ಬೆಂಗಳೂರು:ವರ್ಗಾವಣೆ ನಿರೀಕ್ಷೆಯಲ್ಲಿರುವ ಸರ್ಕಾರಿ ಶಾಲೆ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಏಪ್ರಿಲ್​ನಲ್ಲೇ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸೋಮವಾರ ವಿಧಾನಸಭೆಯಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ, 2020’ ಪರ್ಯಾಲೋಚನೆ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್​ಕುಮಾರ್ ಈ ವಿಚಾರ ಪ್ರಸ್ತಾಪಿಸಿದರು.
ಹೊಸ ವಿಧೇಯಕಕ್ಕೆ ವಿಧಾನ ಪರಿಷತ್​ನಿಂದಲೂ ಒಪ್ಪಿಗೆ ಪಡೆದು, ರಾಜ್ಯಪಾಲರಿಂದ ಸಹಿ ಆಗಿ ಏಪ್ರಿಲ್​ನಲ್ಲೇ ವರ್ಗಾವಣೆ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ, ಜೂನ್ ಒಳಗೆ ಎಲ್ಲ ಪ್ರಕ್ರಿಯೆ ಮುಗಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು. ಹೊಸ ಕಾಯ್ದೆಯ ಅನಿವಾರ್ಯತೆ ಪ್ರಸ್ತಾಪಿಸಿದ ಅವರು, ‘ಕಡ್ಡಾಯ ನಿವೃತ್ತಿ’, ‘ಕಡ್ಡಾಯ ರಜೆ’ ಶಿಕ್ಷೆ ರೂಪದ್ದಾಗಿದೆ. ಅದೇ ರೀತಿ ‘ಕಡ್ಡಾಯ ವರ್ಗಾವಣೆ’ ಸರಿಯಲ್ಲ ಎಂದರು.
ವರ್ಗಾವಣೆ ಶಿಕ್ಷೆ ರೂಪದಲ್ಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಶಿಕ್ಷಕರು ನೀಡಿದ್ದರು. ಈ ಕಾರಣಕ್ಕೆ ಕೆಲವು ಮಾರ್ಪಾಡು ಮಾಡಿ ಶಿಕ್ಷಕಸ್ನೇಹಿ ಹೊಸ ವರ್ಗಾವಣೆ ನೀತಿ ತಂದಿರುವುದಾಗಿ ಹೇಳಿದರು. ಶಿಕ್ಷಕರು ಖುಷಿಯಿಂದ ಕೆಲಸ ಮಾಡಬೇಕು, ಕಡ್ಡಾಯ ವರ್ಗಾವಣೆ ರೂಪದಲ್ಲಿ ಒತ್ತಡಕ್ಕೆ ಸಿಲುಕಿಸಿದರೆ ಮಕ್ಕಳಿಗೆ ನಷ್ಟವಾಗುತ್ತದೆ. ಜತೆಗೆ ನಿವೃತ್ತಿ ಅಂಚಿನಲ್ಲಿರುವವರನ್ನು ಕಡ್ಡಾಯ ವರ್ಗಾವಣೆ ಎಂದು ದೂರದೂರುಗಳಿಗೆ ನಿಯೋಜನೆ ಮಾಡಿದರೆ ಅವರಿಗೂ ಹಿಂಸೆ. ಇದೆಲ್ಲವನ್ನೂ ಗಮನಿಸಿ ಶಿಕ್ಷಕಸ್ನೇಹಿ ನಿರ್ಧಾರ ಮಾಡಲಾಗಿದೆ. ಹೊಸದಾಗಿ ನೇಮಕಗೊಳ್ಳುವವರಿಗೆ ಕಡ್ಡಾಯವಾಗಿ ಸಿ ವಲಯದಲ್ಲೇ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಶಿಕ್ಷಕ ವರ್ಗಾವಣೆಗೆ ಅರ್ಹನಾಗಬೇಕೆಂದರೆ 3 ವರ್ಷ ಒಂದು ಶಾಲೆಯಲ್ಲಿ ಕೆಲಸ ಮಾಡಿರಬೇಕಾಗುತ್ತದೆ. ಅತಿ ದೀರ್ಘಕಾಲ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ನಗರ ಪ್ರದೇಶದ ಶಾಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕಾಗಿದೆ. ಈ ಕಾರಣಕ್ಕೆ 10 ವರ್ಷ ಸಿ ವಲಯದಲ್ಲಿ ಕೆಲಸ ಮಾಡಿದವರಿಗೆ ನಗರ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸುರೇಶ್​ಕುಮಾರ್ ತಿಳಿಸಿದರು.
50 ವರ್ಷ ದಾಟಿದ ಶಿಕ್ಷಕಿಯರು ಮತ್ತು 55 ವರ್ಷ ದಾಟಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗುತ್ತದೆ. ಕೊನೇ ಹಂತದ ಕಾಯಿಲೆ, ತೀವ್ರ ಅನಾರೋಗ್ಯ ಹೊಂದಿದ ಶಿಕ್ಷಕ ಅಥವಾ ಆತನ ಪತ್ನಿ, ಶಿಕ್ಷಕಿಯ ಪತಿ ಅಥವಾ ಮಕ್ಕಳು, ಕಾರ್ಯನಿರ್ವಹಿಸುತ್ತಿರುವ ತಾಲೂಕಿನೊಳಗೆ ಚಿಕಿತ್ಸೆ ಲಭ್ಯವಿಲ್ಲದೇ ಇದ್ದರೆ, 12 ವರ್ಷ ಒಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ವಿಧುರ, ವಿಚ್ಛೇದಿತ ಶಿಕ್ಷಕ, ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದ ಒಳಗಿನ ಮಗುವನ್ನು ಹೊಂದಿರುವ ಶಿಕ್ಷಕಿಗೆ ವಿನಾಯಿತಿ ಸಿಗಲಿದೆ ಎಂದು ಸುರೇಶ್​ಕುಮಾರ್ ವಿವರಿಸಿದರು.
#IndiaFightsCorona: ಕರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟವನ್ನು ಟ್ವೀಟ್ ಮೂಲಕ ಎತ್ತಿಹಿಡಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
