ಬೆಳಗಾವಿ:ಇಲ್ಲೊಬ್ಬ ಚಹಾ ಅಂಗಡಿ ಮಾಲೀಕನಿಗೆ ಅದೃಷ್ಟ ಖುಲಾಯಿಸಿದೆ! ಹೇಗೆ ಅಂತೀರಾ? ಚಹಾ ಅಂಗಡಿಯವನಿಗೆ ‘ಸ್ಟಾರ್​​’ ಕುದುರಿದ್ದು ಸಚಿನ್​​​ ತೆಂಡೂಲ್ಕರ್​​​​​ನಿಂದ..!
ಆಗಿದ್ದು ಇಷ್ಟು… ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿರುವ ಪೌಜಿ ಚಹಾ ಅಂಗಡಿಗೆ ಬಂದು, ಜಸ್ಟ್​​​ ಒಂದು ಟೀ ಕುಡಿದು ಹೋದರು. ಅದಾಗಿದ್ದೇ ತಡ… ಪೌಜಿ ಚಾಯ್​​​​ ಅಂಗಡಿಯ ವ್ಯಾಪಾರ ದುಪ್ಪಟ್ಟಾಗಿದೆ.
ಚಾಯ್​​​ ಅಂಗಡಿಯವನಿಗೆ ಡಬಲ್​​ ಧಮಾಕಾ ಆಗಿದ್ದು ಅಕ್ಟೋಬರ್ 31ರಂದು. ಆ ದಿನ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದಿಂದ ಕುಟುಂಬ ಸಮೇತ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಮಹಾರಾಷ್ಟ್ರ-ಗೋವಾ ರಸ್ತೆ ಮಾರ್ಗದಲ್ಲಿರುವ ಪೌಜಿ ಚಹಾ ಅಂಗಡಿಗೆ ಭೇಟಿ ನೀಡಿದ್ದರು. ಬಿಸ್ಕತ್ ಜತೆ ಚಹಾ ರುಚಿ ಸವಿದು ನಗು ಬೀರಿದ್ದರು. ಈ ದೃಶ್ಯಗಳು ಸೋಷಿಯಲ್​ ಮೀಡಿಯಾ ತುಂಬ ಹರಿದಾಡಿದವು.
ಆ ನಂತರವೇ ಪೌಜಿ ಚಹಾ ಅಂಗಡಿಗೆ ಲಕ್​​​ ಖುಲಾಯಿಸಿದ್ದು. ಸಚಿನ್​​ ಭೇಟಿಯ ನಂತರ ಅದೇ ಅಂಗಡಿಗೆ ಬರುವ ಜನ ಹೆಚ್ಚಾಗತೊಡಗಿದ್ದಾರೆ. ಬಂದ ಜನರು, ಚಹಾ ಕುಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಚಹಾ ಅಂಗಡಿಯವನ ವ್ಯಾಪಾರ ಡಬಲ್​​​ ಧಮಾಕಾದಂತೆ ದುಪ್ಪಟ್ಟಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
