ಬೆಂಗಳೂರು:ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್​-2 ಹುದ್ದೆಗೆ ಪದೋನ್ನತಿ ಪಡೆಯಲು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮಾತ್ರ ಅರ್ಹರು ಎಂಬ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರಿ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ಕೆಎಟಿ ತೀರ್ಪು ಅನುಷ್ಠಾನವಾಗಲೇಬೇಕೆಂದು ಹೋರಾಟ ನಡೆಸಲು ರಾಜ್ಯ ಪದವೀಧರ ಹಿರಿಯ ಪ್ರಾಥಮಿಕ ಶಿಕ್ಷಕರ ಸಂಘ ಸಜ್ಜಾಗಿದೆ.
ಎರಡೂ ಸಂಘಟನೆಗಳ ಪರ-ವಿರೋಧದಿಂದಾಗಿ ಶಿಕ್ಷಣ ಇಲಾಖೆ ಸಂದಿಗ್ಧ ಸ್ಥಿತಿಗೆ ಸಿಲುಕಿದೆ. ವೖಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಯಾರಿಗೆ ಬಡ್ತಿ ಹೊಂದಲು ಅರ್ಹತೆ ಇದೆ ಎಂಬುದನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಡಲು ಚಿಂತನೆ ನಡೆಸುತ್ತಿದೆ. ಕೆಎಟಿ ತೀರ್ಪು ಐತಿಹಾಸಿಕ. ಇದನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕೆಂದು ರಾಜ್ಯ 6-8ನೇ ತರಗತಿಗೆ ಬೋಧಿಸುವ ಪದವೀಧರ ಶಿಕ್ಷಕರ ಸಂಘದ ವಾದ. ಕೆಎಟಿ ಆದೇಶದಿಂದ ಸಾವಿರಾರು ಶಿಕ್ಷಕರಿಗೆ ಅನ್ಯಾಯವಾಗಿದೆ ಎನ್ನುವುದು ರಾಜ್ಯ ಸರ್ಕಾರಿ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರತಿವಾದ.
ಕೆಎಟಿ ಆದೇಶ ಜಾರಿಯಾದರೆ ಈಗಾಗಲೇ ಬಡ್ತಿ ಪಡೆದಿರುವ 8 ಸಾವಿರ ಶಿಕ್ಷಕರು ಹಿಂಬಡ್ತಿ ಪಡೆಯಬೇಕಾಗುತ್ತದೆ. ಇದು ಕೇವಲ ವೇತನದ ವಿಚಾರ ಮಾತ್ರವಲ್ಲ, ಗೌರವ ಪ್ರತಿಷ್ಠೆಯ ವಿಚಾರವಾಗಿದೆ.
ಹಿಂಬಡ್ತಿ ಆತಂಕ ಬೇಡ
8 ಸಾವಿರ ಶಿಕ್ಷಕರ ಹಿಂಬಡ್ತಿಗೆ ಅವಕಾಶ ನೀಡುವುದಿಲ್ಲ. ಈ ವಿಚಾರವಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶಿಕ್ಷಕರು ಆತಂಕಪಡುವುದು ಬೇಡ. ಕೆಎಟಿ ಆದೇಶದ ಬಗ್ಗೆ ನ್ಯಾಯಾಲಯದಲ್ಲಿಯೂ ಮೇಲ್ಮನವಿ ಸಲ್ಲಿಸಿ ಈ ವಿಷಯವನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 1967ರಿಂದಲೂ ವೃಂದ ಮತ್ತು ನಿಯಮಗಳು ಜಾರಿಯಲ್ಲಿವೆ. ಕಾನೂನುಬದ್ಧವಾಗಿಯೇ ಬಡ್ತಿ ಕೊಡಲಾಗಿದೆ.
| ಸುರೇಶ್ ಕುಮಾರ್ ಶಿಕ್ಷಣ ಸಚಿವ
ಸಿಆರ್ ನಿಯಮ ಸರ್ಕಾರಕ್ಕೆ ಪ್ರಸ್ತಾವನೆ
ರಾಜ್ಯ ಶಿಕ್ಷಣ ಇಲಾಖೆಯು ವೖಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಬಡ್ತಿ ನೀಡಲು ಅವಕಾಶ ಇದೆ ಎಂದು ಹೇಳುತ್ತದೆ. ಪದೋನ್ನತಿ ನೀಡುವ ವೇಳೆ ಪಿಎಸ್​ಟಿ ಮತ್ತು ಪಿಜಿಟಿ ಶಿಕ್ಷಕರಿಗೆ ಯಾವ ರೀತಿಯಲ್ಲಿ ಸೇವಾ ಹಿರಿತನ ಪರಿಗಣಿಸಬೇಕೆಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸ್ಪಷ್ಟನೆ ಕೇಳಲಾಗಿದೆ. ಇದಕ್ಕೆ ಪರೀಕ್ಷೆ ಮಾಡಿ ಅರ್ಹತೆ ನೀಡಬೇಕೋ, ಇಲ್ಲವೇ ನೇರ ನೇಮಕಾತಿಯಲ್ಲಿ ಶೇ.50 ನೀಡಬೇಕೋ ಎಂಬ ಬಗ್ಗೆ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಸರ್ಕಾರದ ಹಂತದಲ್ಲಿ ತೀಮಾನ ಮಾಡಿ ಆನಂತರ ಕೋರ್ಟ್​ಗೆ ಸಲ್ಲಿಸಬೇಕಾಗುತ್ತದೆ. ಯಾರೇ ಕೋರ್ಟ್​ಗೆ ಹೋದರೂ, ಸರ್ಕಾರವನ್ನು ಪ್ರತಿವಾದಿ ಮಾಡುವುದರಿಂದ ವಾದ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ವಿಜಯವಾಣಿಗೆ ಖಚಿತ ಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 3 =
Remember me
