ತುಮಕೂರು:ಶಿಕ್ಷಕಿಯೊಬ್ಬರು ಶಾಲೆಗೆ ಮದ್ಯಪಾನ ಮಾಡಿಕೊಂಡು ಬರುತ್ತಿದ್ದುದಲ್ಲದೆ, ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದು ಹಾಗೂ ಇತರ ಶಿಕ್ಷಕರಿಗೆ ತೊಂದರೆ ಕೊಡುತ್ತಿರುವುದು ಕೂಡ ನಡೆಯುತ್ತಿದೆ. ಕೊನೆಗೂ ಆಕೆ ಮದ್ಯದ ಬಾಟಲಿ ಸಹಿತ ಸಿಕ್ಕಿಹಾಕಿಕೊಂಡಿದ್ದು, ಅಮಾನತುಗೊಳಿಸಲಾಗಿದೆ.
ತುಮಕೂರು ತಾಲೂಕಿನ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಕರಣ ನಡೆದಿದ್ದು, ಇಲ್ಲಿನ ಶಿಕ್ಷಕಿ ಗಂಗಲಕ್ಷಮ್ಮ ಎಂಬಾಕೆ ನಿತ್ಯವೂ ಮದ್ಯಪಾನ ಮಾಡಿಕೊಂಡು ಬರುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಮದ್ಯದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದು, ಇತರ ಶಿಕ್ಷಕರಿಗೆ ತೊಂದರೆ ಕೊಡುವುದು ಮಾಡುತ್ತಿದ್ದಳೆಂಬ ಆರೋಪವೂ ಇದೆ.
ಕಳೆದ 25 ವರ್ಷಗಳಿಂದ ಈ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬಿಇಒ ಹನುಮನಾಯ್ಕ್ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಂಗಲಕ್ಷ್ಮಮ್ಮಳ ಕೊಠಡಿಯಲ್ಲಿ ಮದ್ಯದ ಒಂದು ಫುಲ್ ಬಾಟಲ್ ಮತ್ತು ಎರಡು ಖಾಲಿ ಬಾಟಲಿಗಳು ಸಿಕ್ಕಿವೆ. ಮೊದಲು ಡ್ರಾಯರ್ ಓಪನ್ ಮಾಡಲು ಆಕೆ ಅಡ್ಡಿಪಡಿಸಿದ್ದಳು. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಡ್ರಾಯರ್ ಬೀಗ ಒಡೆದು ತೆಗೆದಾಗ ಮದ್ಯದ ಬಾಟಲಿ ಸಿಕ್ಕಿದೆ. ಮಧ್ಯದ ಬಾಟಲಿ ಪತ್ತೆಯಾಗುತಿದ್ದಂತೆ ಆತ್ಮಹತ್ಯೆಯ ಡ್ರಾಮಾ ಮಾಡಿದ ಶಿಕ್ಷಕಿ, ಶಾಲೆ ಕೊಠಡಿಯ ಬಾಗಿಲು ಹಾಕಿಕೊಂಡು ಬೆದರಿಕೆಯೊಡ್ಡಿದ್ದಳು. ಬಳಿಕ ಶಿಕ್ಷಣ ಇಲಾಖೆ ಚಿಕ್ಕಸಾರಂಗಿಯ ಇಬ್ಬರು ಶಿಕ್ಷಕಿಯರನ್ನು ಅಮಾನತುಗೊಳಿಸಿದೆ.
ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆ ಮತ್ತಷ್ಟು ಜೋರು; ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

ಕತ್ತಿಯಿಂದ ಕುತ್ತಿಗೆ ಕಡಿದು ಅತ್ತಿಗೆಯ ಕೊಲೆ; ಆರೋಪಿ ಮೈದುನ ಪರಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − one =
Remember me
