ಹಾವೇರಿ:ಮನೆ ಪಾಠಕ್ಕೆಂದು ಬರುತ್ತಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಶಿಕ್ಷಕನೊಬ್ಬ ತನ್ನ ಲೈಂಗಿಕ ತೃಷಿ ತೀರಿಸಿಕೊಳ್ಳಲು ಬಳಸಿಕೊಂಡಿದ್ದು, ಅವಳೀಗ ಗರ್ಭಿಣಿಯಾಗಿದ್ದಾಳೆ. ಸದ್ಯದಲ್ಲೇ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಬರೆಯಲು ಅವಳಿಗೆ ಸಾಧ್ಯವಿಲ್ಲದಂತಾಗಿದೆ.
ಈ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ನಡೆದಿದೆ. ಕೃತ್ಯ ಎಸಗಿರುವ ಶಿಕ್ಷಕನನ್ನು ಪ್ರವೀಣ್ ಮರಿಯಣ್ಣನವರ್ ಎಂದು ಗುರುತಿಸಲಾಗಿದೆ. ಶಿಗ್ಗಾವಿ ತಾಲೂಕು ಅಂದಲಗಿಯವನಾದ ಈತ ನಗರದ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕನಾಗಿದ್ದಾನೆ.ಇದನ್ನೂ ಓದಿಲವ್​ ಮಾಕ್ಟೇಲ್​ 2 ಚಿತ್ರದ ಸ್ಕ್ರಿಪ್ಟ್​ ಪೂಜೆ ಆಯ್ತು!
ಕಳೆದ ಜನವರಿ ತಿಂಗಳಲ್ಲಿ ಗಣಿತ ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯ ಮನೆಗೆ ಬಂದಿದ್ದ ಈತ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ಆತನ ಬೆದರಿಕೆಯಿಂದಾಗಿ ಈ ವಿಷಯವನ್ನು ವಿದ್ಯಾರ್ಥಿನಿ ಮುಚ್ಚಿಟ್ಟಿದ್ದಳೆನ್ನಲಾಗಿದೆ.
ಆಕೆ ಚಿಕಿತ್ಸೆಗಾಗಿ ಜೂನ್ 17ರಂದು ಆಸ್ಪತ್ರೆಗೆ ಹೋದಾಗ ಆಕೆ ಗರ್ಭಿಣಿ ಇರುವುದು ವೈದ್ಯರಿಗೆ ಗೊತ್ತಾಗಿದೆ. ನಂತರ ಪಾಲಕರಿಗೆ ವಿಷಯ ತಿಳಿದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ
ಕರೊನಾ ಇದೆಯೆಂದು ಮುಜುಗರ: ಪಿಯುಸಿ ಪರೀಕ್ಷೆಯಿಂದಲೇ ದೂರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
