ಬೆಂಗಳೂರು:ವೃತ್ತಿ ಆಧಾರಿತವಾಗಿ ಒಬ್ಬರಲ್ಲಿ ಹಣ ಎಷ್ಟಿದೆ ಎಂದು ಊಹಿಸಲಾಗದು ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ. ರಸ್ತೆ ಬದಿಯಲ್ಲಿ ಟೀ ಮಾರುವ ಚಾಯ್‍ವಾಲಾನನ್ನು ಕಿಡ್ನ್ಯಾಪ್‍ ಮಾಡಿ ಬರೋಬ್ಬರಿ 15 ಲಕ್ಷ ರೂ.ಗಳನ್ನು ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಸ್ತೆ ಬದಿ ಟೀ ಮಾರುತ್ತಿದ್ದವನನ್ನು ಕಿಡ್ನಾಪ್ ಮಾಡಿ 15 ಲಕ್ಷ ಸುಲಿಗೆ ಮಾಡಿದ ಪ್ರಕರಣದ ಆರೋಪಿಗಳನ್ನು ಇದೀಗ ಸೆರೆ ಹಿಡಿಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ,ರಾಹುಲ್ ಎಂಬುವವರನ್ನು ಸೇರಿ 8 ಜನರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ತಿಲಕ್ ಮಣಿಕಂಠ ಎಂಬುವವರು ತಿಲಕ್ ಆಗಸ್ಟ್ 1 ರಂದು ಗೋವಾಗೆ ತೆರಳಿ ಕ್ಯಾಸಿನೊದಲ್ಲಿ 25 ಲಕ್ಷ ಗೆದ್ದಿದ್ದರು.ತಿಲಕ್‍ ಬಳಿ ಹಣ ಇರುವ ವಿಚಾರ ಸ್ನೇಹಿತರು ಹೇಗೋ ತಿಳಿದುಕೊಂಡಿದ್ದರು. ಆ ಹಣಕ್ಕೆ ಆಸೆ ಪಟ್ಟ ಸ್ನೇಹಿತರು, ದರೋಡೆಗೆ ಇಳಿದಿದ್ದು ದುರಂತ. ಆಗಸ್ಟ್ 5ರಂದು ತಿಲಕ್‍ ಸ್ನೇಹಿತರು, ಕಿಡ್ನಾಪ್ ಮಾಡಿದ್ದು 15 ಲಕ್ಷ ಸುಲಿಗೆ ಮಾಡಿದ್ದರು. ನಂತರ 6ರಂದು ತಿಲಕ್‍ರನ್ನು ಬಿಟ್ಟು ಕಳಿಸಿದ್ದರು.
ಸ್ವತಂತ್ರರಾದ ತಿಲಕ್ ಮೊದಲು ಮಾಡಿದ್ದು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಣದ ಜತೆಗೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಇವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಗೋವಾ, ಬಾಂಬೆ ಸೇರಿದಂತೆ ಎಲ್ಲಾ ಕಡೆ ತೆರಳಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಬಿಡಬೇಕಲ್ಲವೇ? ಕೊನೆಗೆ ಶಿರಡಿಯಲ್ಲಿ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 10 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 8 =
Remember me
