ಬೆಂಗಳೂರು:4ನೇ ತರಗತಿ ವಿದ್ಯಾರ್ಥಿಗೆ 23 ಬಾರಿ ಕಪಾಳಮೋಕ್ಷ(Slapping)ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕಿ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿ | ಪ್ರಯಾಣಿಕರನ್ನು ಬಿಟ್ಟು ಹೋದ ರೈಲು; ಕ್ಷಮೆ ಕೇಳಿದ ಸ್ಟೇಷನ್ ಮ್ಯಾನೇಜರ್
ಬಾಲಕನ ಪೋಷಕರು ನೀಡಿರುವ ಮಾಹಿತಿ ಅನುಸಾರ, ಶಾಲೆಯ ಶಿಕ್ಷಕಿ ನಮ್ಮನ್ನು ಭೇಟಿ ಮಾಡಬೇಕೆಂದು ತಮ್ಮ ಮಗನ ಬಳಿ ಹೇಳಿ ಕಳುಹಿಸಿದ್ದರು, ಇದಕ್ಕೆ ನಾವು ಬರಹದ ಮೂಲಕ ಹೇಳಲು ಹೇಳಿದ್ದೆವು. ಆದ್ರೆ, ಇದಕ್ಕೆ ಕೋಪಗೊಂಡು ಶಿಕ್ಷಕಿ ಮಗುವಿಗೆ ಮನಬಂದಂತೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ:ವಿದ್ಯಾರ್ಥಿಗೆ ನೀನು ಸರಿಯಾಗಿ ಹೊಂ ವರ್ಕ್ ಮಾಡುವುದಿಲ್ಲ ಎಂದು ನಿಮ್ಮ ತಂದೆ-ತಾಯಿಗೆ ಹೇಳಬೇಕು. ಅವರನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾರೆ. ಇದನ್ನು ಬಾಲಕ ತನ್ನ ಪೋಷಕರಿಗೆ ತಿಳಿಸಿದಾಗ, ನಿಮ್ಮ ಶಿಕ್ಷಕಿಗೆ ಬರಹದ ಮೂಲಕ ನಮಗೆ ಬರುವುದಕ್ಕೆ ಹೇಳು ಎಂದು ಹೇಳಿ ಕಳುಹಿಸಿದ್ದಾರೆ. ಮರು ದಿನ ತಂದೆ-ತಾಯಿ ಹೇಳಿದಂತೆ ಶಿಕ್ಷಕಿಗೆ ವಿದ್ಯಾರ್ಥಿ ತಿಳಿಸಿದ್ದಾನೆ. ಇದಕ್ಕೆ ಕೆಂಡಾಮಂಡಲವಾದ ಶಿಕ್ಷಕಿ ಬಾಲಕನ ಕಪಾಳಕ್ಕೆ 23 ಬಾರಿ ಹೊಡೆದಿದ್ದಾರೆ.
ಇದನ್ನೂ ಓದಿ:ನಿಷೇಧಿತ ಸಂಘಟನೆಗೆ ಬೆಂಬಲ: ಪಿಎಫ್‌ಐ ಜಿಂದಾಬಾದ್ ಸ್ಟಿಕ್ಕರ್ ಪತ್ತೆ
ಸದ್ಯ ಪೋಷಕರ ದೂರಿನ ಅನ್ವಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 − three =
Remember me
