಗರಿಷ್ಠ-ಕನಿಷ್ಠ ಹೆಚ್ಚಳದ ವಿವೇಚನೆಯನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡಲಾಗಿದೆ.
ಈ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿ ಅಧ್ಯಕ್ಷತೆಯಲ್ಲಿ ಸಮಿತಿ ಉಸ್ತುವಾರಿ ನೋಡಿಕೊಳ್ಳಲಿದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ತಾಲೂಕು ಸ್ಟ್ಯಾಂಪ್ ಮತ್ತು ನೋಂದಣಿ ಇಲಾಖೆ ಉಪ ನೋಂದಣಾಧಿಕಾರಿ, ಸಂಬಂಧಪಟ್ಟ ಅಧ್ಯಕ್ಷ-ಉಪಾಧ್ಯಕ್ಷರು, ಪಿಡಿಒಗಳು, ತಾಲೂಕು ಪಂಚಾಯಿತಿ ಇಒಗಳು ಸಮಿತಿ ಸದಸ್ಯರಾಗಿರುತ್ತಾರೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹೊಸದಾಗಿ ಅಧ್ಯಕ್ಷ- ಉಪಾಧ್ಯಕ್ಷರಾದವರು ಈ ಸಮಿತಿ ಸಭೆಯಲ್ಲಿ ತೆರಿಗೆ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಸಂಭಾವ್ಯ ಪರಿಷ್ಕರಣೆ ಮೊತ್ತ(ಸ್ವತ್ತಿನ ಮೂಲ ಮೌಲ್ಯದ ಮೇಲೆ)
ವಸೂಲಾಗದಿದ್ದರೆ ತನಿಖೆಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ನಿರ್ದಿಷ್ಟ ಪಡಿಸಿರುವಂತೆ ತೆರಿಗೆ ವಸೂಲಿ ಗ್ರಾ.ಪಂಗಳ ಪ್ರಾಥಮಿಕ ಹೊಣೆಗಾರಿಕೆ. ಒಂದು ವೇಳೆ ತೆರಿಗೆಯಲ್ಲಿ ಶೇ.80 ಕಡಿಮೆ ವಸೂಲಿಯಾಗಿದ್ದರೆ ಹಾಗೂ ಕಡಿಮೆ ವಸೂಲಿ ಆಗಿರುವುದಕ್ಕೆ ಕಾರಣ ಬಗ್ಗೆ ತನಿಖೆ ಮಾಡಿ ಅವಶ್ಯಕ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆಯನ್ನೂ ನೀಡಿದೆ.
ಸರ್ಕಾರದಿಂದ ಪ್ರಮುಖ ಗುರಿ1. ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳು ಸಾಕಷ್ಟಿದ್ದು, ಅವುಗಳನ್ನು ಮೊದಲು ತೆರಿಗೆ ವ್ಯಾಪ್ತಿಗೆ ತರುವುದು.2. ತೆರಿಗೆ ಪರಿಷ್ಕರಣೆ ಮೂಲಕ ಗುರಿ ನಿಗದಿ ಮಾಡಿಕೊಂಡು ಶೇ.100 ರಷ್ಟು ತೆರಿಗೆ ಸಂಗ್ರಹ ಮಾಡುವುದು.3. ಪ್ರತಿ ಆಸ್ತಿಯ ತೆರಿಗೆ ನಿಗದಿ ಸರಿಯಾಗಿಲ್ಲ, ವೈಜ್ಞಾನಿಕ ರೀತಿಯಲ್ಲಿ ಮಾರ್ಗಸೂಚಿ ಪ್ರಕಾರ ನಿಗದಿ ಮಾಡುವುದು.4. ಬೆಂಗಳೂರು ಸೇರಿ ಪ್ರಮುಖ ನಗರಗಳಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಸಂಗ್ರಹದ ಬಗ್ಗೆ ವಿಶೇಷ ಗಮನ
ಗ್ರಾ.ಪಂ.ಗಳು ಸ್ವಾವಲಂಬಿಯಾಗಬೇಕು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಸಾಕಷ್ಟು ಆಸ್ತಿಗಳಿವೆ, ಅವುಗಳು ತೆರಿಗೆ ವ್ಯಾಪ್ತಿಗೆ ಬರಬೇಕಾಗಿದೆ. ತೆರಿಗೆ ಸಂಗ್ರಹ ಹೆಚ್ಚಳದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಯೋಜನಕಾರಿ.| ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿಗ್ರಾಮೀಣಾಭಿವೃದ್ಧಿ, ಪಂಚಾಯತ್​ರಾಜ್ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + seventeen =
Remember me
