ಬಾಗಲಕೋಟೆ:ಡೆತ್​ನೋಟ್ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ಮೂಗನೂರು ಗ್ರಾಮದಲ್ಲಿ ಸಂಭವಿಸಿದೆ.
ಹನುಮಂತ ಪೂಜಾರ(42) ಮೃತ ದುರ್ದೈವಿ. ಇವರು ಕಮತಗಿ ಪಟ್ಟಣದ ಹೊಳೆಹುಚ್ಚೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮನೆಯಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿರುವ ಹನುಮಂತ ಪೂಜಾರ, ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದಾರೆ. ಅದರಲ್ಲಿ ತನ್ನ ಸಾವಿಗೆ ಯಾರು ಕಾರಣ ಎಂದೂ ವಿವರಿಸಿದ್ದಾರೆ. ಅದರ ಡಿಟೇಲ್ಸ್​ ಇಲ್ಲಿದೆ.ಇದನ್ನೂ ಓದಿರಿಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!
‘ನನ್ನ ಸಾವಿಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ವಾಪಸ್​ ಕೇಳಿದರೆ ಕೊಟ್ಟಿಲ್ಲ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಶಿಕ್ಷಕ ಹನುಮಂತ ಪೂಜಾರ ವಿವರಿಸಿದ್ದಾರೆ. ಜತೆಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿಯ ಫೋನ್​ ನಂಬರ್​ ಅನ್ನೂ ನಮೂದಿಸಿದ್ದಾರೆ.
ಕಮತಗಿ ಪಟ್ಟಣದಲ್ಲಿ ಸೈಟ್ ಖರೀದಿಸಲು ಶಿಕ್ಷಕ ಹನುಮಂತ ‌ಮುಂದಾಗಿದ್ದರು. ತಿಮ್ಮಣ್ಣ ಹಗೆದಾಳ ಬಳಿ ಸೈಟ್​ ಖರೀದಿಸಲು 13 ಲಕ್ಷ ರೂಪಾಯಿಗೆ ಮಾತುಕತೆ ಆಗಿತ್ತು. ಮುಂಗಡವಾಗಿ ಹನುಮಂತ ಅವರು 3 ಲಕ್ಷ ರೂ. ಕೊಟ್ಟಿದ್ದರು. ಬಳಿಕ ಹಣ ವಾಪಸ್​ ಕೇಳಿದರೆ ತಿಮ್ಮಣ್ಣ ಕೊಟ್ಟಿರಲಿಲ್ಲವಂತೆ. ಇದೇ ವಿಚಾರವಾಗಿ ಮನನೊಂದ ಶಿಕ್ಷಕ ಸಾವಿನ ಮನೆಯ ಕದ ತಟ್ಟಿದ್ದಾರೆ. ಅಮೀನಗಢ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!

ಪತ್ನಿಯ ಕುಟುಂಬಸ್ಥರಿಂದಲೇ ಗಂಡನ ಹತ್ಯೆ! ಪ್ರೀತಿಯ ಗಂಡನ ಬರ್ತ್​ ಡೇ ಸಂಭ್ರಮದಲ್ಲಿದ್ದವಳಿಗೆ ಆಘಾತ…

ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
