ಬೆಂಗಳೂರು:ರಸ್ತೆಯಲ್ಲಿನ ಗುಂಡಿಯಿಂದಾಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ವಾಹನ ಸಾಗಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಮಾಗಡಿ‌ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಶರ್ಮಿಳಾ ಸಾವಿಗೀಡಾಗಿದ್ದು, ಅವರ ಪತಿ ಪ್ರಕಾಶ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..
ಶರ್ಮಿಳಾ-ಪ್ರಕಾಶ್ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಂಜನನಗರ ಬಳಿ ಈ ಅವಘಡ ಉಂಟಾಗಿದೆ. ರಸ್ತೆಯಲ್ಲಿ ಪೈಪ್​ಲೈನ್​ ಕಾಮಗಾರಿಗೆಂದು ಅಗೆದು ಗುಂಡಿ ಉಂಟಾಗಿದ್ದು, ಅದನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ದ್ವಿಚಕ್ರವಾಹನ ಆಯತಪ್ಪಿದ್ದು, ಆಕೆ ಕೆಳಕ್ಕೆ ಬಿದ್ದಿದ್ದಾರೆ. ಅವರ ಮೇಲೆ ಬೊಲೆರೊ ವಾಹನ ಸಾಗಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಕಾನ್​ಸ್ಟೆಬಲ್ ಹೆಂಡತಿ ಆತ್ಮಹತ್ಯೆ: ಪೊಲೀಸ್​ ವಸತಿಗೃಹದಲ್ಲೇ ನೇಣಿಗೆ ಶರಣು
ಈಕೆ ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿಯೊಂದಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗುಂಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಬಿದ್ದ ತಹಸೀಲ್ದಾರ್​; ಆತ್ಮಹತ್ಯೆ ಮಾಡಿಕೊಂಡ ಚಾಲಕ!

ಸಂಚಾರ ಪೊಲೀಸರು ಮಾಡಿದ ಈ ಕೆಲಸಕ್ಕೆ ಜನರು ಏನಂದ್ರು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
